67 ನೇ ವರ್ಷದ ಸಾರ್ವಜನಿಕ ಮಂಜೇಶ್ವರ ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.
ಸೆಪ್ಟೆಂಬರ್ 26, 2024
0
67 ನೇ ವರ್ಷದ ಸಾರ್ವಜನಿಕ ಮಂಜೇಶ್ವರ ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.
ಮಂಜೇಶ್ವರ: 67 ನೇ ವರ್ಷದ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಮಂಜೇಶ್ವರ ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಜರುಗಿತು. ಸಮಿತಿಯ ಅಧ್ಯಕ್ಷ ಲಿಖಿತ್ ಶಿವಾಜಿ ಪ್ರಭು, ಪ್ರಧಾನ ಕಾರ್ಯದರ್ಶಿ: ಜಿ. ನರಸಿಂಹ ಪ್ರಭು, ಕೋಶಾಧಿಕಾರಿ ಎಂ. ದಿನೇಶ್ ಶೆಣೈ, ಶೋಭಾಯಾತ್ರೆ ಪ್ರಮುಖ ಪ್ರಸಾದ್ ಪ್ರಭು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಗೊಳಿಸಿದರು. ಈ ವೇಳೆ ಮಂಜೇಶ್ವರ ಕಾರ್ ಸ್ಟ್ರೀಟ್ ಫ್ರೆಂಡ್ಸ್ ನ ಸದಸ್ಯರು ಉಪಸ್ಥಿತರಿದ್ದರು. ಈ ವರ್ಷದ 67 ನೇ ಮಂಜೇಶ್ವರ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವವು ಅಕ್ಟೋಬರ್ 8 ರಿಂದ ಮೊದಲ್ಗೊಂಡು 13 ರ ತನಕ ವಿವಿಧ ವೈದಿಕ, ಧಾರ್ಮಿಕ, ಆಟೋಟ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಲಿದೆ. ಅಲ್ಲದೆ ಈ ಬಾರಿ ವಿಶೇಷವಾಗಿ ನೂತನ ಬೆಳ್ಳಿಯ ನವಿಲನ್ನು ದೇವಿಗೆ ಸಮರ್ಪಿಸಲು ಸಮಿತಿ ತೀರ್ಮಾನಿಸಿದೆ. ಈ ವರ್ಷದ 67 ನೇ ಸಾರ್ವಜನಿಕ ಶ್ರೀ ಶಾರದೊತ್ಸವದ ಕಾರ್ಯಕ್ರಮದ ವಿವರ ಈ 👇ಕೆಳಗಿನಂತಿದೆ.