Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

ಫೇಸ್ ಬುಕ್ ಗೆ ಮರುಳಾದವರು "ಪುಸ್ತಕ ಓದುವ ಸಂಸ್ಕ್ಕೃತಿ ಬೆಳೆಸಿದರೆ" ಫೇಸ್‌ ಬುಕ್‌ ನಲ್ಲಿ ಸೆಲೆಬ್ರಿಟಿಗಳಾಗುವಿರಿ. - ಆನೆಗುಂದಿ ಶ್ರೀ.

ಪಡುಕುತ್ಯಾರಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ: ಸಮಾರೋಪ.
ಉಡುಪಿ: ಪಡುಕುತ್ಯಾರಿನ ಕಟಪಾಡಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾ ಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮಿಗಳವರ ಪಟ್ಟಾಭಿಷೇಕ ಮಹೋತ್ಸವದ 14ನೇ ವರ್ಧಂತಿ ಉತ್ಸವದ ಅಂಗವಾಗಿ ರಾಷ್ಟ್ರೀಯ ವಿಚಾರ ಸಂಕಿರಣವು ಪಡುಕುತ್ಯಾರಿನ ಶ್ರೀ ಸರಸ್ವತಿ ಸತ್ಸಂಗ ಮಂದಿರದಲ್ಲಿ ಸಂಪನ್ನಗೊಂಡಿತು. ವಿಶ್ವಕರ್ಮ : ಸಾಂಸ್ಕೃತಿಕ ಪರಂಪರೆಯ ನಿರ್ಮಾತೃ ಇತಿಹಾಸದ ಪುನರಾವಲೋಕನ ಭವಿಷ್ಯದ ಅನಾವರಣ ಎಂಬ ರಾಷ್ಟ್ರೀಯ ವಿಚಾರ ಸಂಕಿರಣದ ವಿಚಾರಗೋಷ್ಠಿಗಳಲ್ಲಿ ವಿಶ್ವಬ್ರಾಹ್ಮಣರ ಐತಿಹಾಸಿಕ ಪರಂಪರೆ- ಪ್ರೊ. ಈರಣ್ಣ ಪತ್ತಾರ. ನಿವೃತ್ತ ಪ್ರಾಧ್ಯಾಪಕರು, ಪ್ರಾಚ್ಯಶಾಸ್ತ್ರ ವಿಭಾಗ,ಕರ್ನಾಟಕ ವಿಶ್ವವಿದ್ಯಾನಿಲಯ, ಧಾರವಾಡ., ಸ್ಥಪತಿಗಳು ಮತ್ತು ರೂವಾರಿಗಳು -ಡಾ. ವಾಸುದೇವ ಬಡಿಗೇರ್ ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾನಿಲಯ ಹಂಪಿ, ಕರ್ನಾಟಕದಲ್ಲಿ ಕಾಳಮುಖ ಯತಿ ಪರಂಪರೆ- ಡಾ.ಚಾಮರಾಜ ಕಮ್ಮಾರ್ ರಟ್ಟೇಹಳ್ಳಿ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪದವಿ ಕಾಲೇಜು, ಬಳ್ಳಾರಿ, ಕರ್ನಾಟಕ, ವಿಶ್ವಬ್ರಾಹ್ಮಣ ಮಠಗಳು -ಡಾ. ವೀರೇಶ್ ಬಡಿಗೇರ್ ಪ್ರಾಧ್ಯಾಪಕರು, ಹಸ್ತಪ್ರತಿ ವಿಭಾಗ ಕನ್ನಡ ವಿಶ್ವವಿದ್ಯಾನಿಲಯ ಹಂಪಿ , ವಿಶ್ವಬ್ರಾಹ್ಮಣ ವಚನಕಾರರ ಪರಂಪರೆ- ಡಾ. ಗಂಗಾಧರ್ ದೈವಜ್ಞ ಪ್ರಾಧ್ಯಾಪಕರು, ಕನ್ನಡ ವಿಶ್ವವಿದ್ಯಾನಿಲಯ ಹಂಪಿ, ವಿಶ್ವಬ್ರಾಹ್ಮಣ ಹರಿದಾಸರ ಪರಂಪರೆ- ಶ್ರೀ ಭೀಮಸೇನ ಬಡಿಗೇರ್ ಪ್ರಕಾಶಕರು, ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ, ಹುಬ್ಬಳ್ಳಿ, ದೇವಾಲಯಗಳು ಮತ್ತು ರಥಶಿಲ್ಪ-ಅಂಬಿಕಾ ಕೋಟೇಶ್ವರ, ವಾಸ್ತುಶಾಸ್ತ್ರ ವಿದ್ಯಾರ್ಥಿನಿ, ಮಣಿಪಾಲ ವಿ.