ಮಂಜೇಶ್ವರದ ಪ್ರಸಿದ್ದ ಮುದ್ರಣ ಸಂಸ್ಥೆ "ಭಗವತೀ ಪ್ರಿಂಟಿಂಗ್ ಪ್ರೆಸ್ (BPP Manjeshwar)" ಮಾಲಕ ಕೀರ್ತೇಶ್ವರ ನಿವಾಸಿ ಸೀತಾರಾಮ (65) ನಿಧನ.
ನವೆಂಬರ್ 30, 2023
0
ಮಂಜೇಶ್ವರದ ಪ್ರಸಿದ್ದ ಮುದ್ರಣ ಸಂಸ್ಥೆ "ಭಗವತೀ ಪ್ರಿಂಟಿಂಗ್ ಪ್ರೆಸ್ (BPP Manjeshwar)" ಮಾಲಕ ಕೀರ್ತೇಶ್ವರ ನಿವಾಸಿ ಸೀತಾರಾಮ (65) ನಿಧನ.
ಮಂಜೇಶ್ವರ: ಮಂಜೇಶ್ವರದಲ್ಲಿ 45 ದಶಕಗಳ ಸಾರ್ಥಕತೆಯ "ಪ್ರಿಂಟಿಂಗ್ ಪ್ರೆಸ್" ಮುದ್ರಣ ಸಂಸ್ಥೆಯಾಗಿರುವ ಭಗವತೀ ಪ್ರಿಂಟಿಂಗ್ ಪ್ರೆಸ್ (BPP Manjeshwar) ಮಾಲಕರಾದ ಕೀರ್ತೇಶ್ವರ ಬಳಿಯ ನಿವಾಸಿ ಸೀತಾರಾಮ (65) ಅಲ್ಪ ಕಾಲದ ಅಸೌಕ್ಯದಿಂದ ಬಳಲುತ್ತಿದ್ದು ಇಂದು ಬೆಳಿಗ್ಗೆ 8 ಗಂಟೆಗೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಹರಿಣಾಕ್ಷಿ ಮಕ್ಕಳಾದ: ಧನಲಕ್ಷ್ಮಿ, ಅಳಿಯ ಅಭಿಜಿತ್ ಕೀರ್ತೇಶ್ವರ, ಸಹೋದರರಾದ: ಸುಂದರ, ಗಂಗಾಧರ, ಜನಾರ್ಧನ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ತಂದೆ ಸೋಮಯ್ಯ, ತಾಯಿ ಲಕ್ಷ್ಮಿ, ಹಾಗೂ ಏಕ ಸಹೋದರ ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ 11.30 ಗಂಟೆ ವೇಳೆ ಗುಡ್ಡೆಕ್ಕೇರಿ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.