ಆನೆಗುಂದಿ ಶ್ರೀಗಳ 20 ನೇ ಚಾತುರ್ಮಾಸ್ಯ ಪೂರ್ವಭಾವಿ ಆಮಂತ್ರಣ ಪತ್ರಿಕೆ ಬಿಡುಗಡೆ. ಹಾಗೂ ಹಳೆಯಂಗಡಿ ಶ್ರೀ ದುರ್ಗಾ ಪರಮೇಶ್ವರೀ ವಿನಾಯಕ ಮಠ ಮತ್ತು ಪಡುಪಣಂಬೂರು ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನಕ್ಕೆ ಭೇಟಿ ನೀಡುವುದರೊಂದಿಗೆ ಶ್ರೀಗಳ "ಕ್ಷೇತ್ರ ಸಂದರ್ಶನ" ಆರಂಭ.
ಜೂನ್ 14, 2024
0
ಆನೆಗುಂದಿಶ್ರೀಗಳ ಚಾತುರ್ಮಾಸ್ಯ ಪೂರ್ವಭಾವಿ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಕ್ಷೇತ್ರ ಸಂದರ್ಶನ ಆರಂಭ.
ಪಡುಕುತ್ಯಾರು: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ, ಕಟಪಾಡಿ ಪಡುಕುತ್ಯಾರು
ಪೀಠಾಧೀಶ್ವರರಾದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ
20 ನೇ ವರ್ಷದ ಕ್ರೋಧಿ ಸಂವತ್ಸರದ ಚಾತುರ್ಮಾಸ್ಯ ವ್ರತಾಚರಣೆ
2024 ಜುಲೈ 21ರಿಂದ ಸೆಪ್ಟಂಬರ್ 18 ರ ತನಕ ಪಡುಕುತ್ಯಾರು
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ನಡೆಯಲಿದ್ದು, ಚಾತುರ್ಮಾಸ್ಯ ಪೂರ್ವಭಾವೀ ಕ್ಷೇತ್ರ ಸಂದರ್ಶನವು ಇಂದು
ಪಡುಕುತ್ಯಾರು ಮಹಾಸಂಸ್ಥಾನದಲ್ಲಿ ಚಾತುರ್ಮಾಸ್ಯ ಆಮಂತ್ರಣವನ್ನು ಆನೆಗುಂದಿ ಶ್ರೀಗಳವರು ಬಿಡುಗಡೆಗೊಳಿಸುವುದರ ಮೂಲಕ ಆರಂಭಗೊಂಡಿತು.
ಚಾತುರ್ಮಾಸ್ಯ ವೃತ ನಿರ್ವಹಣಾ ಸಮಿತಿ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರ ಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ. ಬಿ ಆಚಾರ್ ಕಂಬಾರು, ನ್ಯಾಯವಾದಿ ಕೆ. ಪ್ರಭಾಕರ ಆಚಾರ್ಯ ಕೋಟೆಕಾರು, ಜಿ.ಟಿ ಆಚಾರ್ಯ ಮುಂಬೈ, ಕಾಡಬೆಟ್ಟು ನಾಗರಾಜ ಆಚಾರ್ಯ, ಬಿ ಸೂರ್ಯಕುಮಾರ್ ಹಳೆಯಂಗಡಿ, ದಿನೇಶ್ ಆಚಾರ್ಯ ಪಡುಬಿದ್ರಿ, ಕನ್ಯಾನ ಜನಾರ್ದನ ಆಚಾರ್ಯ, ಸಂಧ್ಯಾ ಲಕ್ಷ್ಮಣ ಆಚಾರ್ಯ ಉಡುಪಿ, ದಯಾನಂದ ಆಚಾರ್ಯ ಕೆಳಾರ್ಕಳ ಬೆಟ್ಟು, ಯೋಗೀಶ್ ಆಚಾರ್ಯ ಕರಂಬಳ್ಳಿ, ಬಿ.ಯೋಗಿಶ್ ಆಚಾರ್ಯ ಕೊಯಂಬತ್ತೂರು, ಪುರುಷೋತ್ತಮ ಆಚಾರ್ಯ ಪುತ್ತೂರು, ವಿಶುಕುಮಾರ್ ಆಚಾರ್ಯ ಉಚ್ಚಿಲ, ಶುಭ ಪುರುಷೋತ್ತಮ ಪುತ್ತೂರು, ರಮಾ ನವೀನ್ ಕಾರ್ಕಳ, ಲೋಲಾಕ್ಷ ಶರ್ಮ ಪಡುಕುತ್ಯಾರು ಮುಂತಾದವರು ಉಪಸ್ಥಿತರಿದ್ದರು. ನಂತರ
