ಭೂಮಿ ರಿಜಿಸ್ಟ್ರೇಷನ್ ವ್ಯವಸ್ಥೆಯನ್ನು ಚಿದ್ರಗೊಳಿಸುವ ಟೆಂಪ್ಲೆಟ್ ಸಿಸ್ಟಂಗೆ ಎದುರಾಗಿ ಕೇರಳ ರಾಜ್ಯದಾದ್ಯಂತ ದಸ್ತಾವೇಜು ಬರಹಗಾರರ ರಾಜ್ಯ ವ್ಯಾಪಿ ಮುಷ್ಕರ. ಮಂಜೇಶ್ವರ ಘಟಕದಿಂದ ರಿಜಿಸ್ಟ್ರಿ ಕಚೇರಿ ಮುಂಭಾಗ ಧರಣಿ.
ಮಾರ್ಚ್ 16, 2024
0
ಭೂಮಿ ರಿಜಿಸ್ಟ್ರೇಷನ್ ವ್ಯವಸ್ಥೆಯನ್ನು ಚಿದ್ರಗೊಳಿಸುವ ಟೆಂಪ್ಲೆಟ್ ಸಿಸ್ಟಂಗೆ ಎದುರಾಗಿ ಕೇರಳ ರಾಜ್ಯದಾದ್ಯಂತ ದಸ್ತಾವೇಜು ಬರಹಗಾರರ ರಾಜ್ಯ ವ್ಯಾಪಿ ಮುಷ್ಕರ.
ಮಂಜೇಶ್ವರ ಘಟಕದಿಂದ ರಿಜಿಸ್ಟ್ರಿ ಕಚೇರಿ ಮುಂಭಾಗ ಧರಣಿ.
ಮಂಜೇಶ್ವರ: ಶತ ಶತಮಾನಗಳಿ
ಂದಲೂ ರಿಜಿಸ್ಟ್ರೇಷನ್ ಕಾನೂನುಗಳನ್ನು ಪಾಲಿಸಿಕೊಂಡು ಶ್ರದ್ಧಾಪೂರ್ವಕವಾಗಿ ಭೂಮಿ ದಾಖಲೆಗಳನ್ನು ತಯಾರಿಸುತ್ತಿರುವ ಕಾರ್ಮಿಕವರ್ಗವನ್ನು ಈ ಕ್ಷೇತ್ರದಿಂದ ಸಂಪೂರ್ಣವಾಗಿ ಹೊರತುಪಡಿಸಿಕೊಂಡು ಸಾರ್ವಜನಿಕರ ಭೂ ದಾಖಲೆಗಳ ಸುರಕ್ಷೆಗೆ ಧಕ್ಕೆಯುಂಟಾಗುವ ರೀತಿಯಲ್ಲಿ ಕೇರಳ ಸರ್ಕಾರ ಜ್ಯಾರಿಗೊಳಿಸುವ ಪರಿಷ್ಕಾರಗಳಿಗೆದುರಾಗಿ ಕೇರಳ ದಸ್ತಾವೇಜು ಬರಹಗಾರರ ಅಸೋಸಿಯೇಷನಿನ ನೇತೃತ್ವದಲ್ಲಿ ಇಂದು ಕೇರಳ ರಾಜ್ಯದಾದ್ಯಂತ ಎಲ್ಲಾ ಸಬ್ ರಿಜಿಸ್ಟ್ರಾರ್ ಆಫೀಸುಗಳ ಮುಂಭಾಗದಲ್ಲಿ ಮುಷ್ಕರ ನಡೆಯಿತು. ಅದರಂತೆ ಸಂಘಟನೆಯ ಮಂಜೇಶ್ವರ ಘಟಕದ ಆಶ್ರಯದಲ್ಲಿ ಇಂದು ಬೆಳಗ್ಗೆ ಮಂಜೇಶ್ವರದಲ್ಲಿ ಧರಣಿ ಮುಷ್ಕರ ನಡೆಸಲಾಯಿತು. ಈ ವೇಳೆ ಅಸೋಶಿಯೇಷನ್ ನ ಎಲ್ಲಾ ಮುಷ್ಕರಗಳಿಗೂ ಸರ್ವ ರೀತಿಯಲ್ಲಿ ಸಹಕರಿಸುತ್ತಿದ್ದ ಅಗಲಿದ ಹಿರಿಯ ಸಿಪಿಐ ನಾಯಕ ಶ್ರೀ ಬಿ. ವಿ. ರಾಜನ್ ರವರಿಗೆ ಶ್ರದ್ಧಾಂಜಲಿ ಕೂಡಾ ಅರ್ಪಿಸಲಾಯಿತು. ಅಸೋಶಿಯೇಷನ್ ನ ಜಿಲ್ಲಾ ಉಪಾಧ್ಯಕ್ಷರಾದ ರಾಜೇಶ್ ಪೈ ಧರಣಿಯನ್ನು ಉದ್ಘಾಟಿಸಿದರು. ಜಿಲ್ಲಾ ಉಪದೇಶಕ ಸಮಿತಿ ಸದಸ್ಯ ಸಿ. ಎಚ್. ಗಣೇಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಧರಣಿಯನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಮಂಜೇಶ್ವರ ಸಬ್ ರಿಜಿಸ್ಟ್ರಾರ್ ಕಚೇರಿಯ ಪರಿಸರದಲ್ಲಿರುವ ಎಲ್ಲಾ ದಸ್ತಾವೇಜು ಬರಹಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡು, ನೇತೃತ್ವ ನೀಡಿದರು.