ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಮೊಸಳೆ ಮರಿ ಮೊದಲ ಬಾರಿಗೆ ಪ್ರತ್ಯಕ್ಷ ದರ್ಶನ.
ಜೂನ್ 15, 2024
0
ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಾಲಯದ ಮೊಸಳೆ ಮರಿ ಮೊದಲ ಬಾರಿಗೆ ಪ್ರತ್ಯಕ್ಷ ದರ್ಶನ.
ಕುಂಬಳೆ: ಸರೋವರ ಕ್ಷೇತ್ರವೆಂದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಕುಂಬಳೆ ಬಳಿಯ ಅನಂತಪುರ ಶ್ರೀ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ತಿಂಗಳುಗಳ ಹಿಂದೆ ಪ್ರತ್ಯಕ್ಷಗೊಂಡ ನೂತನ ಮೊಸಳೆ ಮರಿ ಇದೇ ಮೊದಲ ಬಾರಿಗೆ ಇಂದು ಸಂಜೆ ಕ್ಷೇತ್ರ ಪ್ರಾಂಗಣ ಏರಿದೆ.! ಗರ್ಭಗುಡಿ ಹತ್ತಿರವೇ ವಿಶ್ರಾಂತಿ ಪಡೆದಿದೆ. ಈ ಹೊತ್ತಿಗೆ ಕ್ಷೇತ್ರ ನಡೆ ಮುಚ್ಚಿತ್ತು. ಸಂಜೆ ಕ್ಷೇತ್ರ ನಡೆತೆರೆದ ಅರ್ಚಕರಿಗೆ ಈ ಭವ್ಯ ದೃಶ್ಯ ಗೋಚರವಾಗಿದ್ದು ಅವರಿದನ್ನು ಮೊಬೈಲಿನಲ್ಲಿ ಸೆರೆ ಹಿಡಿದು ಭಕ್ತಿ, ಭಾವುಕತೆಯಿಂದ ಹಂಚಿದ್ದಾರೆ...! ಈ ಹಿಂದೆ ಬಬಿಯಾ ಎಂಬ ಮೊಸಳೆಯಿದ್ದು ಅದು ದೈವೈಕ್ಯವಾದ ನಂತರ ಕ್ಷೇತ್ರದಲ್ಲಿ ಕಾರಣಿಕವೆಂಬಂತೆ ಮತ್ತೊಂದು ಮೊಸಳೆ ಕಾಣಿಸಿಕೊಂಡಿದ್ದು ಇದೀಗ ಭಕ್ತರಿಗೆ ಪ್ರತ್ಯಕ್ಷ ದರುಶನವಾಗಿದೆ.