SDPI ಯ ಪ್ರತಿಭಟನೆ ಎಡರಂಗ ಸರಕಾರವನ್ನು ಸಹಾಯ ಮಾಡುವ ತಂತ್ರವೋ ಅಥವಾ ಆರ್ಥಿಕ ಲಾಭಕ್ಕಿರುವ ಪ್ರಯತ್ನ. - ಮುಸ್ಲಿಂ ಯೂತ್ ಲೀಗ್.
ನವೆಂಬರ್ 29, 2023
0
SDPI ಯ ಪ್ರತಿಭಟನೆ ಎಡರಂಗ ಸರಕಾರವನ್ನು ಸಹಾಯ ಮಾಡುವ ತಂತ್ರವೋ ಅಥವಾ ಆರ್ಥಿಕ ಲಾಭಕ್ಕಿರುವ ಪ್ರಯತ್ನ. - ಮುಸ್ಲಿಂ ಯೂತ್ ಲೀಗ್.
ಮಂಜೇಶ್ವರ: ಕಾಸರಗೋಡು ಎಂ.ಪಿ. ಶ್ರೀ ರಾಜಮೋಹನ್ ಉನ್ನಿತ್ತಾನ್ ಯೂತ್ ಲೀಗ್ ಮನವಿ ಮೇರೆಗೆ ಮಂಜೇಶ್ವರ ರೈಲು ನಿಲ್ದಾಣಕ್ಕೆ ಭೇಟಿ ನೀಡಿದಾಗ ಎಸ್.ಡಿ.ಪಿ.ಐ ಕಾರ್ಯಕರ್ತರು ಗೋ ಬ್ಯಾಕ್ ಕರೆದಿದ್ದು, ನವಕೇರಳ ಯಾತ್ರೆ ಎಂಬ ತ್ಯಾಜ್ಯ ಯಾತ್ರೆಯಿಂದ ಮುಖ ಕಳೆದುಕೊಂಡಿರುವ ಎಡರಂಗ ಸರಕಾರಕ್ಕೆ ಸಹಾಯ ಮಾಡುವ ತಂತ್ರವೋ ಅಥವಾ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಶಕ್ತಿ ಪ್ರದರ್ಶನದ ಮೂಲಕ ಮತಗಳನ್ನು ಮಾರುವ ತಂತ್ರವಾಗಿದೆಯೋ ಎಂದು ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಕೇಳಿದೆ. ಸಂಸದ ರಾಜ್ ಮೋಹನ್ ಉನ್ನಿತಾನ್ ಅವರು ಇದು ಎರಡನೇ ಬಾರಿ ಮಂಜೇಶ್ವರ ರೈಲು ನಿಲ್ದಾಣಕ್ಕೆ ಭೇಟಿ ನೀಡುತ್ತಿರುವುದು.ಇದಕ್ಕೂ ಮುನ್ನ ಮಂಜೇಶ್ವರ ಪಂಚಾಯತ್ ಯು.ಡಿ.ಎಫ್ ಸಮಿತಿಯು ರೈಲ್ವೆ ನಿಲ್ದಾಣದ ಶೋಚನೀಯ ಸ್ಥಿತಿಯ ಬಗ್ಗೆ ಸಂಸದರ ಗಮನಕ್ಕೆ ತಂದಿತು. ಅದರ ಪ್ರಕಾರ ಸಂಸದರು ನಿಲ್ದಾಣವ ಬಗ್ಗೆ ಖಾಲಜಿ ವಹಿಸಿ ಕೆಲವು ಕಾಮಗಾರಿಯು ನಡೆಯುವಂತೆ ಪ್ರಯತ್ನಿಸಿದ ಫಲದಿಂದ ಅಭಿವೃದ್ದಿ ಕಾಮಗಾರಿ ಮುಂದುವರಿಯುತ್ತಿದೆ ಮತ್ತೆ ರೈಲ್ವೇ ಸ್ಟೇಷನಿಗೆ ಭೇಟಿ ನೀಡುವಂತೆ ಯು.ಡಿ.