ಬಾಯಾರು - ಉಪ್ಪಳ ಕಾಸರಗೋಡು ರೂಟ್ ನಲ್ಲಿ KSRTC ಬಸ್ ವ್ಯವಸ್ಥೆಯನ್ನು ಮಂಜೂರು ಮಾಡಬೇಕು - ಸಿಪಿಎಂ ಬಾಯಾರ್.
ಅಕ್ಟೋಬರ್ 25, 2024
0
ಬಾಯಾರು - ಉಪ್ಪಳ ಕಾಸರಗೋಡು ರೂಟ್ ನಲ್ಲಿ KSRTC ಬಸ್ ವ್ಯವಸ್ಥೆಯನ್ನು ಮಂಜೂರು ಮಾಡಬೇಕು - ಸಿಪಿಎಂ ಬಾಯಾರ್.
ಪೈವಳಿಕೆ: ಪೈವಳಿಕೆ - ಬಾಯಾರು - ಉಪ್ಪಳ ಕಾಸರಗೋಡು ರೂಟ್ ನಲ್ಲಿ KSRTC ಬಸ್ ವ್ಯವಸ್ಥೆಯನ್ನು ಮಂಜೂರು ಮಾಡಬೇಕು, ವಯನಾಡ್ ಪ್ರಕೃತಿ ದುರಂತವನ್ನು ರಾಷ್ಟ್ರೀಯ ದುರಂತವಾಗಿ ಘೋಷಿಸಿ, ಬಾಯಾರು ಪ್ರದೇಶದಲ್ಲಿ ಯುವಕರಿಗಾಗಿ ಆಟೋಟ ಮೈದಾನ ನಿರ್ಮಿಸಿರಿ. ಎಂದು ಸಿಪಿಐಎಂ ಬಾಯಾರು ಲೋಕಲ್ ಸಮ್ಮೇಳನವೂ ನಿರ್ಣಯ ಮಂಡಿಸಲಾಯಿತು. ಪ್ರತಿನಿಧಿ ಸಮ್ಮೇಳನ ಎಸ್. ನಾರಾಯಣ ಭಟ್ ನಗರ ಬಾಯಾರು ಸೊಸೈಟಿಯಲ್ಲಿ ನಡೆಯಿತು. ಸಿಪಿಐಎಂ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯರಾದ ಟಿ.ಕೆ ರಾಜನ್ ಉದ್ಘಾಟಿಸಿದರು. ದಿನೇಶ್ವರಿ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿಪಿಐಎಂ ನೇತಾರ ರಾಮಚಂದ್ರ ಮಾಸ್ಟರ್ ಧ್ವಜಾರೋಹಣ ನೆರವೇರಿಸಿದರು. ಪುಷ್ಪರಾಜ.ಡಿ, ರಾಮಚಂದ್ರ ಮಾಸ್ಟರ್, ದಿನೇಶ್ವರಿ ನಾಗೇಶ್, ಲಲಿತಾ ಕನಿಯಾಳ ಎಂಬಿವರ ಅಧ್ಯಕ್ಷ ಮಂಡಳಿಯು ಸಮ್ಮೇಳನವನ್ನು ನಿಯಂತ್ರಿಸಿದರು. ರಹೀಂ ನಡುಮನೆ ಹುತಾತ್ಮ ನಿರ್ಣಯ ಮಂಡಿಸಿದರು. ರಾಬರ್ಟ್ ಫೆರಾವ್ ಶ್ರದ್ಧಾಂಜಲಿ ನಿರ್ಣಯ ಮಂಡಿಸಿದರು.
ಸಿಪಿಐಎಂ ಬಾಯಾರು ಲೋಕಲ್ ಕಾರ್ಯದರ್ಶಿ ಪುರುಷೋತ್ತಮ ಬಳ್ಳೂರು ಚಟುವಟಿಕೆಯ ವರದಿಯನ್ನು ಮಂಡಿಸಿದರು. ಏರಿಯಾ ಸಮಿತಿ ಸದಸ್ಯರಾದ ಅಬ್ದುಲ್ ರಝಾಕ್ ಚಿಪ್ಪಾರು, ಹಾರಿಸ್ ಪೈವಳಿಕೆ, ವಿನಯ್ ಕುಮಾರ್, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಜಯಂತಿ.ಕೆ, ಸತ್ತಾರ್ ಬಳ್ಳೂರು, ಝಾಕಾರಿಯ ಬಾಯಾರು ಮಾತನಾಡಿದರು. ಸ್ವಾಗತ ಸಮಿತಿ ಕನ್ವಿನರ್ ಆಸ್ಪೀರ್ ಬಾಯಾರು ಸ್ವಾಗತಿಸಿದರು. ಸಿದ್ದೀಕ್ ಆವಳ ವಂದಿಸಿದರು. 11 ಮಂದಿಯ ಲೋಕಲ್ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿಯಾಗಿ ಪುರುಷೋತ್ತಮ ಬಳ್ಳೂರು ಅವರನ್ನು ಆಯ್ಕೆ ಮಾಡಲಾಯಿತು.
ಸಾರ್ವಜನಿಕ ಸಭೆಯು ಸೀತಾರಾಂ ಯೆಚೂರಿ ನಗರ ಬಾಯಾರು ಪದವುನಲ್ಲಿ ನಡೆಯಿತು. ಸಿಪಿಐಎಂ ಕಾಸರಗೋಡು ಜಿಲ್ಲಾ ಸಮಿತಿ ಸದಸ್ಯರಾದ ಪಿ.ಕೆ ನಿಶಾಂತ್ ಉದ್ಘಾಟಿಸಿದರು. ಪುರುಷೋತ್ತಮ ಬಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ರಝಾಕ್ ಚಿಪ್ಪಾರು, ವಿನಯ್ ಕುಮಾರ್, ಚಂದ್ರ ನಾಯ್ಕ.ಎಂ ಮಾತನಾಡಿದರು. ರಾಮಚಂದ್ರ ಮಾಸ್ಟರ್ ಸ್ವಾಗತಿಸಿದರು.