ಕೆಂಪು ಕಲ್ಲು ಮಾಲಿಕರ ಮುಷ್ಕರ ಚಪ್ಪರಕ್ಕೆ ಸಿಪಿಐ ಮುಖಂಡರು ಭೇಟಿ.
ಸೆಪ್ಟೆಂಬರ್ 26, 2024
0
ಕೆಂಪು ಕಲ್ಲು ಮಾಲಿಕರ ಮುಷ್ಕರ ಚಪ್ಪರಕ್ಕೆ ಸಿಪಿಐ ಮುಖಂಡರು ಭೇಟಿ.
ಕಾಸರಗೋಡು: ಕೆಂಪು ಕಲ್ಲು ಉತ್ಪಾದಕ ಮಾಲಕರ ಕ್ಷೇಮ ಸಂಘ ಜಿಲ್ಲಾ ಸಮಿತಿ ಕಾಸರಗೋಡಿನ ಕಲೆಕ್ಟರೇಟ್ ಪರಿಸರದಲ್ಲಿ ನಡೆಸುವ ಅನಿರ್ದಿಷ್ಟ ಕಾಲ ಉಪವಾಸ ಮುಷ್ಕರ ಚಪ್ಪರಕ್ಕೆ ಸಿಪಿಐ ಮುಖಂಡರು ಭೇಟಿ ನೀಡಿ, ಕೆಂಪು ಕಲ್ಲು ಮಾಲಕರ ಮುಷ್ಕರವನ್ನು ಆದಷ್ಟು ಬೇಗ ಇತ್ಯಾರ್ಥ ಪಡಿಸಬೇಕು ಎಂದು ಬೆಂಬಲ ವ್ಯಕ್ತಪಡಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ ಬಾಬು, ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್, ಜಿಲ್ಲಾ ಕೌನ್ಸಿಲ್ ಸದಸ್ಯರಾದ ಕೆ. ಕುಂಞಿ ರಾಮನ್, ಜಯರಾಮ ಬಲ್ಲಂಗುಡೆಲ್, ಅಜಿತ್ ಎಂ.ಸಿ ಲಾಲ್ಬಾಗ್, ಬಿಜು ಉನ್ನಿತ್ತಾನ್, ಸಿಪಿಐ ಪೈವಳಿಕೆ ಲೋಕಲ್ ಕಮಿಟಿ ಸದಸ್ಯ ವಿಜಯ್ ಕುಮಾರ್ ಪೆರ್ಮುದೆ ಮೊದಲಾದವರು ಭೇಟಿ ನೀಡಿದ ನಿಯೋಗದಲ್ಲಿದ್ದರು.