ಶ್ರೀ ಕ್ಷೇತ್ರ ಧರ್ಮಸ್ಥಳದ "ಜಲಮಂಗಲ" ಯೋಜನೆಯಡಿ, ಅಪಘಾತದಲ್ಲಿ ಗಾಯಗೊಂಡ ವರ್ಕಾಡಿ ಸುಳ್ಯಮೇ ನಿವಾಸಿ ಜನಾರ್ಧನ್ ರಿಗೆ "ಯು ಶೇಪ್ ವಾಕರ್" ವಿತರಣೆ.
ಸೆಪ್ಟೆಂಬರ್ 26, 2024
0
ಶ್ರೀ ಕ್ಷೇತ್ರ ಧರ್ಮಸ್ಥಳದ "ಜಲಮಂಗಲ" ಯೋಜನೆಯಡಿ, ಅಪಘಾತದಲ್ಲಿ ಗಾಯಗೊಂಡ ವರ್ಕಾಡಿ ಸುಳ್ಯಮೇ ನಿವಾಸಿ ಜನಾರ್ಧನ್ ರಿಗೆ "ಯು ಶೇಪ್ ವಾಕರ್" ವಿತರಣೆ.
ಮಂಜೇಶ್ವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ.) ಮಂಜೇಶ್ವರ ಯೋಜನಾ ವ್ಯಾಪ್ತಿಯ ಸುಂಕದಕಟ್ಟೆ ವಲಯದ ಸುಳ್ಯಮೆ ಕಾರ್ಯಕ್ಷೇತ್ರದ ಶ್ರೀ ಭಗವತಿ ಸಂಘದ ಸದಸ್ಯೆ ವಿಶಾಲಾಕ್ಷಿಯವರ ಅಣ್ಣ ಜನಾರ್ಧನರವರಿಗೆ ಅಪಘಾತದಲ್ಲಿ ಕಾಲಿಗೆ ಏಟಾಗಿದ್ದು ನಡೆದಾಡಲು ಕಷ್ಟವಾಗುತ್ತಿದ್ದ ಸಂದರ್ಭದಲ್ಲಿ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಜಲಮಂಗಲ ಕಾರ್ಯಕ್ರಮದಡಿಯಲ್ಲಿ ಎರಡು ಕೈಗಳ ಸಹಾಯದಿಂದ ನಡೆದಾಡಲು ಸುಲಭವಾಗುವಂತೆ "ಯು ಶೇಪ್ ವಾಕರ್" ಮಂಜೂರುಗೊಳಿಸಿದ್ದು ಇದನ್ನು ಇಂದು ಮಾನ್ಯ ಯೋಜನಾಧಿಕಾರಿಗಳು ಜನಾರ್ಧನ್ ರವರಿಗೆ ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಸತ್ಯವತಿ, ಕೂಟತ್ತಜೆ ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಅಮಿತಾ, ಮೇಲ್ವಿಚಾರಕರು, ಸೇವಾ ಪ್ರತಿನಿದಿ ಉಪಸ್ಥಿತರಿದ್ದರು.