"ಗ್ರೀನ್ ಕ್ಲೀನ್ ವರ್ಕಾಡಿ" ಎಂಬ ಘೋಷ ವಾಕ್ಯದೊಂದಿಗೆ ವರ್ಕಾಡಿ ಗ್ರಾಮ ಪಂಚಾಯತ್ ನಲ್ಲಿ ಹರಿತ ರೋಡ್ ಗೆ ಚಾಲನೆ.
ನವೆಂಬರ್ 28, 2023
0
"ಗ್ರೀನ್ ಕ್ಲೀನ್ ವರ್ಕಾಡಿ" ಎಂಬ ಘೋಷ ವಾಕ್ಯದೊಂದಿಗೆ ವರ್ಕಾಡಿ ಗ್ರಾಮ ಪಂಚಾಯತ್ ನಲ್ಲಿ ಹರಿತ ರೋಡ್ ಗೆ ಚಾಲನೆ.
ವರ್ಕಾಡಿ: "ಗ್ರೀನ್ ಕ್ಲೀನ್ ವರ್ಕಾಡಿ" ಎಂಬ ಘೋಷ ವಾಕ್ಯದೊಂದಿಗೆ ವರ್ಕಾಡಿ ಗ್ರಾಮ ಪಂಚಾಯತ್ ನಲ್ಲಿ ಹರಿತ ರೋಡ್ ಗೆ ಚಾಲನೆ ನೀಡಲಾಯಿತು. ವರ್ಕಾಡಿ ಗ್ರಾಮ ಪಂಚಾಯತ್ ಮತ್ತು KAU - ETC ಮಂಜೇಶ್ವರ ಇದರ ಸಹಯೋಗದಲ್ಲಿ ವರ್ಕಾಡಿ ಪಂಚಾಯತ್ ನ 13 ನೇ ಧರ್ಮನಗರ ವಾರ್ಡ್ ನ ಪಿ.ಎಚ್.ಸಿ - ಕೆವಿಕೆ ರಸ್ತೆಯ ಬದಿಗಳಲ್ಲಿ ಹೂವಿನ ಗಿಡಗಳನ್ನು ನೆಡುವ ಮೂಲಕ "ಹರಿತ ರೋಡ್" ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೂವಿನ ಗಿಡಗಳನ್ನು ನೆಡುವ ಮೂಲಕ ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭಾರತಿ ಎಸ್.ಚಾಲನೆ ನೀಡಿದರು. ಪಂಚಾಯತ್ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಸಾಮಾನಿ, ಪಂಚಾಯತ್ ಸದಸ್ಯರಾದ ಇಬ್ರಾಹಿಂ ಧರ್ಮನಗರ, ಕಾರ್ಯದರ್ಶಿ ಅನಿಲ್ ಕುಮಾರ್, ಆಸೂತ್ರಣ ಸಮಿತಿ ಉಪಾಧ್ಯಕ್ಷ ಮೊಹಮ್ಮದ್ ಮಜಾಲ್, ಕೆವಿಕೆ ಪ್ರೊಫೆಸರ್ Dr. ರಮೇಶ್ ಬಾರಿಕ್ಕಾಡ್, ಅಸಿಸ್ಟೆಂಟ್ ಪ್ರೊಫೆಸರ್ Dr. ಅಖಿಲ್ ಅಜಿತ್, ಫಾರ್ಮ್ ಆಫೀಸರ್ ಉಮ್ಮು ರಾಹಿಲ,ಕೆನರಾ ಬ್ಯಾಂಕ್ ಮ್ಯಾನೇಜರ್ ಮಿಥುನ್ ಎಂಕೆ, MGNREGA AE ಅನೀಶ್ ಅಹಮ್ಮದ್, ಓವರ್ ಸೀಯರ್ ಶಹೀದ್, ಪಂಚಾಯತ್ ಉದ್ಯೋಗಸ್ಥರು, ಉದ್ಯೋಗ ಖಾತರಿ ಕಾರ್ಮಿಕರು, ಸಾರ್ವಜನಿಕರು ಉಪಸ್ಥಿತರಿದ್ದರು.