ಪ್ರಗತಿಪರ ಕೃಷಿಕೆ ಮಜಿಬೈಲು ಕುಂಞಿಹಿತ್ತಿಲು ನಿವಾಸಿ ಸುಶೀಲ (86) ನಿಧನ.
ಅಕ್ಟೋಬರ್ 26, 2024
0
ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಸಿಪಿಐ ನೇತಾರ ಜಯರಾಮ ಬಲ್ಲಂಗುಡೇಲುರಿಗೆ ಮಾತೃ ವಿಯೋಗ.
ಮಂಜೇಶ್ವರ: ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಸಿಪಿಐ ನೇತಾರರಾಗಿರುವ ಜಯರಾಮ ಬಲ್ಲಂಗುಡೇಲುರ ಮಾತೃ ಶ್ರೀ ಮಜಿಬೈಲು ಕುಂಞಿಹಿತ್ತಿಲು ನಿವಾಸಿ ಸುಶೀಲ (86) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಮುಂಜಾನೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಪ್ರಗತಿಪರ ಕೃಷಿಕರಾಗಿದ್ದು, ದಿ. ಬಾಬು ಬೆಲ್ಚಾಡ ರ ಪತ್ನಿಯಾಗಿದ್ದಾರೆ. ಮೃತರು ಮಕ್ಕಳಾದ: ರಮೇಶ್, ಜಯರಾಮ ಬಲ್ಲಂಗುಡೇಲು ( ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ, ಮೀಂಜ ಗ್ರಾಮ ಪಂಚಾಯತ್ ಉಪಾಧ್ಯಕ್ಷ), ರಾಜೇಶ್ ಕುಂಞಿ ಹಿತ್ತಿಲು, ಲಕ್ಷ್ಮಣ ಬಲ್ಲಂಗುಡೇಲು, ಕಿಶೋರ್ ಕುಂಞಿ ಹಿತ್ತಿಲು, ಸುಮಿತ್ರ ಪಂಜ ಬಂದ್ಯೋಡ್, ಅಳಿಯ ವಾಮನ ಪಂಜ, ಸೊಸೆಯಂದಿರಾದ ಪಿಂಕಿ, ರೋಷಿನಿ ( ಮೀಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ), ಶೈಲಜಾ, ಚೈತನ್ಯ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮಕ್ಕಳ ಪೈಕಿ ಸುಮಿತ್ರ ಹಾಗೂ ಜಯಾನಂದ, ಓರ್ವ ಅಳಿಯ ರಾಜ ಕಾಸರಗೋಡು, ಸಹೋದರಿಯರಾದ: ಕಮಲ, ಪ್ರೇಮಾ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಮನೆಗೆ ಮಿಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಂದರಿ ಆರ್.ಶೆಟ್ಟಿ, ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಸುಳ್ಯಮೆ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಟಿ ಬಾಬು, ಜಿಲ್ಲಾ ಸಮಿತಿ ಸದಸ್ಯ ಎಸ್. ರಾಮಚಂದ್ರ, ವಿವಿಧ ರಾಜಕೀಯ ಪಕ್ಷಗಳ ನೇತಾರರುಗಳಾದ ಕೆ.ಆರ್ ಜಯಾನಂದ, ಡಾ. ಚಂದ್ರ ಶೇಖರ ಚೌಟ, ಪ್ರಭಾಕರ ಚೌಟ, ಜಗದೀಶ್ ಮೂಡಂಬೈಲ್ ಸೇರಿದಂತೆ ಹಲವಾರು ಮಂದಿ ಭೇಟಿ ನೀಡಿ ಮೃತರಿಗೆ ಅಂತಿಮ ನಮನಗೈದು, ಮನೆಯವರನ್ನ ಸಂತೈಸಿ, ಸಂತಾಪ ಸೂಚಿಸಿದರು.