ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ್ದ ಮಂಜೇಶ್ವರ ಯುವಕ ನಿಗೂಢ ಮೃತ್ಯು.
ಏಪ್ರಿಲ್ 21, 2025
0
ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ್ದ ಮಂಜೇಶ್ವರ ಯುವಕ ನಿಗೂಢ ಮೃತ್ಯು.
ಮಂಜೇಶ್ವರ : ಗೆಳೆಯನ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ಯುವಕನೋರ್ವ ನಿಗೂಢ ಮೃತಪಟ್ಟ ಘಟನೆ ಮಂಜೇಶ್ವರದಲ್ಲಿ ವರದಿಯಾಗಿದೆ. ಮಂಜೇಶ್ವರ 10ನೇ ಮೈಲು ನಿವಾಸಿ ದಿ ಹಸೈನಾರ್ ವರ ಪುತ್ರ ಅಹಮದ್ ಹಸನ್ ಯಾನೇ ನವ್ ಮಾನ್ (25) ಮೃತಪಟ್ಟ ಯುವಕ. ಆದಿತ್ಯವಾರ ರಾತ್ರಿ ಮೀಂಜ ಮೂಡಂಬೈಲಿನಲ್ಲಿರುವ ಖಾಸಗಿ ರೆಸಾರ್ಟ್ ಒಂದರಲ್ಲಿ ಗೆಳೆಯರ ಜೊತೆ ಔತಣಕೂಟದಲ್ಲಿ ಭಾಗಿಯಾಗಿದ್ದ ಈ ಯುವಕ ರೆಸಾರ್ಟ್ ನಲ್ಲಿಯೇ ಕುಸಿದು ಬಿದ್ದಿದ್ದು, ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರೂ ಫಲಕಾರಿಯಾಗಲಿಲ್ಲ. ಶವ ಮಹಜರಿನ ಬಳಿಕವೇ ಸಾವಿಗೆ ಕಾರಣವೇನೆಂಬುದು ತಿಳಿದು ಬರಬೇಕಾಗಿದೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮೃತ ಯುವಕ ನವ್ ಮಾನ್ ಸೌದಿ ಅರೇಬಿಯಾದ ಜೆದ್ದಾದಲ್ಲಿ ಸಿಸಿ ಕ್ಯಾಮೆರಾಗಳ ಅಂಗಡಿ ಹೊಂದಿದ್ದನು. ಈತ ಮಂಜೇಶ್ವರ ಗ್ರಾಮ ಪಂಚಾಯತು ಸದಸ್ಯ, ಮುಸ್ಲಿಂ ಲೀಗ್ ಮುಖಂಡ ಮುಸ್ತಫಾ ಉದ್ಯಾವರ ಸಹೋದರಿಯ ಪುತ್ರ. ಗೆಳೆಯನ ವಿವಾಹ ಬುಧವಾರ ನಡೆಯಲಿದೆ.