ಸ್ಟೇಷನರಿ ವಸ್ತುಗಳಿಂದಲೇ ಹೆಸರುವಾಸಿಯಾಗಿರುವ ಸುದೀರ್ಘ 44 ವರ್ಷಗಳ ಐತಿಹ್ಯ ಹೊಂದಿದ್ದ ಹೊಸಂಗಡಿ "ನವೀನ್ ಸ್ಟೋರ್" ಮಾಲಕ ಕೆ. ಕೃಷ್ಣ ಶೆಟ್ಟಿಗಾರ್ (78) ನಿಧನ.
ಮಾರ್ಚ್ 03, 2024
0
ಸ್ಟೇಷನರಿ ವಸ್ತುಗಳಿಂದಲೇ ಹೆಸರುವಾಸಿಯಾಗಿರುವ ಸುದೀರ್ಘ 44 ವರ್ಷಗಳ ಐತಿಹ್ಯ ಹೊಂದಿದ್ದ ಹೊಸಂಗಡಿ "ನವೀನ್ ಸ್ಟೋರ್" ಮಾಲಕ ಕೆ. ಕೃಷ್ಣ ಶೆಟ್ಟಿಗಾರ್ (78) ನಿಧನ.
ಮಂಜೇಶ್ವರ: ಸಿಪಿಐ (ಎಂ) ನ ಹಿರಿಯ ಕಾರ್ಯಕರ್ತ, ಕರ್ಷಕ ಸಂಘದ ಅನುಯಾಯಿ, ಹೊಸಂಗಡಿ ರಾಮತ್ತಮಜಾಲ್ ಸಾರ್ವಜನಿಕ ರುಧ್ರಭೂಮಿ ಸಮಿತಿಯ ಪದಾಧಿಕಾರಿ, ಹೊಸಂಗಡಿ "ನವೀನ್ ಸ್ಟೋರ್" ನ ಮಾಲಕ ಕೆ. ಕೃಷ್ಣ ಶೆಟ್ಟಿಗಾರ್ (78) ಹೃದಯಾಘಾತಗೊಂಡು ನಿನ್ನೆ ರಾತ್ರಿ ಕುಂಬಳೆಯ ಆಸ್ಪತ್ರೆಗೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಾಗಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಇಂದು ಬೆಳಿಗ್ಗೆ 11:30ಕ್ಕೆ ನಿಧನರಾದರು. ಮೃತರು ಪತ್ನಿ ಪ್ರೇಮಲತಾ ಟೀಚರ್, ಮಕ್ಕಳಾದ: ದಯಾಕರ, ಸುಪ್ರಿಯ, ಸೊಸೆ: ಸುಜಾತ, ಅಳಿಯ: ಜಗನ್ನಾಥ ಚೆನ್ನೈ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಕಳೆದ 44 ವರ್ಷಗಳಿಂದ ಹೊಸಂಗಡಿ ರೈಲ್ವೆ ಗೇಟ್ ಬಳಿ ಕಾರ್ಯಾಚರಿಸುತ್ತಿರುವ "ನವೀನ್ ಸ್ಟೋರ್" ನಾಮಂಕಿತದ ಬುಕ್ ಸ್ಟೇಷನರಿ ಸಂಸ್ಥೆಯ ಮಾಲಕರಾಗಿದ್ದರು. ಮೃತದೇಹವನ್ನು ನಾಳೆ ಬೆಳಿಗ್ಗೆ 8 ಗಂಟೆಗೆ ಮನೆಗೆ ತರಲಾಗುವುದು. 11 ಗಂಟೆಗೆ ರಾಮತ್ತ ಮಜಾಲ್ ಸಾರ್ವಜನಿಕರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ಕೃಷ್ಣಶೆಟ್ಟಿಗಾರ್ ರ ನಿಧನಕ್ಕೆ ಸಿಪಿಎಂ ಮಂಜೇಶ್ವರ ಮಂಡಲ ಸಮಿತಿ, ಸಿಪಿಐ ಮಂಜೇಶ್ವರ ಮಂಡಲ ಸಮಿತಿ, ಸಿಪಿಎಂ ನೇತಾರ ಕೆ. ಆರ್ ಜಯಾನಂದ, ಎಲ್.ಡಿ.ಎಫ್ ಲೋಕಸಭಾ ಅಭ್ಯರ್ಥಿ ಎಂ.ವಿ ಬಾಲಕೃಷ್ಣ ಮಾಸ್ಟರ್, ಮಾಜಿ ಶಾಸಕ ಸಿ. ಎಚ್ ಕುಂಞಿoಬು, ಮಾಜಿ ಕಂದಾಯ ಸಚಿವ ಇ .ಚಂದ್ರಶೇಖರನ್, ಸಿಪಿಐ ಮಂಜೇಶ್ವರ ಮಂಡಲ ಸಮಿತಿ, ಲೋಕಲ್ ಸಮಿತಿ ಡಿವೈಎಫ್ಐ ಮಂಜೇಶ್ವರ ಬ್ಲಾಕ್ ಸಮಿತಿ, ಎ ಐ ವೈ ಎಫ್ ಮಂಜೇಶ್ವರ ಮಂಡಲ ಸಮಿತಿ ಸಾರ್ವಜನಿಕ ರುದ್ರಭೂಮಿ ಸಮಿತಿ ರಾಮತ್ತ ಮಜಾಲ್ ಗಾಢವಾದ ಸಂತಾಪ ಸೂಚಿಸಿದ್ದಾರೆ.