ಎರಡು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 32.05 ಕೆಜಿ ಗಾಂಜಾದೊಂದಿಗೆ ಉಪ್ಪಳ ಸೊಂಕಾಲ್ ಕೊಡಂಗೆಯ ಅಶೋಕ (45) ಬಂಧನ.
ಜೂನ್ 01, 2025
0
ಎರಡು ಗೋಣಿ ಚೀಲದಲ್ಲಿ ತುಂಬಿಸಿಟ್ಟಿದ್ದ 32.05 ಕೆಜಿ ಗಾಂಜಾದೊಂದಿಗೆ ಉಪ್ಪಳ ಸೊಂಕಾಲ್ ಕೊಡಂಗೆಯ ಅಶೋಕ (45) ಬಂಧನ.
ಉಪ್ಪಳ: ಮಂಗಲ್ಪಾಡಿಯ ಸೋಂಕಾಲ್ ಕೊಡಂಗೆಯಲ್ಲಿ ಭಾರಿ ಪ್ರಮಾಣದ ಗಾಂಜಾವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎರಡು ಗೋಣಿ ಚೀಲದಲ್ಲಿ ತುಂಬಿಸಿ, ಕಟ್ಟಿಟ್ಟ ಸ್ಥಿತಿಯದ್ದ 32.05 ಕೆಜಿ ಗಾಂಜಾದೊಂದಿಗೆ ಕೊಡಂಗೆಯ ಕೌಶಿಕ್ ನಿಲಯದ ನಿವಾಸಿ ಎ. ಅಶೋಕ (45) ಎಂಬಾತನನ್ನು ಪೊಲೀಸರು ನಿನ್ನೆ (ಶನಿವಾರ ) ರಾತ್ರಿ 11 ಗಂಟೆ ವೇಳೆ ಮನೆಯಲ್ಲಿ ಬಂಧಿಸಿದ್ದಾರೆ. ಪೊಲೀಸರು ನಡೆಸಿದ ಶೋಧದಲ್ಲಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿಸಿದ ಅಶೋಕ್ ರನ್ನು ಪೊಲೀಸರು ವಿಚಾರಣೆಗೊಳಪಡಿಸುತ್ತಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಇ. ಅನೂಪ್ ಕುಮಾರ್, ಎಸ್.ಐ. ಉಮೇಶನ್ ನೇತೃತ್ವದ ತಂಡ ಗಾಂಜಾವನ್ನು ವಶಪಡಿಸಿದ್ದಾರೆ.