ಕೇರಳ ಮುಖ್ಯಮಂತ್ರಿಗಳ ಭ್ರಷ್ಟಾಚಾರವು ಕೆಲವೇ ದಿನಗಳಲ್ಲಿ ಹೊರಬರಲಿದೆ - ಕೆ ಸುರೇಂದ್ರನ್.
ಸೆಪ್ಟೆಂಬರ್ 26, 2024
0
ಕೇರಳ ಮುಖ್ಯಮಂತ್ರಿಗಳ ಭ್ರಷ್ಟಾಚಾರವು ಕೆಲವೇ ದಿನಗಳಲ್ಲಿ ಹೊರಬರಲಿದೆ - ಕೆ ಸುರೇಂದ್ರನ್.
ಮಂಜೇಶ್ವರ: ಕೇಂದ್ರ ಭದ್ರ ಹಾಗೂ ಸರ್ವಸ್ಪರ್ಶಿ ಆಡಳಿತ ನೀಡುತ್ತಿರುವಾಗ ಇಂಡಿಯಾ ಒಕ್ಕೂಟದ ರಾಜ್ಯಗಳಲ್ಲಿ ಭ್ರಷ್ಟಾಚಾರ ತಾಂಡವ ವಾಡುತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಕೆ. ಸುರೇಂದ್ರನ್ ಹೇಳಿದರು. ಬಿಜೆಪಿ ಮಂಜೇಶ್ವರ ಮಂಡಲ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಾಗೂ ಪಂಡಿತ್ ದೀನ್ ದಯಾಳ್ ಜನ್ಮ ಜಯಂತಿ ಕಾರ್ಯಕ್ರಮ ವರ್ಕಾಡಿಯಲ್ಲಿ ಉದ್ಘಾಟಿಸಿ, ಮಾತನಾಡಿದರು.
ದೆಹಲಿ, ಕರ್ನಾಟಕ, ತಮಿಳ್ನಾಡು, ಅದೇ ರೀತಿ ಕೇರಳದಲ್ಲಿಯೂ ಭ್ರಷ್ಟಾಚಾರ, ಹಿಂದೂ ವಿರೋಧಿ ನೀತಿ, ಓಲೈಕೆ ರಾಜಕಾರಣ ನಡೆಯುತ್ತಿದೆ. ಕೇರಳದಲ್ಲಿ ಪ್ರಳಯ ಬಂದರು, ಪ್ರಾಕೃತಿಕ ವಿಕೋಪ ಉಂಟಾದರು ರಾಜ್ಯ ಸರಕಾರ ಅದರ ಹೆಸರಲ್ಲಿ ಲಾಭ ಮಾಡಲು ನೋಡುತಿದೆ ಎಂದು ಆರೋಪಿಸಿದರು. ಕೇರಳ ಎಡರಂಗಕ್ಕೆ ಆರ್ಥಿಕ ಬೆಳವಣಿಗೆಗೆ ಇರುವ ಏಕೈಕ ರಾಜ್ಯ ಇಲ್ಲಿಯ ಭ್ರಷ್ಟಾಚಾರವು ಹೊರಬರಲಿದೆ ಎಂದು ಹೇಳಿದರು. ಕೇಂದ್ರ ಜಾರಿಗೆ ತಂದಿರುವ ಆಯುಷ್ಮನ್ ಅರೋಗ್ಯ ಯೋಜನೆ ಸಮಗ್ರ ಜಾರಿ ಮಾಡದೇ ರಾಜ್ಯ ಸರಕಾರ ಬಡವರನ್ನು ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ್ ರೈ, ಕಾರ್ಯದರ್ಶಿ ಮಣಿಕಂಠ ರೈ, ಮುಖಂಡರಾದ ಸತೀಶಚಂದ್ರ ಭಂಡಾರಿ, ಹರಿಶ್ಚಂದ್ರ ಎಂ, ದೂಮಪ್ಪ ಶೆಟ್ಟಿ, ಪದ್ಮಾವತಿ, ತುಳಸಿ ಕುಮಾರಿ, ಗೋಪಾಲ್ ಶೆಟ್ಟಿ, ಲೋಕೇಶ್ ನೋಂಡ
ಯಾದವ ಬಡಾಜೆ
ರಕ್ಷಣ ಅಡಕಲಾ, ರವಿರಾಜ್, ಯತೀರಾಜ್ ಶೆಟ್ಟಿ, ಭಾಸ್ಕರ್ ಪೊಯ್ಯೇ, ಚಂದ್ರಹಾಸ ಪೂಜಾರಿ ಜನಪ್ರತಿನಿಧಿಗಳು, ಮೊದಲಾದವರು ಜೊತೆಗಿದ್ದರು.