ಮರ ಗುತ್ತಿಗೆದಾರ ಪೆರ್ದನೆ ವಿನ್ಸೆಂಟ್ ಡಿಸೋಜ ಅಸೌಖ್ಯದಿಂದ ನಿಧನ.
ನವೆಂಬರ್ 30, 2023
0
ಮರ ಗುತ್ತಿಗೆದಾರ ಪೆರ್ದನೆ ವಿನ್ಸೆಂಟ್ ಡಿಸೋಜ ಅಸೌಖ್ಯದಿಂದ ನಿಧನ.
ಪೆರ್ಲ: ಮರ ಮತ್ತು ನಿರ್ಮಾಣ ಗುತ್ತಿಗೆದಾರರಾಗಿದ್ದ ಶೇಣಿ ಸಮೀಪದ ಪೆರ್ದನೆ ವಿನ್ಸೆಂಟ್ ಡಿ ಸೋಜ (55) ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಪೆರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾದರು. ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಇವರು ಮಂಗಳವಾರ ಮನೆ ಸಮೀಪ ಬಿದ್ದು ತೀವ್ರ ಗಾಯಗೊಂಡಿದ್ದರು. ತಕ್ಷಣ ಕಾಸರಗೋಡು ಬಳಿಕ ಪೆರಿಯಾರಂ ಮೆಡಿಕಲ್ ಕಾಲೇಜಿಗೆ ಕೊಂಡೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇವರು ಇಂದು ಬೆಳಗ್ಗೆ ಮೃತಪಟ್ಟ ಬಗ್ಗೆ ತಿಳಿದು ಬಂದಿದೆ. ಉತ್ತಮ ವಾಲಿಬಾಲ್, ಕಬಡ್ಡಿ ಆಟಗಾರರಾಗಿದ್ದ ಇವರು ಬಳಿಕ ಮಧುಮೇಹ ಕಾಯಿಲೆಗೆ ತುತ್ತಾಗಿದ್ದರು. ಮೃತರು ಪತ್ನಿ ಡೈಸಿ, ಮಕ್ಕಳಾದ ಡೇಷ್ಮಾ, ವಿನ್ಸಿಕಾ, ಡೈಸನ್ ಎಂಬವರನ್ನು ಅಗಲಿದ್ದಾರೆ.