ಕ್ಯಾಥೋಲಿಕ್ ಅಸೋಸಿಯೇಷನ್ ಓಫ್ ಸೌತ್ ಕೆನರಾ (CASK) ಅಧ್ಯಕ್ಷರಾಗಿ ಮಾಜಿ ಲಯನ್ಸ್ ಗವರ್ನರ್ ಶ್ರೀ ರೊನಾಲ್ಡ್ ಗೋಮ್ಸ್ ಆಯ್ಕೆ.
ಸೆಪ್ಟೆಂಬರ್ 26, 2024
0
ಕ್ಯಾಥೋಲಿಕ್ ಅಸೋಸಿಯೇಷನ್ ಓಫ್ ಸೌತ್ ಕೆನರಾ (CASK) ಅಧ್ಯಕ್ಷರಾಗಿ ಮಾಜಿ ಲಯನ್ಸ್ ಗವರ್ನರ್ ಶ್ರೀ ರೊನಾಲ್ಡ್ ಗೋಮ್ಸ್ ಆಯ್ಕೆ.
ಮಂಗಳೂರು: ಮಾಜಿ ಲಯನ್ಸ್ ಗವರ್ನರ್ ರೊನಾಲ್ಡ್ ಗೋಮ್ಸ್ ಅವರನ್ನು ಕ್ಯಾಥೋಲಿಕ್ ಅಸೋಸಿಯೇಷನ್ ಓಫ್ ಸೌತ್ ಕೆನರಾ (CASK) ಇದರ 111 ನೇ ವಾರ್ಷಿಕ ಮಹಾಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಮಾರ್ಜೋರಿ ಟೆಕ್ಸೀರಾ ಮತ್ತು ಡಾ. ರೋಹನ್ ಮೋನಿಸ್ ಉಪಾಧ್ಯಕ್ಷರು, ಕಾರ್ಯದರ್ಶಿಯಾಗಿ ಪೀಟರ್ ಪಿಂಟೋ, ಜಂಟಿ ಕಾರ್ಯದರ್ಶಿ ಟೈಟಸ್ ನೊರೊನ್ಹಾ ಮತ್ತು ಕೋಶಾಧಿಕಾರಿ ರೊನಾಲ್ಡ್ ಮೆಂಡೋನ್ಸಾ ಆಯ್ಕೆಯಾದರು. ಆಡಳಿತ ಮಂಡಳಿಯ ಸದಸ್ಯರಾಗಿ ಇಯಾನ್ ಲೋಬೊ, ಇರ್ವಿನ್ ಲೋಬೊ, ಡಾರಿಲ್ ಲಸ್ರಾಡೊ, ಜೂಡ್ ರೇಗೊ, ಡಾ ಅನಿಲ್ ಗೋಮ್ಸ್, ಮಾರ್ಸೆಲ್ ಮೊಂತೆರೊ, ಕೀತ್ ಡಿ'ಸೋಜಾ ಮತ್ತು ಸಪ್ನಾ ನೊರೊನ್ಹಾ ಆಯ್ಕೆಯಾದರು.