ಶ್ರೀ ದುರ್ಗಾ ಪರಮೇಶ್ವರೀ ವಿನಾಯಕ ಮಠ ಹಳೆಯಂಗಡಿ ಮತ್ತು
ಶ್ರೀ ನಾಲ್ಕೂರು ಪಂಜುರ್ಲಿ ದೈವಸ್ಥಾನ ಪಡುಪಣಂಬೂರುವನ್ನು ಆನೆಗುಂದಿ ಶ್ರೀಗಳವರು ಸಂದರ್ಶಿಸಿದರು. ಈ ವೇಳೆ ಕ್ಷೇತ್ರದ ಆಡಳಿತ ಸಮಿತಿ ಪೂರ್ಣಕುಂಭಗಳೊಂದಿಗೆ ಗುರುಗಳಿಗೆ ಸ್ವಾಗತ ನೀಡಿದರು. ಮುಂದಿನ ಕ್ಷೇತ್ರ ಸಂದರ್ಶನದ ವಿವರ (ಸ್ಥಳ -ಸಮಯ-ದಿನಾಂಕ) ಗಳೊಂದಿಗೆ ಈ ಕೆಳಗಿನಂತಿದೆ.
15/06/2024 ಶನಿವಾರ
ಶ್ರೀ ಕಾಳಿಕಾಂಬಾ ದೇವಸ್ಥಾನ ಹುಬ್ಬಳ್ಳಿ (4.00)
16/6/2024 ಭಾನುವಾರ
ಗದಗ (10.00)
ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ದಾರವಾಡ(5.00)
17/06/2024 ಸೋಮವಾರ
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಪಂಚಸಿಂಹಾಸನ ಸರಸ್ವತೀ ಪೀಠ ವಿಕಾಸ ಸಮಿತಿ ಆನೆಗುಂದಿ ( 11.00)
18/06/2024 ಮಂಗಳವಾರ
ಬಿಜಾಪುರ (10.00)
ಶ್ರೀ ಕಾಳಿಕಾಂಬಾ ದೇವಸ್ಥಾನ ಅಥಣಿ (4.00)
23/06/2024 ಭಾನುವಾರ
ನೆಲ್ಲಿಸ್ಥಳ ಶ್ರೀ ಕಾಳಿಕಾಂಬಾ ದೇವಸ್ಥಾನ ಕೋಟೆಕಾರು ( 11.00)
ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ಬಂಗ್ರಮಂಜೇಶ್ವರ (12.00)
28/06/2024 ಶುಕ್ರವಾರ
ಶ್ರೀ ಕಾಳಿಕಾಂಬಾ ದೇವಸ್ಥಾನ ಉಪ್ರಳ್ಳಿ( 10.00)
ಶ್ರೀ ಕಾಳಿಕಾಂಬಾ ದೇವಸ್ಥಾನ ಬಾರ್ಕೂರು(12.00)
30/06/2024 ಭಾನುವಾರ
ಶ್ರೀಮತ್ ಪರಶಿವ ವಿಶ್ವಕರ್ಮೇಶ್ವರ ದೇವಸ್ಥಾನ ಕಾಞಂಗಾಡು ( 10.00)
ಶ್ರೀ ಕಾಳಿಕಾಂಬಾ ಮಠ ಮಧೂರು (12.00)
ಕಾರ್ಳೆ ಶ್ರೀಕಾಳಿಕಾಂಬಾ ದೇವಸ್ಥಾನ ಕುಂಬಳೆ(4.00)
05/07/2024 ಶುಕ್ರವಾರ
ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ ಮೂಡಬಿದ್ರೆ (10.00)
ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನ ಕಾರ್ಕಳ ( 12.00)
