ಕೇರಳ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಜಯಿಯಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡ ಸರಣ್ಯ ಸಿ.ಎಸ್. ರಿಗೆ ಬಿ.ಎಂ.ಎಸ್ ನಿಂದ ಸನ್ಮಾನ.
ನವೆಂಬರ್ 30, 2023
0
ಕೇರಳ ರಾಜ್ಯಮಟ್ಟದ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಜಯಿಯಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಗೊಂಡ ಸರಣ್ಯ ಸಿ.ಎಸ್. ರಿಗೆ ಬಿ.ಎಂ.ಎಸ್ ನಿಂದ ಸನ್ಮಾನ.
ಕಾ ಸರಗೋಡು: ಪಾಲಕ್ಕಾಡ್ ನಲ್ಲಿ ನಡೆದ ರಾಜ್ಯಮಟ್ಟದ ಸಬ್ ಜೂನಿಯರ್ ವಿಭಾಗದ ಕಬ್ಬಡ್ಡಿ ಪಂದ್ಯಾಟದಲ್ಲಿ ವಿಜಯಿಯಾಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕಾಸರಗೋಡು ಬಿ.ಎಂ.ಎಸ್ ತಲೆಹೊರೆ ಕಾರ್ಮಿಕ ಶ್ರೀಧರ ಚೇನಕ್ಕೋಡ್ ರವರ ಪುತ್ರಿ ಸರಣ್ಯ ಸಿ. ಎಸ್. ರವರಿಗೆ ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಬಿ.ಎಂ.ಎಸ್ ವತಿಯಿಂದ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ ಶಾಲು ಹೊದಿಸಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಬಿ.ಎಂ.ಎಸ್ ಕಾಸರಗೋಡು ವಲಯ ಕಾರ್ಯದರ್ಶಿ ರಿಜೇಶ್ ಜೆ.ಪಿ ನಗರ್, ಶಿವನ್ ತಾಳಿಪಡ್ಪ್ಪು, ಬಾಬು ಮೊನ್ ಚೆರ್ಕಳ, ರಂಜಿತ್ ಬೇವಿಂಜೆ, ಪುಷ್ಪರಾಜ್ ಕೊರಕ್ಕೊಡ್ ಹಾಗೂ ಹಲವಾರು ಕಾರ್ಮಿಕರು ಭಾಗವಹಿಸಿದರು.