ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ - 10% ಡಿವಿಡೆಂಟ್ ಘೋಷಣೆ.
ನವೆಂಬರ್ 29, 2023
0
ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆ - 10% ಡಿವಿಡೆಂಟ್ ಘೋಷಣೆ.
ವರ್ಕಾಡಿ: ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಒಪರೇಟಿವ್ ಸೊಸೈಟಿಯ ವಾರ್ಷಿಕ ಮಹಾಸಭೆಯು ಸುಂಕದಕಟ್ಟೆ ವಿಶ್ವ ಪ್ರಭಾ ಹಾಲ್ ನಲ್ಲಿ ಸೊಸೈಟಿಯ ಅಧ್ಯಕ್ಷರಾದ ವಿಶ್ವನಾಥ ಕುದುರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ಅಧ್ಯಕ್ಷರಾದ ಹಾಗೂ ಆಡಳಿತ ಮಂಡಳಿ ಸದಸ್ಯರಾದ ಭಾರತಿ S, ಉಪಾಧ್ಯಕ್ಷರಾದ ಸುಂದರ ಜೋಗಿಬೆಟ್ಟು ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ರವೀಂದ್ರ ಮಡ್ವ 2022 - 23 ನೇ ವರ್ಷದ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ, 2024 - 25 ನೇ ವರ್ಷದ ಮುಂಗಡ ಬಜೆಟ್ ಮಂಡಿಸಿದರು. ಸೊಸೈಟಿಯ ಅಧ್ಯಕ್ಷರು ಮಾತನಾಡಿ ವರ್ಕಾಡಿ ಅಗ್ರಿಕಲ್ಚರಿಸ್ಟ್ ವೆಲ್ಫೇರ್ ಕೋ ಆಪರೇಟಿವ್ ಸೊಸೈಟಿಯು ಸದಸ್ಯರಿಗೆ ರಿಸ್ಕ್ ಫಂಡ್ ಯೋಜನೆ, ಠೇವಣಿ ವಿಮಾ ಗ್ಯಾರಂಟಿ ಯೋಜನೆ, ತನ್ನ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಚಿನ್ನಾಭರಣ ಸಾಲ ಜಾಮೀನು ಸಾಲ, ವಸ್ತು ಅಡಮಾನ ಸಾಲ ಇನ್ನಿತರ ಸಾಲಗಳನ್ನು ಯೋಗ್ಯ ರೀತಿಯಲ್ಲಿ ಪೂರೈಸಲು ಪ್ರಯತ್ನಿಸುತ್ತಿದೆ ಎಂದರು. ಸೊಸೈಟಿಯು 2022 - 23ನೇ ವರ್ಷದಲ್ಲಿ 94 ಕೋಟಿ ವ್ಯವಹಾರ ಮಾಡಿದೆ, ಈ ವರ್ಷದಲ್ಲಿ ಐದು ಲಕ್ಷದ 72,000 ಲಾಭ ಗಳಿಸಿದೆ. ಸದಸ್ಯರಿಗೆ 10 ಶೇಕಡ ಡಿವಿಡೆಂಟ್ ಘೋಷಣೆ ಮಾಡಿದೆ ಎಂದು ತಿಳಿಸಿದರು. ಸಭೆಯಲ್ಲಿ ಸೊಸೈಟಿಯ ಸದಸ್ಯರ ಮಕ್ಕಳಿಗೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದವರಿಗೆ ವಿದ್ಯಾರ್ಥಿ ಪುರಸ್ಕಾರ ನಗದು ನೀಡಿ ಸನ್ಮಾನಿಸಲಾಯಿತು. ಸಭೆಯಲ್ಲಿ ಸೊಸೈಟಿಯ ಆಡಳಿತ ಮಂಡಳಿ ಸದಸ್ಯರಾದ ಭಾರತಿ S, ಹಾಗೂ ಸೊಸೈಟಿಯ ಮಾಜಿ ಉಪಾಧ್ಯಕ್ಷರಾದ ಡಿ ಬೂಬ, ಚಂದ್ರಹಾಸ ಶೇಟ್ಟಿ ಮಾಸ್ಟರ್ ಕಣಿಯೂರ್, ಗಣೇಶ ಪಾವೂರು ಮುಂತಾದವರು ಮಾತನಾಡಿದರು. ಸೊಸೈಟಿಯ ಕಾರ್ಯದರ್ಶಿ ರವೀಂದ್ರ ಮಡ್ವ ಸ್ವಾಗತಿಸಿ, ಉಪಾಧ್ಯಕ್ಷರಾದ ಸುಂದರ ಜೋಗಿಬೆಟ್ಟು ವಂದಿಸಿದರು.