ಧಾರ್ಮಿಕ ಸಾಮಾಜಿಕ ಮುಂದಾಳು ಕಳಿಯೂರು ನಿವಾಸಿ ಮೋನಪ್ಪ ಪೂಜಾರಿ (68) ನಿಧನ.
ಜೂನ್ 11, 2024
0
ಧಾರ್ಮಿಕ ಸಾಮಾಜಿಕ ಮುಂದಾಳು ಕಳಿಯೂರು ನಿವಾಸಿ ಮೋನಪ್ಪ ಪೂಜಾರಿ (68) ನಿಧನ.
ಮೀಂಜ: ಧಾರ್ಮಿಕ ಸಾಮಾಜಿಕ ಮುಂದಾಳು ಮಜೀರ್ಪಳ್ಳ ಬಳಿಯ ಕಳಿಯೂರು ನಿವಾಸಿ ಮೋನಪ್ಪ ಪೂಜಾರಿ (68) ಅಲ್ಪ ಕಾಲದ ಆಸೌಖ್ಯದಿಂದ ಬಳಲುತ್ತಿದ್ದ ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ನಿಧನರಾದರು. ಮೃತರು ಬಡಗಿ ವೃತ್ತಿಯ ಕಾಯಕದಲ್ಲಿದ್ದು, ದಿ. ಬಂಟಪ್ಪ ಪೂಜಾರಿ ಮತ್ತು ದಿ. ಲಕ್ಷ್ಮೀ ದಂಪತಿಗಳ ಪುತ್ರನಾಗಿದ್ದು, ಪತ್ನಿ ಶ್ರೀಮತಿ ಶಶಿಕಲಾ ಮಕ್ಕಳಾದ ಶಮಿನ್ ರಾಜ್, ಶ್ರೀಮತಿ ಸೌಮ್ಯಲತಾ, ಮಿಥುನ್ ರಾಜ್, ಅಳಿಯ ಶರತ್ ಪೂಜಾರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರು ವರ್ಕಾಡಿ, ಮಂಜೇಶ್ವರ, ಮೀಂಜ ಪರಿಸರದ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಚಟುವಟಿಕೆ, ದೇವಸ್ಥಾನ, ಭಜನಾ ಮಂದಿರಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಾ ಜನಪ್ರಿಯರಾಗಿದ್ದರು. ಮೃತರ ನಿಧನಕ್ಕೆ ಶ್ರೀ ಸತ್ಯನಾರಾಯಣ ಭಜನಾ ಮಂದಿರ ಕೋಳ್ಯೂರುಪದವು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರ ವರ್ಕಾಡಿ ಸುಂಕದಕಟ್ಟೆ, ಶ್ರೀ ರಕ್ತೇಶ್ವರಿ ಭಜನಾ ಮಂದಿರ ಕಳಿಯೂರು, ಶ್ರೀ ಅಯ್ಯಪ್ಪ ಭಜನಾ ಮಂದಿರ ಸುಂಕದಕಟ್ಟೆ, ಶ್ರೀ ನಾರಾಯಣ ಗುರು ಮಂದಿರ ಸುಂಕದಕಟ್ಟೆ, ಓಂಕಾರ್ ಶಾಖೆ ಕೋಳ್ಯೂರು ಹಾಗೂ ಸಂಘ ಪರಿವಾರ ತೀವ್ರ ಸಂತಾಪ ಸೂಚಿಸಿದೆ.