ಕೇಂದ್ರ ಯೋಜನೆ ಗಳ ಅನಾವರಣ ವಿಕಾಸಿತ ಭಾರತ ಯಾತ್ರೆ ಮಂಜೇಶ್ವರ ಆಗಮನ ಮೋದಿಯಿಂದ ಆನ್ಲೈನ್ ನಲ್ಲಿ ಕಾರ್ಯಕ್ರಮ ಉದ್ಘಾಟನೆ
ನವೆಂಬರ್ 30, 2023
0
ಕೇಂದ್ರ ಯೋಜನೆ ಗಳ ಅನಾವರಣ ವಿಕಾಸಿತ ಭಾರತ ಯಾತ್ರೆ ಮಂಜೇಶ್ವರ ಆಗಮನ ಮೋದಿಯಿಂದ ಆನ್ಲೈನ್ ನಲ್ಲಿ ಕಾರ್ಯಕ್ರಮ ಉದ್ಘಾಟನೆ.
ಮಂಜೇಶ್ವರ: ಕೇಂದ್ರ ಯೋಜನೆಗಳ ಸಮಗ್ರ ಮಾಹಿತಿ ನೀಡುವ ವಿಡಿಯೋ ಸಹಿತ ನೇರ ಫಲನುಭವಿಗಳ ಜೊತೆ ಮೋದಿ ಸಂಭಾಷಣೆ. ದೇಶದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಚರಿಸಿ ವಿಕಾಸಿತಾ ಭಾರತ ಡಿಜಿಟಲ್ ವಾಹನ ಜಾಥಾ ಮಂಜೇಶ್ವರ ಗೋವಿಂದ ಪೈ ನಿವಾಸ ಗಿಳಿವಿಂಡುನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಜರಗಿತು.
ಮಂಜೇಶ್ವರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಎ. ಸುಧೀರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ಜಿಲ್ಲಾ ಉಸ್ತುವಾರಿ, ನೇತೃತ್ವದಲ್ಲಿ, ಹಾಗೂ ಪಂಚಾಯತ್ ಉಸ್ತುವಾರಿ ಭರತ್ ಶೆಟ್ಟಿ ನೇತೃತ್ವ ನೀಡಿದರು. ಕೇಂದ್ರ ಯೋಜನೆಗಳ ಫಲನುಭವಿಗಳು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಕೇಂದ್ರ ಯೋಜನೆಗಳ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಜನಪ್ರತಿನಿಧಿಗಳಾದ ಆದರ್ಶ್ ಬಿ.ಎಂ, ಯಾದವ ಬಡಾಜೆ, ಲಕ್ಷ್ಮಣ್ ಕುಚ್ಚಿಕಾಡ್, ಸುಪ್ರಿಯಾ ಶೆಣೈ, ರಾಜೇಶ್ ಮಜಾಲ್, ಕುಟುಂಬ ಶ್ರೀ ಮುಖ್ಯಸ್ಥೆ ಜಯಶ್ರೀ ಮಾಡ, ಕೃಷಿ ಅಧಿಕಾರಿ ಸರಿತಾ ಹೆಗ್ಡೆ, ಮೊದಲಾದವರು ಉಪಸ್ಥಿತರಿದ್ದರು. ಮಂಜೇಶ್ವರ ಕಾರ್ಯಕ್ರಮದ ಉದ್ಘಾಟನೆ ಮೋದಿಯವರು ನೇರವಾಗಿ ಆನ್ಲೈನ್ ನಲ್ಲಿ ಭಾಗವಹಿಸಿ ಅಚ್ಚರಿ ಮೂಡಿಸಿದರು. ಕಾರ್ಯಕ್ರಮದಲ್ಲಿ ಹರೀಶ್ಚಂದ್ರ ಎಂ, ಕೃಷ್ಣ ಶಿವಕೃಪಾ ಕುಂಜತ್ತೂರು, ಮಾಧವ, ಮಜೀದ್ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು.