ಸಂಸತ್ ಸದಸ್ಯ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಧಟನಕ್ಕೆ ಜನತೆ ಪಾಠ ಕಲಿಸುವರು - ಬಿ.ವಿ ರಾಜನ್.
ನವೆಂಬರ್ 28, 2023
0
ಸಂಸತ್ ಸದಸ್ಯ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಧಟನಕ್ಕೆ ಜನತೆ ಪಾಠ ಕಲಿಸುವರು - ಬಿ.ವಿ ರಾಜನ್.
ಮಂಜೇಶ್ವರ: ಸಂಸತ್ ಸದಸ್ಯರಾದ ನಾಲ್ಕುವರೆ ವರುಷಗಳಲ್ಲಿ ಮಂಜೇಶ್ವರ ರೈಲ್ವೇ ಸ್ಟೇಷನ್ ಗೆ ಭೇಟಿ ನೀಡದ ರಾಜ್ ಮೋಹನ್ ಉಣ್ಣಿತ್ತಾನ್ ರವರ ಉದ್ಧಟತನಕ್ಕೆ ರಾಜಕೀಯ ವ್ಯತ್ಯಾಸವಿಲ್ಲದೇ ಜನತೆ ಪಾಠ ಕಲಿಸುವರೆಂದು ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಮಂಜೇಶ್ವರ ತಾಲೂಕು ಅಭಿವೃದ್ಧಿ ಸಮಿತಿ ಸದಸ್ಯ ಬಿ.ವಿ ರಾಜನ್ ಹೇಳಿಕೆಯೊಂದರಲ್ಲಿ ತಿಳಿಸಿದರು. ಈ ಹಿಂದೆ ಎ.ಕೆ.ಜಿ, ಕಡನ್ನಪಳ್ಳಿ ರಾಮಚಂದ್ರನ್, ರಾಮಣ್ಣ ರೈ, ಐ. ರಾಮ ರೈ, ಟಿ. ಗೋವಿಂದನ್, ಪಿ. ಕರುಣಾಕರನ್ ಮೊದಲಾದವರು ಸೌಮ್ಯ ವ್ಯಕ್ತಿತ್ವದವರು. ಜನತೆಯೊಂದಿಗೆ ತೋರಿಸುತ್ತಿದ್ದ ಒಡನಾಟವನ್ನು ಉಣ್ಣಿತ್ತಾನ್ ರಂತಹವರು ಕೇಳಿ ತಿಳಿದು ಕೊಳ್ಳಬೇಕಾಗಿದೆ. 27 ನೇ ತಾರೀಕಿನಂದು ಸಂಸತ್ ಸದಸ್ಯರನ್ನು ಕಾಣಲು ಹಾಗೂ ಅವಶ್ಯಕತೆಗಳನ್ನು ವಿಶಧೀಕರಿಸಲು ಯು.ಡಿ.ಎಫ್ ಕಾರ್ಯಕರ್ತರು, ನೇತಾರರು ಮಾತ್ರ ವಲ್ಲ ರೈಲ್ವೇ ಪ್ಯಾಸೆಂಜರ್ ಅಸೋಸಿಯೇಷನಿನ ಮಜೀದ್ ಕೀರ್ತೇಶ್ವರ, ಆರೋಗ್ಯ ಪ್ರವರ್ತಕ ಇಬ್ರಾಹಿಂ, ಎಂ.ಕೆ ಡಿ. ಎಂ.ಕೆ , ಸೈಫುಲ್ಲ ತಂಗಳ್, ಅಬ್ದುಲ್ಲ ಕಜೆ, ಮನ್ಸೂರ್, ಎ.ಐ.ಟಿ.ಯು.ಸಿ ಮುಂದಾಳು ಮುಸ್ತಫಾ ಕಡಂಬಾರ್ ಮೊದಲಾದವರು ಆಗಮಿಸಿದ್ದರು. ಈ ಹಿಂದೆ ಒಂದು ಬಾರಿಯೂ ಪಾರ್ಲಿಮೆಂಟಿನಲ್ಲಿ ತನ್ನ ಭಾಷಣದಲ್ಲಿ ಮಂಜೇಶ್ವರ ರೈಲ್ವೆ ಸ್ಟೇಷನಿನ ಅವಗಣನೆ ಬಗ್ಗೆ ಮಾತನಾಡದ ಉಣ್ಣಿತ್ತಾನ್, ಈ ಹಿಂದೆ ನೀಡಿದ ಮನವಿಗೂ ಉತ್ತರಿಸಿದವರಲ್ಲ. ಶ್ರೀಯುತ ಲಾಲೂ ಪ್ರಸಾದ್ ಯಾದವ್ ರೈಲ್ವೆ ಸಚಿವರಾಗಿದ್ದಾಗ ಮಂಜೇಶ್ವರ ರೈಲ್ವೆ ಸ್ಟೇಷನನ್ನು ಆದರ್ಶ ರೈಲ್ವೆ ಸ್ಟೇಷನ್ ಆಗಿ ಪ್ರಖ್ಯಾಪಿಸಿದ್ದನ್ನು ಆದರೆ ಯಾವುದೇ ಅಭಿವೃದ್ಧಿ ನಡೆಯದನ್ನು ಅವರಿಗೆ ತಿಳಿಸಿದಾಗ ಲಾಲೂ ಪ್ರಸಾದ್ ಯಾದವ್ ಆ ರೀತಿ ಮಂಜೇಶ್ವರ ರೈಲ್ವೆ ಸ್ಟೇಷನನ್ನು ಆದರ್ಶ ರೈಲ್ವೇ ಸ್ಟೇಷನ್ ಆಗಿ ಪ್ರಖ್ಯಾಪಿಸಿಯೇ ಇಲ್ಲ ಎಂದು ತರ್ಕವನ್ನು ಮುಂದಿಟ್ಟಾಗ ನಾವು ಅದನ್ನು ಖಂಡಿಸಿದೆವು. ಆದ್ದರಿಂದ ಉಣ್ಣಿತ್ತಾನ್ ಇನ್ನಾದರೂ ಅವರ ಉದ್ಧಟತನ ಕೈ ಬಿಟ್ಟು ಇನ್ನುಳಿದಿರುವ ಆರು ತಿಂಗಳಲ್ಲಿ ಯಾವುದಾದರು ಅಭಿವೃದ್ಧಿ ಕಾರ್ಯವನ್ನು ರೈಲ್ವೇ ಸಚಿವರಲ್ಲಿ ಒತ್ತಡ ಹೇರಿ ತರಬೇಕೆಂದು ಬಿ.ವಿ ರಾಜನ್ ಆಗ್ರಹಿಸಿದರು.