ಕುಂಜತ್ತೂರು ಮಜಾಲ್ ನಿವಾಸಿ ಹೋಟೆಲ್ ಸಪ್ಲೈಯರ್ ಸುನಿಲ್ (39) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ.
ಜೂನ್ 03, 2024
0
ಕುಂಜತ್ತೂರು ಮಜಾಲ್ ನಿವಾಸಿ ಹೋಟೆಲ್ ಸಪ್ಲೈಯರ್ ಸುನಿಲ್ (39) ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ.
ಮಂಜೇಶ್ವರ: ಹೋಟೆಲ್ ಸಪ್ಲೇಯರ್ ನೇಣು ಬಿಗಿದು ಆತ್ಮತ್ಯೆಗೈದ ಘಟನೆ ಕುಂಜತ್ತೂರು ಮಜಾಲ್ ನಲ್ಲಿ ನಿನ್ನೆ ಅಪರಾಹ್ನ ನಡೆದಿದೆ. ಮೃತಪಟ್ಟವರನ್ನ ಕುಂಜತ್ತೂರು ಮಜಾಲ್ ನಿವಾಸಿ ದಿ. ಗೋಪಾಲ ಮೂಲ್ಯ - ದೇವಕಿ ದಂಪತಿ ಪುತ್ರ ಸುನಿಲ್ (39) ಎಂದು ಗುರುತಿಸಲಾಗಿದೆ. ಕುಂಜತ್ತೂರು ಜಂಕ್ಷನ್ ನಲ್ಲಿ ಕಾರ್ಯಚರಿಸುತ್ತಿರುವ "ದೇವಿ ಹೋಟೆಲ್" ನಲ್ಲಿ ಸಪ್ಲಯರ್ ರಾಗಿ ಸುನಿಲ್ ಕೆಲಸ ಮಾಡುತ್ತಿದ್ದರು. ನಿನ್ನೆ ಅಪರಾಹ್ನ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯೊಳಗೆ ಪಕ್ಕಾಸ್ ಗೆ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದು, ವಿಷಯವನ್ನರಿತು ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಕಾಸರಗೋಡು ಸರಕಾರಿ ಆಸ್ಪತ್ರೆಯಲ್ಲಿ ಶವ ಮಹಜರು ನಡೆಸಿ ರಾತ್ರಿ ಮನೆಗೆ ತರಲಾಯಿತು. ಬಳಿಕ ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬಳಿ ಇರುವ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ತಾಯಿ, ಪತ್ನಿ: ಉಮಾವತಿ, ಸಹೋದರ - ಸಹೋದರಿಯರಾದ: ಯತೀಶ್, ಸಂಧ್ಯಾ, ರೇಷ್ಮಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರಿಗೆ ಮಕ್ಕಳಿಲ್ಲ.