ಪುತ್ತಿಗೆ ರಾಷ್ಟ್ರೀಯ ಕಾಂಗ್ರೆಸ್ ಮಂಡಲ ಅಧ್ಯಕ್ಷ ಸುಲೈಮಾನ್ ಮೇಲೆ ಸಿಪಿಐಎಂ ಗೂಂಡಾ ದಾಳಿ – ಸೋಮಶೇಖರ್ ಜೆ.ಯಸ್ ಖಂಡನೆ.
ಏಪ್ರಿಲ್ 16, 2025
0
ಪುತ್ತಿಗೆ ರಾಷ್ಟ್ರೀಯ ಕಾಂಗ್ರೆಸ್ ಮಂಡಲ ಅಧ್ಯಕ್ಷ ಸುಲೈಮಾನ್ ಮೇಲೆ ಸಿಪಿಐಎಂ ಗೂಂಡಾ ದಾಳಿ – ಸೋಮಶೇಖರ್ ಜೆ.ಯಸ್ ಖಂಡನೆ.
ಮಂಜೇಶ್ವರ: ಯುಡಿಎಫ್ ಪುತ್ತಿಗೆ ಪಂಚಾಯತ್ ಅಧ್ಯಕ್ಷರೂ, ಕಾಂಗ್ರೆಸ್ ಮಂಡಲ ಅಧ್ಯಕ್ಷರೂ, ಪುತ್ತಿಗೆ ಎಣ್ಮಕಜೆ ಅರ್ಬನ್ ಸೊಸೈಟಿಯ ನಿರ್ದೇಶಕರು ಆಗಿರುವ ಸುಲೈಮಾನ್ ಊಜಂಪದವಿಗೆ ಸಿಪಿಐಎಂ ಗೂಂಡಾಗಳು ಹಲ್ಲೆ ಮಾಡಿರುವುದನ್ನು ಯಾವುದೇ ರೀತಿಯಲ್ಲಿ ಕ್ಷಮಿಸಲು ಸಾಧ್ಯವಿಲ್ಲ, ಪ್ರಜ್ಞಾವಂತ ನಾಗರಿಕರು ಸಿಪಿಎಂ ಆಡಳಿತದಲ್ಲಿ ಬದುಕಲು ಕಷ್ಟ ಎಂಬುದು ಇದು ತೋರಿಸುತ್ತದೆ
ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಸುಲೈಮಾನ್ ಅವರನ್ನು ಸಿಪಿಎಂ ಗೂಂಡಾಗಳು ಏಕಾಏಕಿ ದಾಳಿ ಮಾಡಿದ್ದು,ಇದು ಫಾಸಿಸ್ಟ್ ಶೈಲಿಯಾಗಿದೆ. ಪುತ್ತಿಗೆಯ ಶಾಂತಿಯುತ ಪರಿಸರವನ್ನು ಹಾಳುಮಾಡಲು ಉದ್ದೇಶಿತ ಷಡ್ಯಂತ್ರವಿದು , ಇದರ ವಿರುದ್ಧ ಕಾಂಗ್ರೆಸ್ ನ ಎಲ್ಲ ಕಾರ್ಯಕರ್ತರು ಒಂದಾಗಿ ಪ್ರತಿಭಟಿಸಲಿದ್ದೇವೆ. ಎಂದು ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೇ ಯಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.