ವಿ. ಮತ್ತು ಬ್ರಹ್ಮಶ್ರೀ ರಾಜಗೋಪಾಲ ಆಚಾರ್ಯ ಕೋಟೇಶ್ವರ, ರಥಶಿಲ್ಪಿಗಳು , ಕುಂದಾಪುರ, ಕೊಂಕಣ್ ಗೋವಾ ವಿಶ್ವಕರ್ಮರ ಸಾಂಸ್ಕೃತಿಕ ವಿಚಾರ- ಶ್ರೀ ವಿವೇಕ ಚಾರಿ: ಸಂಶೋಧಕರು, ದಂಡಸವಾಡ, ಮಂಡ್ರೆ, ಪೆಡ್ನೆ, ಗೋವ. ವಿಚಾರ ಮಂಡಿಸಿದರು. ಮುಂಬೈ ಗಣೇಶ್‌ ಕುಮಾರ್‌ , ಡಾ. ಬಾಲಕೃಷ್ಣ ಹೊಸಂಗಡಿ ಅವರು ವಿಚಾರಗೋಷ್ಠಿಯನ್ನು ನಿರ್ಹಿಹಿಸಿದರು. ಸಾಂಸ್ಕ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕು. ನಿರೀಕ್ಷಾ ಆಚಾರ್ಯ ಉಡುಪಿ ಇವರಿಂದ ವೀಣಾ ವಾದನ ಹಾಗೂ ಕು. ಅಸಾವರಿ ಹೊಸಂಗಡಿ ಇವರಿಂದ ಕೂಚುಪುಡಿ ಮತ್ತು ಭರತನಾಟ್ಯ ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಿಲ್ಪಾಚಾರ್ಯ ಯು.ಕೆ. ಉಮಾಪತಿ ಆಚಾರ್ಯ ಪಾರಂಪರಿಕ ಶಿಲ್ಪಿಗಳು, ಕುಂಭಕೋಣಂ, ತಮಿಳುನಾಡು ಇವರು ಸಮಾರೋಪ ಭಾಷಣಗೈದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪ್ರತಿಷ್ಠಾನ, ಕಟಪಾಡಿ ಇದರ ಅಧ್ಯಕ್ಷ ಶ್ರೀ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ ಇವರು ವಿಚಾರ ಸಂಕಿರಣದಲ್ಲಿ ವಿಶ್ವಕರ್ಮ ವಿಶ್ವವಿದ್ಯಾಲಯ ಸ್ಥಾಪನೆಗೆ ಆನೆಗುಂದಿ ಮಹಾ ಸಂಸ್ಥಾನದಿಂದ ಪ್ರಯತ್ನವನ್ನು ಮುಂದುವರಿಸುವುದು, ಕಟಪಾಡಿಯಲ್ಲಿ ವಿಶ್ವಕರ್ಮ ಅಧ್ಯಯನ ಪೀಠ ಮತ್ತು ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸುವಂತೆ ಸಂಬಂಧ ಪಟ್ಟವರಿಗೆ ಮನವಿ ಮಾಡುವುದು, ವಿವಿಧ ರಾಜ್ಯಗಳ ವಿಶ್ವ ಬ್ರಾಹ್ಮಣ ಸಮಾಜದ ಸಂಸ್ಕಾರ ಸಂಸ್ಕೃತಿಯನ್ನು ಬೆಸೆಯಲು ಸಹಕಾರವಾಗುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಏರ್ಪಡಿಸುವುದು, ರಾಜ್ಯದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಶ್ವಕರ್ಮ ಸಾಂಸ್ಕೃತಿಕ ಕೇಂದ್ರವನ್ನು ಸ್ಥಾಪಿಸಲು ಸರಕಾರಕ್ಕೆ ಮನವಿ ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಮಂದಿನ ಚಾತುರ್ಮಾಸ್ಯದ ವೇಳೆ ಇನ್ನಷ್ಷು ರಾಜ್ಯಗಳ ಸಮಾಜದ ಸಂಪನ್ಮೂಲ ವ್ಯಕ್ತಿಗಳನ್ನು ಸೇರಿಸಿ ವಿಚಾರ ಸಂಕಿರಣ ಗೋಷ್ಠಿಗಳನ್ನು ನಡೆಸಲಾಗುವುದು ಎಂದು ತಿಳಿಸಿದ ಅವರು ಮುಂದೆ ಶ್ರೀ ಸರಸ್ವತೀ ದೇವಸ್ಥಾನ , ಶ್ರೀಮಠ, ಯಾತ್ರಿನಿವಾಸ, ಪುಷ್ಕರಣಿ ಸೇರಿದ ೨೫ ಕೋಟಿ ವೆಚ್ಚದ ನಿರ್ಮಾಣ ಯೋಜನೆಗೆ ಸಮಾಜ ಬಾಂಧವರ ಸಹಕಾರ ಕೋರಿದರು.
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಗಳವರು ಅವರು ವ್ಯಕ್ತಿಗೆ ಕೌಶಲ್ಯ ವಿದ್ದರೆ ಮಾತ್ರ ಸಾಲದು , ಶಾಸ್ತ್ರದ ಜತೆ ಇರುವ ಕೌಶಲ್ಯ ಶಿಲ್ಪಿಯ ಪರಿಪೂರ್ಣತೆಗೆ ಸಹಕಾರಿಯಾಗುತ್ತದೆ.೨೦೦೦ ವರ್ದ ವರೆಗೂ ಸಮುದ್ರ, ಪರ್ವತ ಮತ್ತು ಸಮತಟ್ಟು ಮಟ್ಟಗಳಲ್ಲಿ ದೇವಸ್ಥಾನಗಳನ್ನು ನಿರ್ಮಿಸಿದ್ದು ಅವು ಇಂದಿಗೂ ಹಾಗೆಯೇ ಉಳಿದಿರುವುದು ಅವರ ಕಲಾ ಕೌಶಲ್ಯವನ್ನು ತೋರುತ್ತದೆ ಎಂದು ನುಡಿದರು. ಎಲ್ಲೇ ಇದ್ದರೂ ಯಾವುದೇ ಭಾಷೆ ಮಾತನಾಡುತ್ತಿದ್ದರೂ ವಿಶ್ವ ಬ್ರಾಹ್ಮಣರು ಒಂದೇ ಎನ್ನುವ ಏಕ ಸೂತ್ರದಿಂದ ಸಂಘಟಿತರಾಗಬೇಕೆನ್ನುವುದೇ ಶ್ರೀಮಠದ ಆಶಯ. ಶಿಲ್ಪ ಬ್ರಾಹ್ಮಣ್ಯ ಪರಂಪರೆಯನ್ನು ಎತ್ತಿ ಹಿಡಿಯಬೇಕೆನ್ನುವುದೇ ಮೂಲ ಉದ್ದೇಶ.
ಸಮಾಜದಲ್ಲಿ ಸಾಹಿತ್ಯ ಬೆಳೆಯಬೇಕು ಜತೆಗೆ ಉತ್ತಮ ರೀತಿಯಲ್ಲಿ ಅಧ್ಯಯನ ಸಂಶೋಧನೆ ಮಾಡಬೇಕು. ಬರೇ ಫೇಸ್‌ ಬುಕ್‌ ನೋಡದೆ ನಿಜ ಪುಸ್ತಕ ಓದಬೇಕು, ಪುಸ್ತಕ ಓದುವ ಸಂಸ್ಕ್ಕೃತಿ ಬೆಳೆಸಿದರೆ ಫೇಸ್‌ ಬುಕ್‌ ನಲ್ಲಿ ಸೆಲೆಬ್ರಿಟಿಗಳಾಗುತ್ತೇವೆ.ಆದರೆ ಬರೇ ಫೇಸ್‌ ಬುಕ್‌ ನೋಡಿದರೆ ನಮ್ಮ ಫೇಸನ್ನೇ ಕಳೆದುಕ್ಕೊಳ್ಳಬೇಕಾಗುತ್ತದೆ ಎಂದು ಅವರು ವಿವರಿಸಿದರು. ರಥಶಿಲ್ಪಿ ಬ್ರಹ್ಮಶ್ರೀ ಲಕ್ಷ್ಮೀನಾರಾಯಣ ಆಚಾರ್ಯ ಕೋಟೇಶ್ವರ.,ಶಿಲ್ಪಿ ಕೆ. ಸತೀಶ ಆಚಾರ್ಯ, ಕಾರ್ಕಳ ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಕಳ, ಶ್ರೀ ವೀರೇಶ್‌ ಎನ್ಟಿ ಬೆಂಗಳೂರು, ಶ್ರೀ ವಿನಾಯಕ ಚಾರಿ ಗೋವಾ, ಶುಭಾಶಂಸನೆ ನಡೆಸಿದರು. ವಿಚಾರ ಸಂಕಿರಣದ ಸಂಯೋಜಕರಾದ ಡಾ. ಶ್ರೀಕಂಠಚಾರ್ ಮೈಸೂರು ಹಾಗೂ ಡಾ. ಬಾಲಕೃಷ್ಣ ಬಿ ಎಂ ಹೊಸಂಗಡಿ ಇವರನ್ನು ಜಗದ್ಗುರುಗಳವರು ಶಾಲುಹೊದೆಸಿ ಸ್ಮರಣಿಕೆ ನೀಡಿ ಗೌರವಿಸಿದರು. ವಿಚಾರ ಸಂಕಿರಣಕ್ಕೆ ಸಹಕರಿಸಿದ ವ್ಯಕಿಗಳಿಗೆ ಹಾಗೂ ಸಂಘ ಸಂಸ್ಥೆಗಳನ್ನು ಇದೇ ವೇಳೆ ಗೌರವಿಸಲಾಯಿತು. ಡಾ. ಗೋಪಾಲಕೃಷ್ಣ ಆಚಾರ್ಯ ನವದೆಹಲಿ ಇವರು ವಿಚಾರ ಸಂಕಿರಣದ ಬಗ್ಗೆ ಅಂತಿಮ ವರದಿ ನೀಡಿದರು. ಪ್ರಧಾನ ಕಾರ್ಯದರ್ಶಿ ಲೋಕೇಶ್‌ ಎಂಬಿ ಆಚಾರ್‌ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಅರವಿಂದ ವೈ ಆಚಾರ್ಯ ಬೆಳುವಾಯಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries