ಇತ್ತೀಚೆಗೆ ಅಗಲಿದ ತುಳುನಾಡಿನ ಸಿಪಿಐ ಪಕ್ಷದ ಧೀಮಂತ ನಾಯಕರಿಗೆ ಪೆರ್ಮುದೆಯಲ್ಲಿ ಸರ್ವ ಪಕ್ಷ ಸಂತಾಪ ಸೂಚಕ.
ಮಾರ್ಚ್ 19, 2024
0
ಇತ್ತೀಚೆಗೆ ಅಗಲಿದ ತುಳುನಾಡಿನ ಸಿಪಿಐ ಪಕ್ಷದ ಧೀಮಂತ ನಾಯಕರಿಗೆ ಪೆರ್ಮುದೆಯಲ್ಲಿ ಸರ್ವ ಪಕ್ಷ ಸಂತಾಪ ಸೂಚಕ.
ಪೈವಳಿಕೆ: ಇತ್ತೀಚೆಗೆ ನಿಧನರಾದ ಸಿಪಿಐ ಪಕ್ಷದ ತುಳುನಾಡಿನ ಇಬ್ಬರು ಧೀರ ನೇತಾರರಾದ ಕಾಂ. B.V ರಾಜನ್ ಹಾಗೂ S ಅಚ್ಚುತರಾವ್ ಸುಬ್ಬಯ್ಯಕಟ್ಟೆ ಯವರ ಗೌರವಾರ್ಥ ಪೆರ್ಮುದೆಯಲ್ಲಿ ನಡೆದ ಸರ್ವಪಕ್ಷ ಸಂತಾಪ ಸೂಚಕ ಸಭೆಯು ಸಿಪಿಐ ಪೆರ್ಮುದೆ ಬ್ರಾಂಚ್ ಹಾಗೂ ಸುಬ್ಬಯ್ಯ ಕಟ್ಟೆ ಬ್ರಾಂಚ್ ಆಶ್ರಯದಲ್ಲಿ ಇಂದು ನಡೆಯಿತು. ವಿಜಯಕುಮಾರ್ ಪೆರ್ಮುದೆಯವರ ಆಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ರಾಮಕೃಷ್ಣ ಕಡಂಬಾರು, ಸಿಪಿಎಂ ಜಿಲ್ಲಾ ಕಾರ್ಯಕಾರಿ ಸದಸ್ಯರಾದ K.R ಜಯಾನಂದ, ಸಿಪಿಐ ಜಿಲ್ಲಾ ಕಮಿಟಿ ಸದಸ್ಯ ಅಜಿತ್ ಎಂ. ಸಿ ಲಾಲ್ ಭಾಗ್ ಪೈವಳಿಕೆ ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷರು ಹಿರಿಯ ಪತ್ರಕರ್ತರೂ ಆದ ಅಚ್ಯುತ ಚೇವಾರು, ಮುಸ್ಲಿಂ ಲೀಗಿನ ನೇತಾರರಾದ ಶಂಸುದ್ದೀನ್ ಕಂಬಾರು, ಪೈವಳಿಕೆ ಗ್ರಾಮ ಪಂಚಾಯತು ಸದಸ್ಯರಾದ ಕಾಮ್ರೆಡ್ ಅಶೋಕ ಭಂಡಾರಿ, ಇರ್ಷಾಣ ಇಸ್ಮಾಯಿಲ್, ಸಿಪಿಐ ಲೋಕಲ್ ಕಾರ್ಯದರ್ಶಿ ಕೇಶವ ಬಾಯಿಕಟ್ಟೆ, ಲೋಕಲ್ ಜತೆ ಕಾರ್ಯದರ್ಶಿ ಅಶ್ವಥ್ ಲಾಲ್ ಭಾಗ್, ಸಿಪಿಎಂ ಲೋಕಲ್ ಸದಸ್ಯರಾದ BA ಖಾದರ್, BA ಲತೀಪ್, ಬಿ.ಜೆ. ಪಿ ಕಾರ್ಯಕರ್ತ ಗುರುವ ಕುಂಡೇರಿ, ಕಾಂಗ್ರೇಸ್ ಕಾರ್ಯಕರ್ತ ಸಂತೋಷ್ ಮಂತೇರೋ, ಹಿರಿಯ ಅಧ್ಯಾಪಕರಾದ ಶಂಕರ ಕಾಮತ್ ಚೇವಾರು, S D P H S S ಧರ್ಮತ್ತಡ್ಕ ಶಾಲಾ PTA ಅಧ್ಯಕ್ಷರಾದ ಶಿವಪ್ರಸಾದ್ ಶೆಟ್ಟಿ ಕುಡಾಲು S Y S ನೇತಾರರಾದ ಖಾದರ್ ಪೆರಿಯಡ್ಕ ಮೊಹಮ್ಮದ್ ಅಲಿ ಪೆರ್ಮುದೆ , C.P I ಪೈವಳಿಕೆ ಬ್ರಾಂಚ್ ಕಾರ್ಯದರ್ಶಿ ರವಿ ಮಂತೇರೊ ಮೊದಲಾದವರು ಭಾಗವಹಿಸಿ ಅಗಲಿದ ಚೇತನಗಳಿಗೆ ನುಡಿನಮನದ ಶ್ರದ್ಧಾಂಜಲಿ ಸಲ್ಲಿಸಿದರು. ಬ್ರಾಂಚ್ ಕಾರ್ಯದರ್ಶಿ ಈಶ್ವರ ನಾಯ್ಕ್ ಧನ್ಯವಾದ ನೀಡಿದರು