ಸಿಪಿಐ ಪಕ್ಷದ ಹಿರಿಯ ಮುಂದಾಳು ಸಬ್ಬಯ್ಯಕಟ್ಟೆ ನಿವಾಸಿ ಎಸ್.ಅಚ್ಚುತ ರಾವ್ (84) ನಿಧನ.
ಮಾರ್ಚ್ 17, 2024
0
ಸಿಪಿಐ ಪಕ್ಷದ ಹಿರಿಯ ಮುಂದಾಳು ಸಬ್ಬಯ್ಯಕಟ್ಟೆ ನಿವಾಸಿ ಎಸ್.ಅಚ್ಚುತ ರಾವ್ (84) ನಿಧನ.
ಪೈವಳಿಕೆ: ಸಿಪಿಐ ಪಕ್ಷದ ಹಿರಿಯ ಮುಂದಾಳು, ಕಮ್ಯುನಿಸ್ಟ್ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೆರ್ಮುದೆ ಬಳಿಯ ಸುಬ್ಬಯ್ಯಕಟ್ಟೆ ನಿವಾಸಿ ಆಚುತ್ತ ರಾವ್ (84) ನಿಧನರಾದರು. ಸುಬ್ಬಯ್ಯಕಟ್ಟೆ ಬ್ರಾಂಚ್ ನಲ್ಲಿ 42 ವರ್ಷಗಳ ಕಾಲ ಪೋಸ್ಟ್ ಮಾಸ್ಟರ್ ಆಗಿ ಕಾರ್ಯ ನಿರ್ವಹಿಸಿದ್ದ ಇವರು ಸಿಪಿಐ ಪಕ್ಷದ ಸುಬ್ಬಯ್ಯಕಟ್ಟೆ ಬ್ರಾಂಚ್ ಕಾರ್ಯದರ್ಶಿ, ಸಿಪಿಐ ಪಕ್ಷದ ಪೈವಳಿಕೆ ಲೋಕಲ್ ಕಾರ್ಯದರ್ಶಿ, ಶ್ರೀ ವಿಷ್ಣುಮೂರ್ತಿ ಒತ್ತೆಕೋಲ ಕುಂಟಗೇರಡ್ಕ ಸೇವಾ ಸಮಿತಿ, ಸುಬ್ಬಯ್ಯಕಟ್ಟೆ ಭಾಗಕ್ಕೆ ಬಸ್ಸುಗಳು ಬರಲು ವ್ಯವಸ್ಥೆ, ಪರಿಸರ ನಿವಾಸಿಗಳಿಗೆ ವಿದ್ಯುತ್ ವ್ಯವಸ್ಥೆ ಬರಲು ಪ್ರಮುಖ ಪಾತ್ರ ವಹಿಸಿದ್ದರು. ಇವರ ನಿಧನಕ್ಕೆ ಶಾಸಕ ಇ. ಚಂದ್ರಶೇಖರನ್, ಸಿಪಿಐ ರಾಜ್ಯ ಸಹ ಕಾರ್ಯದರ್ಶಿ, ಸಿಪಿಐ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ಗೋವಿಂದನ್ ಪಳ್ಳಿಕಾಪಿಲ್, ಟಿ. ಕೃಷ್ಣನ್, ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ವಿ ಕೃಷ್ಣನ್, ಮಂಡಲ ಕಾರ್ಯದರ್ಶಿ ಜಯರಾಮ್ ಬಲ್ಲಂಗುಡೇಲ್, ಜಿಲ್ಲಾ ಸಮಿತಿ ಸದಸ್ಯರಾದ ಎಸ್. ರಾಮಚಂದ್ರ, ರಾಮಕೃಷ್ಣ ಕಡಂಬಾರ್, ಅಜಿತ್ ಎಂ. ಸಿ ಲಾಲ್ಬಾಗ್, ಮಂಡಲ ಸೆಕ್ರೆಟರಿ ಸದಸ್ಯ ಲಾರೆನ್ಸ್ ಡಿಸೋಜಾ, ಮಂಡಲ ಕಮಿಟಿ ಲೋಕಲ್ ಕಾರ್ಯದರ್ಶಿ ಕೇಶವ.ಬಿ, ಮಂಡಲ ಸಮಿತಿ ಸದಸ್ಯರಾದ ಹರೀಶ್ ಕೆ.ಆರ್, ಸುನಿತ ವಾಲ್ಟಿ, ರೇಖಾ ಚಿಪ್ಪಾರ್ ಲೋಕಲ್ ಸಮಿತಿ ಸದಸ್ಯರಾದ ಸಂಜೀವ ಶೆಟ್ಟಿ, ಮೂಸಾ ಕುಮ್ಮೇರಿ, ಅಶ್ವತ್ ಎಮ್. ಸಿ, ರವಿ ಮೊಂತೆರೋ, ಚನಿಯ ಕೊಮಂಗಳ, ವಿಜಯಕುಮಾರ್ ಪೆರ್ಮುದೆ, ಈಶ್ವರ ನಾಯಕ್, ಉದಯ ಕುಮಾರ್ ಶೆಟ್ಟಿ ಕರಿಬೈಲು, ಸಿ.ಪಿ.ಐ.ಎಂ ಪಕ್ಷದ ಕೆ.ಆರ್ ಜಯಾನಂದ, ಪಿ.ವಿ ರಮೇಶನ್, ಸುಬ್ಬಣ್ಣ ಆಳ್ವ, ಅಬ್ದುಲ್ ರಜಾಕ್ ಚಿಪ್ಪರ್, ಬಿ.ಎಂ ಬಷೀರ್, ಅಶೋಕ್ ಬಂಡಾರಿ, ಬಿ.ಎ ಖಾದರ್ ಕಾಯಿಚ್ಚ, ಹರೀಶ್ ಬೊಟ್ಟಾರಿ, ಅತ್ಯುತ್ತ ಚೇವಾರ್ ಮೊದಲಾದವರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದರು.
ಮೃತರ ನಿಧನಕ್ಕೆ ಸಿಪಿಐ ಮಂಡಲ ಕಮಿಟಿ, ಲೋಕಲ್ ಕಮಿಟಿ, ಸಿಪಿಐ ಸುಬ್ಬಯ್ಯಕಟ್ಟೆ ಬ್ರಾಂಚ್ ಸಮಿತಿ, ಎ. ಐ.ವೈ, ಎಫ್ ಪೈವಳಿಕೆ ವಲಯ ಸಮಿತಿ ಗಾಢವಾದ ಸಂತಾಪ ಸೂಚಿಸಿದ್ದಾರೆ. ಮೃತರ ಪತ್ನಿ ರಾಜೀವಿ ಈ ಹಿಂದೆ ನಿಧನರಾಗಿದ್ದಾರೆ. ಮಕ್ಕಳಾದ ಪ್ರಕಾಶ್ ಚಂದ್ರ, ಶಶಿಧರ, ಅನಿತಾ ಕುಮಾರಿ, ಸೊಸೆಯಂದಿರು ಅಳಿಯ ಹಾಗೂ ಅಪಾರ ಬಂಧು ಬಳಗವನ್ನಗಳಿದ್ದಾರೆ. ಮೃತರ ಮಕ್ಕಳ ಪೈಕಿ ರವಿಕುಮಾರ್ ರಾಜಕುಮಾರ್ ಈ ಹಿಂದೆ ನಿದರಾಗಿದ್ದಾರೆ.