ಎಫ್ ಮತ್ತು ಯೂತ್ ಲೀಗ್ ಸಮಿತಿ ಮನವಿಯಂತೆ ಬಂದ ಸಂಸದರ ನಿಲ್ದಾಣ ಭೇಟಿಯನ್ನು ಚುನಾವಣೆ ಅತ್ತಿರ ಬರುವಾಗಿರುವ ಗಿಮಿಕ್ಕೆಂದು ಆರೋಪಿಸಿ ಪ್ರತಿಭಟಿಸುವುದು ಖಂಡನೀಯ ಮತ್ತು ಎಸ್.ಡಿ.ಪಿ.ಯವರ ಮೂಖ೯ತನವೆಂದು ಯೂತ್ ಲೀಗ್ ನೇತಾರರು ಹೇಳಿದರು. ಇದಕ್ಕೂ ಮುನ್ನ ಮಂಜೇಶ್ವರ ರೈಲು ನಿಲ್ದಾನಕ್ಕೆ ಸಂಸದರು ಭೇಟಿ ನೀಡಿದಾಗ ಅದರ ಬಗ್ಗೆ ಏನೂ ತಿಳಿಯದಿರುವುದು ರಾಜಕೀಯ ಕಾಯ೯ಕತ೯ ರಾಗಿ ಎಸ್.ಡಿ.ಪಿ.ಐ ಮುಖಂಡರ ದೊಡ್ಡ ವೈಫಲ್ಯ ಎಂದು ಯೂತ್ ಲೀಗ್ ಹೇಳಿದೆ. ರೈಲ್ವೆ ಅಭಿವೃದ್ಧಿ ಕುರಿತ ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ ವರದ್ದು ಪ್ರಾಮಾಣಿಕವಾಗಿದ್ದರೆ ರೈಲ್ವೆ ಪ್ರಯಾಣಿಕರ ಸೌಕರ್ಯ ಸಮಿತಿ ಅಧ್ಯಕ್ಷ ಹಾಗೂ ಬಿ.ಜೆ.ಪಿ ಕೇರಳ ಮುಖಂಡ ಪಿ.ಕೆ.ಕೃಷ್ಣದಾಸ್ ಬಂದಾಗ ಪ್ರತಿಭಟಿಸಬೇಕಿತ್ತು, ಆದರೆ ಅವರನ್ನು ಆ ಕಡೆ ನೋಡಲಿಲ್ಲ.ಮಂಜೇಶ್ವರ ರೈಲ್ವೇ ಸಂಬಂಧಿತ ವಿಷಯಗಳಲ್ಲಿ ಎಸ್.ಡಿ.ಪಿ.ಐ ವರು ಇಲ್ಲಿಯವರೆಗೆ ಏನು ಮಾಡಿದ್ದಾರೆ ಎಂದು ತಿಳಿದುಕೊಂಡರೆ ಚೆನ್ನಾಗಿತ್ತು ಒಂದು ಮನವಿಯಾದರೂ ಕೊಟ್ಟಿದ್ದೀರ.
ಅಭಿವೃದ್ಧಿ ವಿಚಾರದಲ್ಲಿ ಎಸ್.ಡಿ.ಪಿ.ಐ ವರಿಗೆ ಯಾವುದೇ ತಿಳಿವಳಿಕೆ ಇಲ್ಲ.
ಚುನಾವಣೆ ಸಮೀಪಿಸುತ್ತಿರುವಾಗ ಆರ್ಥಿಕ ಲಾಭಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಹೊರತು ಬೇರೆಯೇನೂ ಅಲ್ಲ
ಮುಸ್ಲಿಮ್ ಯೂತ್ ಲೀಗ್ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಹನೀಫ್ ಕುಚಿಕ್ಕಾಡ್ ಪ್ರಧಾನ ಕಾರ್ಯದರ್ಶಿ ಮುಬಾರಕ್ ಗುಡ್ಡಕೇರಿ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದರು, .