ಬಾಕುಡ ಸಮಾಜ ಕೇಂದ್ರ ಸಮಿತಿ ವತಿಯಿಂದ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಎಸ್ ಎಸ್ ಎಲ್ ಸಿ, ಪ್ಲಸ್ ಟು ಹಾಗೂ ಸ್ನಾತಕ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ.
ಜೂನ್ 13, 2024
0
ಬಾಕುಡ ಸಮಾಜ ಕೇಂದ್ರ ಸಮಿತಿ ವತಿಯಿಂದ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಎಸ್ ಎಸ್ ಎಲ್ ಸಿ, ಪ್ಲಸ್ ಟು ಹಾಗೂ ಸ್ನಾತಕ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ.
ಮಂಜೇಶ್ವರ: ಬಾಕುಡ ಸಮಾಜ ಕೇಂದ್ರ ಸಮಿತಿಯ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ಎಸ್ ಎಸ್ ಎಲ್ ಸಿ , ಪ್ಲಸ್ ಟು ಹಾಗೂ ಸ್ನಾತಕ, ಸ್ನಾತಕೋತ್ತರ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಹೊಸಂಗಡಿ ಪ್ರೇರಣಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬಾಕುಡ ಸಮುದಾಯದ ನಾಗಬ್ರಹ್ಮ ಹದಿನೆಂಟು ದೈವಸ್ಥಾನಗಳ ಸಮಿತಿಯ ಅಧ್ಯಕ್ಷರಾದ ಶಂಕರ ಅಡ್ಕ ನೆರವೇರಿಸಿದರು. ಸಮುದಾಯದ ಅಭಿವೃದ್ದಿಯಾಗಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು. ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯತ್ತ ಒಲವು ತೋರಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಹಿರಿಯರು ಮಕ್ಕಳನ್ನು ಸರಿಯಾದ ಮಾರ್ಗದರ್ಶನ ನೀಡಿ ಅವರ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿ ಅವರ ಗುರಿ ತಲುಪಲು ಸಹಾಯ ಮಾಡಿ ಕೊಟ್ಟು ಅವರು ಕೂಡ ಉತ್ತಮ ಮಟ್ಟಕ್ಕೆ ತಲುಪಲು ದಾರಿ ದೀಪವಾಗಿರಬೇಕು ಎಂದು ಹೇಳಿದರು. ಬಾಕುಡ ಸಮಾಜ ಕೇಂದ್ರ ಸಮಿತಿಯು ಇಂತಹ ಸಮಾಜಮುಖಿ ಕೆಲಸವನ್ನು ಕಳೆದ ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಇಂತಹ ಇನ್ನಷ್ಟು ಕಾರ್ಯಗಳು ನಿರಂತರವಾಗಿ ನಡೆಯಲಿ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷತೆ ಶ್ರೀಮತಿ ಸುಜಾತ .ಎಸ್ ಮಂಜೇಶ್ವರ ವಹಿಸಿದ್ದರು. ವಿದ್ಯಾರ್ಥಿಗಳನ್ನು ಸಮಾಜದ ಪ್ರಮುಖ ವಾಹಿನಿಗೆ ಕರೆ ತರಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ತಾವು ಮಾಡುತಿದ್ದೇವೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಂಡು ಬದುಕಿಗೊಂದು ಗುರಿ ಇಟ್ಟುಕೊಂಡು ಸಾಧನೆಗೆ ಮುಂದಾಗಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಸಮಾಜದ ಹಿರಿಯ ಮುಂದಾಳು ವಿಜಯಕುಮಾರ್ ಆಂಬಲ ಮೋಗರು, ಬಾಕುಡ ಸಮಾಜ ಕೇಂದ್ರ ಸಮಿತಿಯ ಗೌರವಾಧ್ಯಕ್ಷರಾದ ವಿಜಯ ಪಂಡಿತ್ ಮಂಗಲ್ಪಾಡಿ, ಪ್ರವೀಣ್ ಕೊಡೆಂಚೀರ್, ಹಿರಿಯರಾದ ಭಾಸ್ಕರ ಪಚ್ಚಿಲಂಪಾರೆ, ಪ್ರವೀಣ್ ಮಂಜೇಶ್ವರ, ಬಾಕುಡ ಸಮಾಜ ಸಮಾಜ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ರಾದ ಶಿವಾನಂದ ಮಂಗಲ್ಪಾಡಿ, ಬಾಕುಡ ಸಮಾಜ ಕೇಂದ್ರ ಸಮಿತಿಯ ಕೋಶಾಧಿಕಾರಿ ಮಂಜುನಾಥ ಕಾರ್ಲೆ, ಬಾಕುಡ ಸಮಾಜ ಮಹಿಳಾ ಸಮಿತಿಯ ಅಧ್ಯಕ್ಷೆ ಸುಮಂಗಲ ಪೋಸೊಟ್ ಉಪಸ್ಥಿತರಿದ್ದರು. ಬಾಕುಡ ಸಮಾಜ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ತುಳಸಿ ದಾಸ್ ಸ್ವಾಗತಿಸಿ, ಜಯಪ್ರಕಾಶ್ ಮಂಜೇಶ್ವರ ಧನ್ಯವಾದವಿತ್ತರು. ಸುರೇಶ್ ಕುಮಾರ್ ಮಂಗಲ್ಪಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.