ಕುಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಸಂಪನ್ನ. ನೂತನ ಕಛೇರಿ ಕೊಠಡಿ ಉದ್ಘಾಟನೆ.
ಮಾರ್ಚ್ 03, 2024
0
ಕುಂಬಳೆ ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಸಂಪನ್ನ. ನೂತನ ಕಛೇರಿ ಕೊಠಡಿ ಉದ್ಘಾಟನೆ.
ಕುಂಬಳೆ: ಅನಂತಪುರ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವ ಜರುಗಿತು. ದೇವಸ್ಥಾನದ ತಂತ್ರಿ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಹಬ್ಬದ ನಿಮಿತ್ತ ನವೀಕರಿಸಿದ ನೂತನ ಕಚೇರಿ ಕೊಠಡಿಯನ್ನು ದೇಲಂಪಾಡಿ ಗಣೇಶ್ ತಂತ್ರಿಗಳವರು ತಮ್ಮ ದಿವ್ಯ ಹಸ್ತದಿಂದ ಭದ್ರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕ್ಷೇತ್ರದ ಚೆಯರ್ ಮೇನ್ ಅಧ್ಯಕ್ಷ ಕುಶಾಲಪ್ಪ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ಸುನೀಲ್ ಕುಮಾರ್, ಆಡಳಿತ ಮಂಡಳಿ ಸದಸ್ಯರಾದ ಜಯಪ್ರಕಾಶ್, ಸತೀಶ್ ಕುಂಬಳೆ, ಹರೀಶ್ ಮತ್ತು ಪ್ರಸಾದ್ ಉಪಸ್ಥಿತರಿದ್ದರು.