ಪಲ್ಲೆದಪಡ್ಪು ಜುಮಾ ಮಸೀದಿಯ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಹಲವಾರು ವರ್ಷಗಳ ಕಾಲ ಸೇವೆಗೈದ ನೆಕ್ಕಿತಲ ನಿವಾಸಿ ಮೊಯ್ದೀನ್ ಕುಂಞಿ (88) ನಿಧನ.
ಮೇ 28, 2025
0
ಪಲ್ಲೆದಪಡ್ಪು ಜುಮಾ ಮಸೀದಿಯ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಹಲವಾರು ವರ್ಷಗಳ ಕಾಲ ಸೇವೆಗೈದ ನೆಕ್ಕಿತಲ ನಿವಾಸಿ ಮೊಯ್ದೀನ್ ಕುಂಞಿ (88) ನಿಧನ.
ವರ್ಕಾಡಿ:
ಕೊಡ್ಲಮೊಗರಿನ ಪಲ್ಲೆದಪಡ್ಪು ಜುಮಾ ಮಸೀದಿಯ ಕಾರ್ಯದರ್ಶಿ, ಹಾಗೂ ಕೋಶಾಧಿಕಾರಿಯಾಗಿ ಹತ್ತು ಹಲವು ವರ್ಷಗಳ ಕಾಲ ಸೇವೆ ಗೈದ ನೆಕ್ಕಿತಲ ನಿವಾಸಿ ಮೊಯ್ದೀನ್ ಕುಂಞಿ (88) ಸ್ವ - ಗೃಹದಲ್ಲಿ ನಿಧನರಾದರು.
ಮೃತರು 1970 ರ ಕಾಲದಲ್ಲಿ ಪಲ್ಲೆದಪಡ್ಪುನಲ್ಲಿ ಸಾಕ್ಷರಾದವರಲ್ಲಿ ಒಬ್ಬರಾಗಿದ್ದರು. ಆದರಿಂದ ಊರಿನ ಮಸೀದಿಯ ಕಾರ್ಯದರ್ಶಿ ಹುದ್ದೆಯಲ್ಲಿ ಬಹಳ ಹಿಂದಿನಿಂದಲೂ ನಿಯತ್ತಾಗಿ ದುಡಿಯುತ್ತಿದ್ದರು. ಮೃತರ ಅಂತಿಮ ದರ್ಶನ ನಂತರ ಇಂದು ಬೆಳ್ಳಗೆ 9 ಘಂಟೆಗೆ ಪಲ್ಲೆದ ಪಡ್ಪು ಮಸೀದಿಯ ದಫನ ಭೂಮಿಯಲ್ಲಿ ದಫನ ಮಾಡಲಾಗುವುದು.
ಮೃತರು ಪತ್ನಿ ಸಾರಮ್ಮ, ಮಕ್ಕಳಾದ ಉಸ್ಮಾನ್, ಅಬ್ದುಲ್ಲ (ಲುಲು ಮಜೀರ್ಪಳ್ಳ), ಮಜೀದ್ ಕೆ.ಜಿ.ಯನ್ (ವರ್ಕಾಡಿ ನ್ಯೂಸ್) ಮತ್ತು ಬಶೀರ್ ಹಾಗೂ ಆರು ಹೆಣ್ಣುಮಕ್ಕಳು ಅಳಿಯಂದಿರು , ಸೊಸೆಯಂದಿರು ಮತ್ತು ಅಪಾರ ಬಂಧು - ಬಳಗ mವನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಧಾರ್ಮಿಕ, ರಾಜಕೀಯ ನಾಯಕರು ಬೇಟಿ ನೀಡಿ ಸಂತಾಪ ಸೂಚಿಸಿದರು.