ವಿಶ್ವ ನಾಯಕ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಮಂತ್ರಿ. "ನಮೋ ಅಭಿಮಾನಿ ಬಳಗ" ಮಲ್ಲಿಕಾರ್ಜುನ ವತಿಯಿಂದ ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ.
ಜೂನ್ 13, 2024
0
ವಿಶ್ವ ನಾಯಕ ನರೇಂದ್ರ ಮೋದಿ ಸತತ ಮೂರನೇ ಬಾರಿಗೆ ಭಾರತದ ಪ್ರಧಾನಮಂತ್ರಿ. "ನಮೋ ಅಭಿಮಾನಿ ಬಳಗ" ಮಲ್ಲಿಕಾರ್ಜುನ ವತಿಯಿಂದ ಕಾಸರಗೋಡು ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮ.
ಕಾಸರಗೋಡು: ನಮೋ ಅಭಿಮಾನಿ ಬಳಗ ಮಲ್ಲಿಕಾರ್ಜುನ ಕಾಸರಗೋಡು ಇದರ ವತಿಯಿಂದ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶ್ವ ನಾಯಕ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿಯವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಂಗವಾಗಿ ಶ್ರೀ ವೆಂಕಟ್ರಮಣ ಮಹಿಳಾ ಭಜನಾ ವೃಂದದವರಿಂದ ಭಜನೆ, ಶ್ರೀ ವೆಂಕಟ್ರಮಣ ಬಾಲಗೋಕುಲದ ಮಕ್ಕಳಿಂದ ಕುಣಿತ ಭಜನೆ ನಡೆಯಿತು. ಶ್ರೀ ಹರಿನಾರಾಯಣ ಮಯ್ಯ ಕಣಿಪುರ ಇವರ ಆಚಾರ್ಯತ್ವದಲ್ಲಿ ಶ್ರೀ ದೇವರಿಗೆ ವಿಶೇಷ ಶ್ರೀರಂಗ ಪೂಜೆ ಮತ್ತು ಕಾರ್ತಿಕ ಪೂಜೆ ಜರಗಿತು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ಕಾಸರಗೋಡು ಜಿಲ್ಲಾಧ್ಯಕ್ಷರಾದ ಶ್ರೀ ರವೀಶ್ ತಂತ್ರಿ ಕುಂಟಾರು, ವಾರ್ಡು ಸದಸ್ಯೆ ಶ್ರೀಮತಿ ಶ್ರೀಲತಾ ಟೀಚರ್, ಜಿಲ್ಲಾ ಕಾರ್ಯದರ್ಶಿ ಉಮಾ ಕಡಪ್ಪುರ, ಕಾಸರಗೋಡು ಮಂಡಲ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪ್ರಭು, ಧಾರ್ಮಿಕ, ಸಾಮಾಜಿಕ ಮುಂದಾಳು ಶ್ರೀ ಕೆ.ಎನ್. ವೆಂಕಟ್ರಮಣ ಹೊಳ್ಳ, ನಮೋ ಅಭಿಮಾನಿ ಬಳಗದ ಕಾರ್ಯಕರ್ತರಾದ ರಾಮಕೃಷ್ಣ ಹೊಳ್ಳ, ಕಿಶೋರ್ ಕುಮಾರ್, ಶಂಕರ ನಾರಾಯಣ ಹೊಳ್ಳ, ಅಡಿಗ, ರವಿ ಕೇಸರಿ, ಪುರಂದರ ಶೆಟ್ಟಿ, ಸಾಯಿನಾಥ್ ರಾವ್, ಶಿವಶಂಕರ ಅಡಿಗ, ಶ್ರೀಕಾಂತ್ ವೈ.ಎಸ್, ಪ್ರಮೋದ್, ರಾಮಕೃಷ್ಣ ರಾವ್, ಪ್ರೇಮ್‌ಜಿತ್, ನಾಮದೇವ್, ವಾರ್ಡ್ ಮಾಜಿ ಕೌನ್ಸಿಲರ್ ಶ್ರೀಮತಿ ವಿಜಯ ಶೆಟ್ಟಿ ಪಕ್ಷದ ಹಲವು ಗಣ್ಯರು ಕಾರ್ಯರ್ಕರು ಭಾಗವಹಿಸಿದರು. ಭಕ್ತಾದಿಗಳಿಗೆ ಸಿಹಿ ಭೋಜನ ವ್ಯವಸ್ಥೆಯನ್ನು ಮಾಡಲಾಯಿತು.