07/07/2024 ಭಾನುವಾರ
ಶ್ರೀ ಕಾಳಿಕಾಂಬಾ ದೇವಸ್ಥಾನ ಕೊಲಕಾಡಿ (10.00)
ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ಮಂಗಳೂರು(12.00)
14/07/2024 ಭಾನುವಾರ
ಶ್ರೀ ಕಾಳಿಕಾಂಭಾ ದೇವಸ್ಥಾನ ಭಟ್ಕಳ (9.00)
ಶ್ರೀ ಕಾಳಿಕಾಂಬಾ ದೇವಸ್ಥಾನ ಗೋಕರ್ಣ (12.00)
ಶ್ರೀ ಮಹಾಕಾಳಿ ದೇವಸ್ಥಾನ ಅಂಕೋಲಾ ( 3.00)
ಶ್ರೀ ವಿಶ್ವಕರ್ಮ ಲೋಹ ಮಠ ಮಾಜಲಿ ಕಾರವಾರ ( 5.00)
16/07/2024 ಗುರುವಾರ
ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ ಕಟಪಾಡಿ (9.30)
ಶ್ರೀ ಕಾಳಿಕಾಂಬಾ ದೇವಸ್ಥಾನ ಕಾಪು (11.00)
ಕ್ಷೇತ್ರ ಸಂದರ್ಶನದ ವೇಳೆ ಸಂಬಂಧಪಟ್ಟ
ದೇವಸ್ಥಾನಗಳ ಧರ್ಮದರ್ಶಿಗಳು, ಮಹಾ ಸಂಸ್ಥಾನದ ಆನೆಗುಂದಿ ಪ್ರತಿಷ್ಠಾನ, ಅಸೆಟ್, ಗೋವು ಪರ್ಯಾವರಣ್ ಸಂರಕ್ಷಣ ಟ್ರಸ್ಟ್, ಆನೆಗುಂದಿ ಗುರು ಸೇವಾ ಪರಿಷತ್ತು, ಸರಸ್ವತಿ ಮಾತೃ ಮಂಡಳಿ ಇವುಗಳ ಪದಾಧಿಕಾರಿಗಳು ಜಗದ್ಗುರುಗಳವರನ್ನು ಅನುಗಮಿಸುವರು.
ಜಗದ್ಗುರುಗಳ ಕ್ಷೇತ್ರ ಸಂದರ್ಶನ ಸಂಚಾಲಕರಾಗಿರುವ
ಐ.ಲೋಲಾಕ್ಷ ಶರ್ಮಾ ಪಡುಕುತ್ಯಾರು, ( +91 97406 63327) ಇವರು ಯಾತ್ರೆಯ ಮಾಹಿತಿಯನ್ನು ಪಡೆಯಬಹುದಾಗಿದೆ.
ಜಗದ್ಗುರುಗಳವರ ಚಾತುರ್ಮಾಸ್ಯ ಪೂರ್ವಭಾವೀ ಕ್ಷೇತ್ರ ಸಂದರ್ಶನವನ್ನು ಯಶಸ್ವಿಗೊಳಿಸಬೇಕಾಗಿಯೂ, ಸಮಸ್ತ ಶಿಷ್ಯವೃಂದದವರು ತಮ್ಮ ಕ್ಷೇತ್ರಕ್ಕೆ ಜಗದ್ಗುರುಗಳವರು ಪಾದಾರ್ಪಣೆಗೈಯುವ ವೇಳೆ ಸಕುಟುಂಬ ಸಮೇತರಾಗಿ ಭಾಗವಹಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಕುಲಗುರುಗಳವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷರಾದ ಪಿ.ವಿ ಗಂಗಾಧರ ಆಚಾರ್ಯ ಉಡುಪಿ, ಅಧ್ಯಕ್ಷರಾದ ವಿ ಶ್ರೀಧರ ಆಚಾರ್ಯ ವಡೇರಹೋಬಳಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ ಬಿ ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ, ವಿನಂತಿಸಿದ್ದಾರೆ.