ಮೂಲಭೂತ ಸೌಕರ್ಯದಿಂದ ವಂಚಿತರಾದ ಬೆರಿಪದವಿನ ಚನಿಯರ ಮನೆಯ ದುಸ್ಥಿತಿಯನ್ನು ಮನಗಂಡ ಸದಾಶಿವ ಶೆಟ್ಟಿ ಸೇವಾ ಬಳಗ ಬಾಯಾರು ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ, ಕೂಡಲೇ ಮನೆಗೆ ಭೇಟಿ ನೀಡಿದ ಅಧಿಕಾರಿ ವರ್ಗ, ಸರಕಾರದಿಂದ ಮೂಲ ಸೌಲಭ್ಯ ಒದಗಿಸಿ ಕೊಡುವ ಭರವಸೆ.
ಸೆಪ್ಟೆಂಬರ್ 26, 2024
0

ಮಂಜೇಶ್ವರ: ಬಾಯಾರು ಬೆರಿಪದವು, ಪೆಲತ್ತಡ್ಕ ನಿವಾಸಿ ಕೊರಗ ಸಮುದಾಯದ ಚನಿಯರವರ ಮನೆಯಲ್ಲಿ ಯಾವುದೇ ಮೂಲಭೂತ ಸೌಕರ್ಯವಿಲ್ಲದೆ ವಂಚಿತರಾಗಿರುವುದನ್ನು ಕಂಡು ಬಾಯಾರು ಬೇರಿಪದವಿನ ಕುಳೂರು ಕನ್ಯಾನ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗದ ಸದಸ್ಯರು ಮನೆಗೆ ಭೇಟಿ ನೀಡಿ, ಎಲ್ಲಾ ಕಷ್ಟಗಳನ್ನು ಆಲಿಸಿ, ಅವರ ಎಲ್ಲಾ ಬೇಡಿಕೆಗಳನ್ನು ನೆರವೇರಿಸುವ ಭರವಸೆ ನೀಡಿ, ಸ್ಥಳಿಯ ವಾರ್ಡ್ ಮೆಂಬರ್ ನಲ್ಲಿ ಚರ್ಚಿಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿಯನ್ನು ಸಲ್ಲಿಸಿದರು. ಈ ಮನವಿಗೆ ತಕ್ಷಣ ಸ್ಪಂದಿಸಿ ಜಿಲ್ಲಾಧಿಕಾರಿ ಕಚೇರಿಯಿಂದ ಎರಡು ದಿವಸದಲ್ಲಿ ಎಲ್ಲಾ ವಿಭಾಗದ ಅಧಿಕಾರಿಗಳು ಚನಿಯರ ಮನೆಗೆ ಭೇಟಿ ನೀಡಿ, ಕರೆಂಟ್ ವ್ಯವಸ್ಥೆ, ಪೆನ್ಷನ್, ನೀರು, ಸೂರಿನ ವ್ಯವಸ್ಥೆ ಹಾಗೂ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಸಾಮಾಜಿಕ ಕಾರ್ಯದಲ್ಲಿ ಬಡ ವರ್ಗಕ್ಕೆ ಮೂಲ ಸೌಲಭ್ಯವನ್ನು ಸರಕಾರದಿಂದ ಒದಗಿಸಿ ಕೊಡಲು ಶ್ರಮ ವಹಿಸಿದ ಬಾಯಾರಿನ ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗದ ಸದಸ್ಯರ ಈ ಕಾರ್ಯ ನಾಡಿನಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.