ಅಸೌಖ್ಯದಿಂದ ನಿಧನರಾದ ರಾಮ ಮೂಲ್ಯರ ಮನೆಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಧನ.
ಸೆಪ್ಟೆಂಬರ್ 26, 2024
0
ಅಸೌಖ್ಯದಿಂದ ನಿಧನರಾದ ರಾಮ ಮೂಲ್ಯರ ಮನೆಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಸಹಾಯಧನ.
ವರ್ಕಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.) ಮಂಜೇಶ್ವರ ಯೋಜನಾ ವ್ಯಾಪ್ತಿಯ ಸುಂಕದಕಟ್ಟೆ ವಲಯದ ಕೂಟತ್ತಜೆ ಕಾರ್ಯಕ್ಷೇತ್ರದ ಸುಬೀಕ್ಷಾ ಸಂಘದ ಸದಸ್ಯರಾದ ಮಾಧವಿಯವರ ಗಂಡ ರಾಮಮೂಲ್ಯ ರವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮರಣ ಹೊಂದಿರುತ್ತಾರೆ. ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯರು 15,000 ಸಹಾಯಧನ ಮಂಜೂರುಗೊಳಿಸಿದ್ದು, ಈ ಸಹಾಯಧನದ ಮಂಜುರಾತಿ ಪತ್ರವನ್ನು ಇಂದು ಮಂಜೇಶ್ವರ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಪದಾಧಿಕಾರಿಗಳು, ಮೇಲ್ವಿಚಾರಕರು, ಸೇವಾಪ್ರತಿನಿಧಿಗಳು, ಉಪಸ್ಥಿತರಿದ್ದರು.