Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

ಮಂಜೇಶ್ವರ ಎಸ್. ಎ. ಟಿ ಶಾಲೆಗೆ "ಲಿಟಲ್ ಕೈಟ್ಸ್ ಪ್ರಶಸ್ತಿ".

ಮಂಜೇಶ್ವರ ಎಸ್. ಎ. ಟಿ ಶಾಲೆಗೆ "ಲಿಟಲ್ ಕೈಟ್ಸ್ ಪ್ರಶಸ್ತಿ".
ಮಂಜೇಶ್ವರ: ಮಂಜೇಶ್ವರ ಎಸ್ ಎ ಟಿ ಶಾಲೆಯು ಜಿಲ್ಲೆಯ ಅತ್ಯುತ್ತಮ ಲಿಟಲ್ ಕೈಟ್ಸ್ ಪ್ರಶಸ್ತಿ ತನ್ನದಾಗಿಸಿ ಕೊಂಡಿದೆ. ಜಿಲ್ಲಾ ಮಟ್ಟದಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಶಾಲೆ ಅತ್ಯುತ್ತಮ ಲಿಟಲ್ ಕೈಟ್ಸ್ ಘಟಕವಾಗಿ ಹೊರಹೊಮ್ಮಿದೆ. ಚಟ್ಟ0ಚಾಲ್ ಸಿ ಎ ಎಚ್ ಎಸ್ ಪ್ರಥಮ ಮತ್ತು ತಚ0ಗಾಡ್ ಜಿ ಎಚ್ ಎಸ್ ದ್ವಿತೀಯ ಸ್ಥಾನ ಪಡೆದಿವೆ. ಕೇರಳ ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯೋಜನೆ ಅಂಗವಾಗಿ ಶಾಲೆಗಳಿಗಾಗಿ ಜಾರಿಗೆ ತಂದಿರುವ ಹೈ ಟೆಕ್ ಸ್ಕೂಲ್ ಯೋಜನೆಯ ಅಂಗವಾಗಿ 120 ಲಿಟಲ್ ಕೈಟ್ಸ್ ಘಟಕಗಳು ರಾಜ್ಯದಲ್ಲಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಾಧುನಿಕ ತರಬೇತಿಯು ಆಯ್ದ ಲಿಟಲ್ ಕೈಟ್ಸ್ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಶಾಲೆಗಳಲ್ಲಿ ಲಭ್ಯವಾಗುತ್ತದೆ. ಸೈಬರ್ ಭದ್ರತೆಯ ಕುರಿತಾದ ವಿಶೇಷ ತರಬೇತಿ ಸಹ ಇದರಲ್ಲಿ ಒಳಗೊಂಡಿದೆ. ಪ್ರಥಮ ದ್ವಿತೀಯ ತೃತೀಯ ಸ್ಥಾನಿಗಳಿಗೆ ಕ್ರಮವಾಗಿ 30000, 25000 ಮತ್ತು 15000 ನಗದು ಪ್ರಶಸ್ತಿ ದೊರೆಯಲಿದೆ. ಜುಲೈ 6 ರಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕೈಟ್ಸ್ ಮುಖ್ಯಸ್ಥ ಅನ್ವರ್ ಸಾದಿಕ್ ಮಾಹಿತಿ ಹಂಚಿಕೊಂಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries