ರಾಷ್ಟ್ರೀಯ ಹೆದ್ದಾರಿ ಮಂಜೇಶ್ವರ ಜಂಕ್ಷನ್ "ಅಂಡರ್ ಪಾಸ್ ಬೇಡಿಕೆ " ಹೋರಾಟ ನೂರನೆ ದಿನಕ್ಕೆ. ಹೋರಾಟಕ್ಕೆ ಮಣಿಯದ ಅಧಿಕಾರಿಗಳ ವಿರುದ್ಧ "ರಸ್ತೆಯಲ್ಲಿ ಉರುಳಿ ಹೋರಾಡಿದ ಪ್ರತಿಭಟನಾಕಾರರು."
ಜೂನ್ 03, 2024
0
ಮಂಜೇಶ್ವರ ಜoಕ್ಷನ್ ಅಂಡರ್ ಪಾಸ್ ಬೇಡಿಕೆ, ಹೋರಾಟ ನೂರಾನೆ ದಿನ ರಸ್ತೆಯಲ್ಲಿ ಉರುಲಿ ಪ್ರತಿಭಟನೆ.
ಮಂಜೇಶ್ವರ: ಮಂಜೇಶ್ವರ ಜoಕ್ಷನ್, ರೈಲು ನಿಲ್ದಾಣ ಸಂಪರ್ಕ, ಅಂಡರ್ ಪಾಸ್ ಗಾಗಿ ಮಂಜೇಶ್ವರ ಜನತೆಯ ಬೇಡಿಕೆಗಳಿಗೆ ಸ್ಪಂದಿಸದ ಹೆದ್ದಾರಿ
ಅಧಿಕಾರಿಗಳಿಗೆ, ಜನಪ್ರತಿನಿದಿನಗಳ ಅನಸ್ಥೆ ವಿರುದ್ಧ ಬೇಡಿಕೆಗಳಿಗೆ ಸ್ಪಂದಿಸುವಂತೆ ಅಗ್ರಹಿಸಿ ಕಳೆದ ನೂರು ದಿನಗಳಿಂದ ಮಂಜೇಶ್ವರ ಹೆದ್ದಾರಿಯಲಿ ಪ್ರತಿಭಟಿಸುವ ಹೆದ್ದಾರಿ ಹೋರಾಟ ಸಮಿತಿ ಮಂಜೇಶ್ವರ ನೇತೃತ್ವದಲ್ಲಿ ಆದಿತ್ಯವಾರ ವಿಶಿಷ್ಟ ಪ್ರತಿಭಟನೆ ನಡೆಸಲಾಯಿತು. ಹೆದ್ದಾರಿಯಲ್ಲಿ ಉರುಳು ಸೇವೆ, ಹೆದ್ದಾರಿಯಲ್ಲಿ ನೂರಾರು ಪ್ರತಿಭಟನಾ ಕಾರ್ಯಕರ್ತರು ಉರುಳಿ ಪ್ರತಿಭಟನೆ ವ್ಯಕ್ತಪಡಿಸಿದರು,
ಬೇಡಿಕೆಗೆ ಸ್ಪಂದಿಸದೆ ಇದ್ದರೆ ಪ್ರತಿಭಟನೆ ಕಾವು ಇನ್ನು ತೀವ್ರ ಗೊಳಿಸಸುವುದಾಗಿ ಪ್ರತಿಭಟನಾ ನಿರತರು ಅಗ್ರಹಿಸಿದರು.
ಹೋರಾಟ ಸಮಿತಿ ಅಧ್ಯಕ್ಷ ಝಕರಿಯ ಮಂಜೇಶ್ವರ ನೇತೃತ್ವದಲ್ಲಿ, ಮಾಡ ಸಂಜೀವ ಶೆಟ್ಟಿ ಅದ್ಯಕ್ಷತೆಯಲ್ಲಿ ಪ್ರತಿಭಟಿಸಲಾಯಿತು.
ಮುಖಂಡರಾದ ಎಸ್.ಎಂ ಬಶೀರ್ ಉದ್ಯಾವರ
ಆದರ್ಶ್ ಬಿ. ಎಂ, ಹಸೈನಾರ್ ನೈನಾರ್, ಅಶ್ರಫ್ ಬಡಾಜೆ, ಮೊದಲದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹಸೈನಾರ್ ಮಂಜೇಶ್ವರ ಸ್ವಾಗತಿಸಿ, ವಂದಿಸಿದರು.