ಪುತ್ತೂರಿನ ರೈ ಎಸ್ಟೇಟ್ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವೆಂಬರ್ 2 ರಂದು ಪುತ್ತೂರಿನಲ್ಲಿ ದೀಪಾವಳಿ ಅಂಗವಾಗಿ "ಅಶೋಕ ಜನ - ಮನ 2024" ವಸ್ತ್ರ ವಿತರಣಾ ಕಾರ್ಯಕ್ರಮ. ಹಾಗೂ ಗೂಡು ದೀಪ ಸ್ಪರ್ಧೆ.
ಅಕ್ಟೋಬರ್ 27, 2024
0
ಪುತ್ತೂರಿನ ರೈ ಎಸ್ಟೇಟ್ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನವೆಂಬರ್ 2 ರಂದು ಪುತ್ತೂರಿನಲ್ಲಿ ದೀಪಾವಳಿ ಅಂಗವಾಗಿ "ಅಶೋಕ ಜನ - ಮನ 2024" ವಸ್ತ್ರ ವಿತರಣಾ ಕಾರ್ಯಕ್ರಮ. ಹಾಗೂ ಗೂಡು ದೀಪ ಸ್ಪರ್ಧೆ.
ಮಂಜೇಶ್ವರ: ರೈ ಎಸ್ಟೇಟ್ ಎಜ್ಯುಕೇಶನ್ ಚಾರಿಟೇಬಲ್ ಟ್ರಸ್ಟ್ ಜನಸೇವಾ ಕೇಂದ್ರ ಪುತ್ತೂರು ವತಿಯಿಂದ ಪ್ರತಿ ವರ್ಷದಂತೆ ನಡೆಯುವ ದೀಪಾವಳಿಯ ವಸ್ತ್ರ ವಿತರಣೆ "ಅಶೋಕ ಜನ - ಮನ 2024" ಈ ಬಾರಿ ನ. 2 ರಂದು ಪುತ್ತೂರಿನ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಬೆಳಗ್ಗಿನಿಂದ ಸಂಜೆ ತನಕ ನಡೆಯಲಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಮಂಗಳೂರಿನ ಓಸಿಯನ್ ಪಾರ್ಲರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರಣೆ ನೀಡಿದರು. ಈ ವರ್ಷ ಕಾರ್ಯಕ್ರಮವನ್ನು ಉದ್ಘಾಟಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆಹ್ವಾನಿಸಿದ್ದು, ಅವರು ಬರುವ ನಿರೀಕ್ಷೆಯಿದೆ. ಎರಡು ದಿನದೊಳಗೆ ಮಾಹಿತಿ ನೀಡುವರೆಂದು ತಿಳಿಸಿದ್ದಾರೆ. ಈ ಬಾರಿ ಕೇವಲ ವಸ್ತ್ರಕ್ಕೆ 3.5 ಕೋಟಿ ವೆಚ್ಚವಾಗಲಿದೆ ಅವೆಲ್ಲವೂ ನಮ್ಮ ಸ್ವಂತ ಹಣದಲ್ಲಿ ಖರೀದಿಸುವುದು. ಅಲ್ಲದೇ ಈ ಬಾರಿ 75,000 ಜನಕ್ಕೆ ವಸ್ತ್ರ ವಿತರಣೆ ಹಾಗೂ 45 ಸಾವಿರ ಜನಕ್ಕೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಕೊಂಬೆಟ್ಟುವರೆಗೆ ಕಾರ್ಯಕ್ರಮಕ್ಕೆ ಆಗಮಿಸುವ ವಯಸ್ಕರಿಗೆ ಆಟೋ ರಿಕ್ಷಾ ಅಥವಾ ಬಗ್ಗಿ ವಾಹನ ವ್ಯವಸ್ಥೆ ಇರಲಿದೆ. ಮತ್ತು ದೀಪಾವಳಿ ಹಬ್ಬದ ಅಂಗವಾಗಿ ಗೂಡುದೀಪ ಸ್ಪರ್ಧೆಯನ್ನು ಆಯೋಜಿಸಿದ್ದೇವೆ. ವಿಜೇತರಿಗೆ ಬಹುಮಾನವಿದೆ ಎಂದು ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಇದು ಕಾಂಗ್ರೇಸ್ ಪಕ್ಷದ ಸಮಾವೇಶವಲ್ಲ, ಇದು ದೀಪಾವಳಿಯ ವಸ್ತ್ರವಿತರಣೆ. ಹಾಗೂ ಗೂಡು ದೀಪ ಸ್ಪರ್ಧೆ. ಎಲ್ಲರ ಸಹಕಾರ ಅಗತ್ಯ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಶಾಸಕರ ನೆಲೆಯಲ್ಲಿ ನಿಲ್ಲುವ ಯೋಗ್ಯತೆ ಬಂದಿದೆ ಅಂದರೆ ಅದರಲ್ಲಿ ಒಂದು ವಸ್ತ್ರ ವಿತರಣಾ ಕಾರ್ಯಕ್ರಮದ ಪಾಲು ಇದೆ. ಅದರ ಜೊತೆ ಸಮಾಜದಲ್ಲಿ ಸೂಕ್ಷ್ಮ ವಲಯದಲ್ಲಿ ಕೆಲಸ ಮಾಡುವವರನ್ನು ಹುಡುಕಿ ಈ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಗುವುದು ಎಂದರು.