ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ. ಕೇರಳದಿಂದ ಸುರೇಶ್ ಗೋಪಿ ಹಾಗೂ ಜಾರ್ಜ್ ಕುರಿಯನ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ. ಬಿಜೆಪಿ ವಿವಿಧೆಡೆ ಸಂಭ್ರಮಾಚರಣೆ.
ಜೂನ್ 10, 2024
0
ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ. ಕೇರಳದಿಂದ ಸುರೇಶ್ ಗೋಪಿ ಹಾಗೂ ಜಾರ್ಜ್ ಕುರಿಯನ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರ. ಬಿಜೆಪಿ ವಿವಿಧೆಡೆ ಸಂಭ್ರಮಾಚರಣೆ.
ಮಂಜೇಶ್ವರ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ಮಂಡಲ ವ್ಯಾಪ್ತಿಯ ವಿವಿಧ ಕಡೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ವಹಿಸಿದಕ್ಕೆ ಹಾಗೂ ಕೇರಳದಿಂದ ಸುರೇಶ್ ಗೋಪಿ ಹಾಗೂ ಜಾರ್ಜ್ ಕುರಿಯನ್ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕಾರವನ್ನು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಸಂತಸದಿಂದ ಆಚರಿಸಿದರು. ಬಿಜೆಪಿ ವತಿಯಿಂದ ಮಂಜೇಶ್ವರ ಹೊಸಂಗಡಿಯಲ್ಲಿ, ಮಿಂಜ ಮಿಯಾಪದವು ಪೇಟೆಯಲ್ಲಿ, ಮಜೀರ್ ಪಲ್ಲ, .ಮೊರತ್ತನೆಯಲ್ಲಿ, ಬಾಯರ್ ಪದವಿನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಮೆರವಣಿಗೆ ಮಾಡಿ ಬಿಜೆಪಿ ಕಾರ್ಯಕರ್ತರು ಸಂಭ್ರಮವನ್ನು ಆಚರಿಸಿದರು.
ಮಂಡಲಧ್ಯಕ್ಷ ಆದರ್ಶ್ ಬಿ ಎಂ, ಮುಖಂಡರಾದ ಯತೀರಾಜ್ ಶೆಟ್ಟಿ, ಹರೀಶ್ಚಂದ್ರ ಮಂಜೇಶ್ವರ
ನ್ಯಾ ನವೀನ್ ರಾಜ್, ಕೆವಿ ಭಟ್, A.K ಕೈಯಾರ್, ತುಳಸಿ ಕುಮಾರಿ, ನಿಶಾ ಭಟ್, ರಾಜ್ ಕುಮಾರ್, ದೂಮಪ್ಪ ಶೆಟ್ಟಿ, ಪದ್ಮನಾಭ ಕಡಪರ, ನಾರಾಯಣ ನಾಯ್ಕ್, ವೇಣು ಬಾಯರ್, ಸದಾಶಿವ ಚೇರಲ್, ಮೊದಲಾದವರು ನೇತೃತ್ವ ನೀಡಿದರು.
ಭಾರತೀಯ ಜನತಾ ಪಕ್ಷದ ದೈಗೋಳಿ ಘಟಕದ ನೇತೃತ್ವದಲ್ಲಿ ದೈಗೊಳಿಯಲ್ಲಿ ಮೆರವಣಿಗೆ ಮಾಡಿ ಸುಡುಮದ್ದು ಸಿಡಿಸಿ ಸಿಹಿತಿಂಡಿ ಹಂಚುವ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಸಂತೋಷ್ ಕುಮಾರ್ ಶೆಟ್ಟಿ ದೈಗೋಳಿ , ಬಾ.ವಿ ಸುರೇಶ್, ಶಂಕರನಾರಾಯಣ ಭಟ್ ಸಾದಂಗಯ, ಧರ್ಮರಾಜ್ , ಲಂಬೋದರ ಕಯರಡ್ಕ, ಸತ್ಯನಾರಾಯಣ ಭಟ್ ಪಜ್ವ , ಸುಂದರ ದೈಗೋಳಿ , ಹರೀಶ್ ಬೋರ್ಕಳ ನೇತೃತ್ವ ನೀಡಿದರು.