ವರ್ಕಾಡಿ ಪಾತೂರು ಕಜೆಯಲ್ಲಿ ನಾಯಿ ದಾಳಿಗೆ ದನದಕರು, ಆಡು ಹಾಗೂ ಆಡಿನ ಮರಿ ಸಾವು.
ಜೂನ್ 04, 2024
0
ವರ್ಕಾಡಿ ಪಾತೂರು ಕಜೆಯಲ್ಲಿ ನಾಯಿ ದಾಳಿಗೆ ದನದಕರು, ಆಡು ಹಾಗೂ ಆಡಿನ ಮರಿ ಸಾವು.
ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿ ಗೊಳಪಟ್ಟ ಬಾಕ್ರಬೈಲು ಬಳಿಯ ಪಾತೂರು ಕಜೆ ಮಸೀದಿ ಬಳಿ ವಾಸಿಸುತ್ತಿರುವ ಇಬ್ರಾಹಿಂ ಮುಸ್ಲಿಯಾರ್ ರವರ ಮನೆಯ ಹಟ್ಟಿಗೆ ನಾಯಿಯೊಂದು ನುಗ್ಗಿ ಹಟ್ಟಿಯಲ್ಲಿದ್ದ ದನದ ಕರು, ಆಡು, ಅದೇ ಆಡಿನ ಮರಿಯನ್ನು ಕೊಂದು ತಿಂದು ಪರಾರಿಯಾದ ಘಟನೆ ನಡೆದಿದೆ. ಹಟ್ಟಿಯಲ್ಲಿ ಆಡು, ಪಶುವಿನ ದೇಹ ಸೀಳಿದಂತೆ ಕಂಡು ಬಂದಿದ್ದು, ಅರೆಬರೆ ಮಾಂಸ ತಿಂದ ಸ್ಥಿತಿಯಲ್ಲಿದ್ದಂತೆ ಕಳೇಬರವು ಕಂಡು ಬಂದಿದೆ. ಇಂದು ಬೆಳಗ್ಗೆ ಇಬ್ರಾಹಿಂ ಮುಸ್ಲಿಯಾರ್ ರವರು ಹಟ್ಟಿಗೆ ಆಗಮಿಸಿದಾಗ ವಿಷಯ ಬೆಳಕಿಗೆ ಬಂತು. ಕೂಡಲೇ ವಾರ್ಡ್ ಸದಸ್ಯ ಅಬ್ದುಲ್ ಮಜೀದ್ ಬಿ.ಎ ಹಾಗೂ ವರ್ಕಾಡಿಯ ಗೋ ಆಸ್ಪತ್ರೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಇದೀಗ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಲಿರುವರು. ಈ ಹಿಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದ ಇಬ್ರಾಹಿಂ ಮುಸ್ಲಿಯಾರ್ ಬಳಿಕ ಊರಿಗೆ ಬಂದು ಆಡು, ಕೋಳಿ, ಪಶು ಸಾಕಾಣೆಯಲ್ಲಿ ತೊಡಗಿದ್ದರು. 1 ವರೆ ವರ್ಷದ ಹಿಂದೆ ಕೂಡಾ ನಾಯಿಯೊಂದು ಇವರ ಹಟ್ಟಿಗೆ ನುಗ್ಗಿ ದನ, ಆಡು, ಕೋಳಿಯನ್ನು ಕೊಂದು ತಿಂದು ತೆರಳಿತ್ತು. ಇದೀಗ ಮತ್ತೆ ಇದೇ ಘಟನೆ ಮರುಕಳಿಸಿದ್ದು, ಪರಿಸರದ ಕೃಷಿಕರು, ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ.