Breaking Posts

6/trending/recent

Hot Widget


Qries
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580.
Type Here to Get Search Results !

8:10:45

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ: 7034338773. 9746368580. Qries Qries Qries Qries Qries

‘ರೋಹನ್ ಇಥೋಸ್’ ಗೆ ಫಾ.ಮುಲ್ಲರ್ ಆಸ್ಪತ್ರೆ ಬಳಿ ಭೂಮಿ ಪೂಜೆ.

‘ರೋಹನ್ ಇಥೋಸ್’ ಗೆ ಫಾ.ಮುಲ್ಲರ್ ಆಸ್ಪತ್ರೆ ಬಳಿ ಭೂಮಿ ಪೂಜೆ.
ಮಂಗಳೂರು: ಕರಾವಳಿಯ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ರೋಹನ್ ಕಾರ್ಪೊರೇಶನ್ ಸಂಸ್ಥೆಯ ನೂತನ ಯೋಜನೆ ‘ರೋಹನ್ ಇಥೋಸ್’ ಇದರ ಭೂಮಿ ಪೂಜೆಯು ಶನಿವಾರ ನಗರದ ಫಾ.ಮುಲ್ಲರ್ ಆಸ್ಪತ್ರೆ ಬಳಿ ನೆರವೇರಿತು. ಫಾ.ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ವಂ|ಫಾ|ರಿಚಾರ್ಡ್ ಕುವೆಲ್ಲೊ ಅವರು ಆಶೀರ್ವದಿಸಿ, ಯೋಜನೆಯು ಯಶಸ್ವಿಯಾಗಿ ಪೂರ್ಣಗೊಂಡು ಜನರ ಬಳಕೆಗೆ ಶೀಘ್ರ ಸಿಗುವಂತಾಗಲಿ ಎಂದರು. ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ಕಳೆದೊಂದು ತಿಂಗಳಲ್ಲೇ ರೋಹನ್ ಸಂಸ್ಥೆಯ ನಾಲ್ಕು ಪ್ರಮುಖ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ, ಬಹುತೇಕ ಎಲ್ಲ ಫ್ಲಾಟ್‌ಗಳೂ ಮಾರಾಟಗೊಂಡಿವೆ, ಕಂಕನಾಡಿಯ ಪ್ರಮುಖ ಆಯಕಟ್ಟಿನ ಜಾಗದಲ್ಲಿ ನಿರ್ಮಾಣಗೊಳ್ಳಲಿರುವ ಇಥೋಸ್‌ನ ಉಳಿದ ಫ್ಲಾಟ್‌ಗಳೂ ಕೂಡಾ ಶೀಘ್ರ ಮಾರಾಟಗೊಳ್ಳಲಿವೆ, ಜನರ ಅಭಿರುಚಿಗೆ ತಕ್ಕಂತೆಯೇ, ಸದೃಢವಾದ ಹಾಗೂ ಸಮಕಾಲೀನ ಶೈಲಿಯ ಕಟ್ಟಡಗಳನ್ನು ನಿರ್ಮಿಸುವ ಕಾರಣ ಇದು ಸಾಧ್ಯವಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಅವರು ಮಾತನಾಡಿ, ಕಂಕನಾಡಿ ಪ್ರದೇಶದಲ್ಲಿ ಫಾದರ್ ಮುಲ್ಲರ್‍ಸ್ ಆಸ್ಪತ್ರೆ ಒಂದು ಹೆಗ್ಗುರುತಾಗಿದೆ, ಈಗ ನಿರ್ಮಾಣಗೊಳ್ಳಲಿರುವ ರೋಹನ್ ಇಥೋಸ್ ಇನ್ನೊಂದು ಆಕರ್ಷಕ ಹೆಗ್ಗುರುತಾಗಿ ಮೂಡಿಬರಲಿರುವುದು ಖಚಿತ. ರೋಹನ್ ಮೊಂತೇರೊ ಅವರು ಅವರ ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ಇಷ್ಟು ಎತ್ತರಕ್ಕೇರಿದ್ದಾರೆ ಎಂದರು. ಮಾಜಿ ಶಾಸಕ ಜೆ.ಆರ್.ಲೋಬೊ, ಪತ್ರಕರ್ತ ವಾಲ್ಟರ್ ನಂದಳಿಕೆ ಶುಭಹಾರೈಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಮೇಯರ್‌ಗಳಾದ ಎಂ.ಶಶಿಧರ ಹೆಗ್ಡೆ, ಭಾಸ್ಕರ್ ಕೆ, ನಿಕಟಪೂರ್ವ ಕಾರ್ಪೊರೇಟರ್‌ಗಳಾದ ನವೀನ್ ಡಿಸೋಜ, ಜೆಸಿಂತಾ ಆಲ್ಪ್ರೆಡ್, ವಕೀಲ ಜಗದೀಶ್ ಶೇಣವ, ಮುಡಾ ಮಾಜಿ ಅಧ್ಯಕ್ಷ ರವಿಶಂಕರ್ ಮಿಜಾರ್, ಭಾಸ್ಕರ್, ರೋಹನ್ ಕಾರ್ಪೊರೇಷನ್ ನಿರ್ದೇಶಕ ಡಿಯೊನ್ ಮೊಂತೆರೊ ಉಪಸ್ಥಿತರಿದ್ದರು. ಸಾಹಿಲ್ ಝಹೀರ್ ನಿರೂಪಿಸಿದರು, ರೋಹನ್ ಮೊಂತೇರೊ ವಂದಿಸಿದರು.
ಬಾಕ್ಸ್ ವಿಶ್ವದರ್ಜೆಯ ಸೌಲಭ್ಯದ ರೋಹನ್ ಇಥೋಸ್ ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ ಬಳಿಯ ನಿವೇಶನದಲ್ಲಿ ಈ ಯೋಜನೆ ವಿಶಿಷ್ಟ ಶೈಲಿಯಲ್ಲಿ ನಿರ್ಮಾಣಗೊಳ್ಳುತ್ತಿದ್ದು ಐಶಾರಾಮಿ ಹಾಗೂ ಆಧುನಿಕ ಸೌಕರ್ಯಗಳನ್ನು ಒಳಗೊಂಡಿದೆ. ೧೫ ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿಯಲ್ಲಿ ೩, ೪ ಬಿಎಚ್‌ಕೆಯ ಫ್ಲಾಟ್‌ಗಳಿದ್ದು ಒಟ್ಟು ೨೮ ಅಪಾರ್ಟ್‌ಮೆಂಟ್‌ಗಳಿರಲಿವೆ. ಇನ್‌ಫಿನಿಟಿ ಸ್ವಿಮ್ಮಿಂಗ್ ಫೂಲ್, ಆಧುನಿಕ ಜಿಮ್, ಇಂಡೋರ್‌ಗೇಮ್ಸ್, ಯೋಗಾ ರೂಮ್, ಮಕ್ಕಳ ಆಟದ ವಲಯ ಮತ್ತು ಬಹು ಉಪಯೋಗಿ ಸಭಾಂಗಣವನ್ನು ಹೊಂದಿದೆ. ತಳ ಮತ್ತು ಕೆಳ ಅಂತಸ್ತುಗಳಲ್ಲಿ ವಿಶಾಲ ಪಾರ್ಕಿಂಗ್ ಸೌಲಭ್ಯವಿದೆ. ಅಪಾರ್ಟ್‌ಮೆಂಟ್‌ಗಳು ವಾಸ್ತು ಪ್ರಕಾರವಾಗಿದ್ದು ಸಿಸಿ ಕೆಮರಾ, ಸ್ವಯಂಚಾಲಿತ ಲಿಫ್ಟ್, ಜನರೇಟರ್ ಮತ್ತು ಇಲೆಕ್ಟ್ರಿಕ್ ಕಾರ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ. ರೋಹನ್ ಇಥೋಸ್ ಯೋಜನೆ ಹೊಸ ಟ್ರೆಂಡ್, ಗುಣಮಟ್ಟ ಮತ್ತು ಗ್ರಾಹಕರ ಅನುಕೂಲತೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣಗೊಳ್ಳುತ್ತಿದೆ. ಆಸ್ಪತ್ರೆಗಳು, ಪೂಜಾ ಸ್ಥಳಗಳು, ರೈಲ್ವೆ ಸ್ಟೇಶನ್, ಸೂಪರ್ ಮಾರ್ಕೆಟ್, ಸಾರ್ವಜನಿಕ ಉದ್ಯಾನ ಮತ್ತು ಶಿಕ್ಷಣ ಸಂಸ್ಥೆಗಳು ಈ ಯೋಜನೆಯ ಸಮೀಪದಲ್ಲೇ ಇವೆ. ಹೆಚ್ಚಿನ ಮಾಹಿತಿ ಅಥವಾ ಬುಕಿಂಗ್‌ಗಾಗಿ, ರೋಹನ್ ಕಾರ್ಪೊರೇಶನ್, ರೋಹನ್ ಸಿಟಿ, ಬಿಜೈ, ಮಂಗಳೂರು ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. https://rohancorporation.in/

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Namma Manjeswara Official Whatsapp Group 2

Qries

Advertisement

Qries Qries Qries Qries Qries Qries Qries

News

Advt

Advertisement

Qries Qries Qries