ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸಂಕಬೈಲು ಸತೀಶ ಅಡಪ್ಪ ನೇಮಕ.
ಮಾರ್ಚ್ 16, 2024
0
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸಂಕಬೈಲು ಸತೀಶ ಅಡಪ್ಪ ನೇಮಕ.
ಮಂಜೇಶ್ವರ: ಯಕ್ಷಗಾನ ಕಲಾವಿದ, ಸಂಘಟಕ ಹಾಗೂ ನಾಟಕ ಕಲಾವಿದ, ಯಕ್ಷಗಾನ ಚಟುವಟಿಕೆಯ 'ಯಕ್ಷ ಬಳಗ ಹೊಸಂಗಡಿ' ಇದರ ಸಂಚಾಲಕರಾಗಿ ಕಳೆದ 35 ವರ್ಷಗಳಿಂದ ಗಡಿನಾಡಿನಲ್ಲಿ ಯಕ್ಷಗಾನ ಉಳಿಸುವ, ಬೆಳೆಸುವ ಪ್ರಯತ್ನ ಮಾಡಿದ ಸಂಕಬೈಲು ಸತೀಶ ಅಡಪ್ಪರವರನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರನ್ನಾಗಿ ಕರ್ನಾಟಕ ಸರಕಾರ ನೇಮಕ ಮಾಡಿದೆ. ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸದಸ್ಯ, ಪಾರ್ತಿ ಸುಬ್ಬ ಯಕ್ಷಗಾನ ಅಕಾಡೆಮಿ, ಕೇರಳ ಸರಕಾರ ಇದರ ಕಾರ್ಯದರ್ಶಿ, ಕೇರಳ ವ್ಯಾಪಾರಿ ವ್ಯಯಸಾಯಿ ಏಕೋಪನ ಸಮಿತಿ ಇದರ ಉಪ್ಪಳ ವಲಯ ಅಧ್ಯಕ್ಷ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ,ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಕಾರ್ಯಕಾರಿ ಸಮಿತಿ ಸದಸ್ಯ, ಕಡಂಬಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಇದರ ಸೇವಾ ಸಮಿತಿಯಲ್ಲಿ ಸಕ್ರಿಯರಾಗಿರುವ ಸತೀಶ ಅಡಪ್ಪ ಯಕ್ಷಗಾನ ಸಂಘಟಕರಾಗಿದ್ದಾರೆ.