ಗಡಿನಾಡ ಕನ್ನಡತಿ ಶ್ರೀಮತಿ ಶೋಭಾ ಶರ್ಮ ಮುಳ್ಳೇರಿಯಾರವರ ಚೊಚ್ಚಲ ಕವನ ಸಂಕಲನ 'ನಲಿವು ಒಲವು ಗೆಲವು' ಈ ತಿಂಗಳ 6 ರಂದು ಬೆಂಗಳೂರು ಪುಸ್ತಕ ಪ್ರಾಧಿಕಾರದಲ್ಲಿ ಬಿಡುಗಡೆ.
ಮಾರ್ಚ್ 04, 2024
0
ಗಡಿನಾಡ ಕನ್ನಡತಿ ಶ್ರೀಮತಿ ಶೋಭಾ ಶರ್ಮ ಮುಳ್ಳೇರಿಯಾರವರ ಚೊಚ್ಚಲ ಕವನ ಸಂಕಲನ 'ನಲಿವು ಒಲವು ಗೆಲವು' ಈ ತಿಂಗಳ 6 ರಂದು ಬೆಂಗಳೂರು ಪುಸ್ತಕ ಪ್ರಾಧಿಕಾರದಲ್ಲಿ ಬಿಡುಗಡೆ.
ಮುಳ್ಳೆರಿಯಾ: ಗಡಿನಾಡ ಕನ್ನಡತಿ ಶ್ರೀಮತಿ ಶೋಭಾ ಶರ್ಮರ ಚೊಚ್ಚಲ ಕವನ ಸಂಕಲನ 'ನಲಿವು ಒಲವು ಗೆಲವು' ನಾಡಿದು 6 ನೇ ತಾರೀಕಿನಂದು ಬುಧವಾರ ಬೆಳಗ್ಗೆ 10 ಕೆ ಬೆಂಗಳೂರು ಪುಸ್ತಕ ಪ್ರಾಧಿಕಾರದಲ್ಲಿ ಬಿಡುಗಡೆಯಾಗಲಿದೆ. ಇವರ 60 ಕವನಗಳು ಪ್ರಾಧಿಕಾರದಿಂದ ಆಯ್ಕೆಯಾಗಿದ್ದು ರೂ 15 ಸಾವಿರ ನಗದು ಬಹುಮಾನವನ್ನು ಪಡೆದು ಚೊಚ್ಚಲ ಕವನಸಂಕಲನ 'ನಲಿವು ಒಲವು ಗೆಲವು' ಇದೀಗ ಬಿಡುಗಡೆಯ ಹಂತ ತಲುಪಿದೆ. ಗಡಿನಾಡ ಕಾಸರಗೋಡಿನ ಮುಳ್ಳೇರಿಯ ಸಮೀಪದ ಬೇಂಗತಡ್ಕದ ಶೋಭಾ ಶರ್ಮರು ಎಂ.ಕಾಂ ಪದವೀಧರೆಯಾಗಿದ್ದು, ಪ್ರಸ್ತುತ ಅಂತರ್ಜಾಲದಲ್ಲಿ 30 ಜನ ದೇಶ ವಿದೇಶದ ಮಕ್ಕಳಿಗೆ ಕನ್ನಡ ಪಾಠ ಕಲಿಸುವ ಜನಪ್ರಿಯ ಶಿಕ್ಷಕಿ. ಇವರು ಮುಳ್ಳೇರಿಯ ದೇಲಂಪಾಡಿ ಎಂಟರ್ಪ್ರೈಸಸ್ ನ ಮಾಲೀಕರಾದ ಮಲ್ಲಿಕಾರ್ಜುನ ಶರ್ಮರ ಧರ್ಮಪತ್ನಿಯಾಗಿದ್ದಾರೆ.