"ಕಡಲು ಕಡಲಿನ ಮಕ್ಕಳದ್ದು" ಎಂಬ ಘೋಷಣೆಯೊಂದಿಗೆ ಸಿ. ಐ. ಟಿ. ಯು ಮೀನು ಕಾರ್ಮಿಕರ ಸಂಘದ ವತಿಯಿಂದ ಹೊಸಬೆಟ್ಟು ಕಡಪುರದಲ್ಲಿ "ಜಾಗೃತ ಸಭೆ."
ಡಿಸೆಂಬರ್ 23, 2023
0
"ಕಡಲು ಕಡಲಿನ ಮಕ್ಕಳದ್ದು" ಎಂಬ ಘೋಷಣೆಯೊಂದಿಗೆ ಸಿ. ಐ. ಟಿ. ಯು ಮೀನು ಕಾರ್ಮಿಕರ ಸಂಘದ ವತಿಯಿಂದ ಹೊಸಬೆಟ್ಟು ಕಡಪುರದಲ್ಲಿ "ಜಾಗೃತ ಸಭೆ."
ಮಂಜೇಶ್ವರ: "ಕಡಲು ಕಡಲಿನ ಮಕ್ಕಳದ್ದು" ಎಂಬ ಘೋಷಣೆಯೊಂದಿಗೆ ಸಿ. ಐ. ಟಿ. ಯು ಮೀನು ಕಾರ್ಮಿಕರ ಸಂಘ ಹೊಸಬೆಟ್ಟು ಯೂನಿಟ್ ಸಮಿತಿಯ ನೇತೃತ್ವದಲ್ಲಿ ಹೊಸಬೆಟ್ಟು ಕಡಪುರದಲ್ಲಿ ಜಾಗೃತ ಸಭೆ ನಡೆಸಲಾಯಿತು. ಕೇಂದ್ರ ಸರ್ಕಾರದ ವ್ಯಾಪರೀಕರಣ ನೀತಿಗೆದುರಾಗಿ ಸಿ. ಐ. ಟಿ.ಯು ಮೀನು ಕಾರ್ಮಿಕರ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕಾಂ. V. V ರಮೇಶನ್ ಕನ್ಯಾoಗಾಡ್ ಉದ್ಘಾಟಿಸಿ, ಮಾತನಾಡಿದರು. ಕೇಂದ್ರ ಸರ್ಕಾರದ ಕಡಲು ಹಾಗೂ ಕಡಲು ತೀರವನ್ನು ಬಂಡವಾಳ ಶಾಹಿಗಳಿಗೆ ಮಾರಾಟ ಮಾಡುವ ನೀತಿಯನ್ನು ಜಾರಿಗೆ ತರಲು ಪ್ರಯತ್ನ ಮಾಡುತ್ತಿದ್ದು, ಇದರಿಂದ ತೀರ ಪ್ರದೇಶದಲ್ಲಿ ವಾಸಮಾಡುವ ಮೀನು ಕಾರ್ಮಿಕ ಕುಟುಂಬಗಳನ್ನು ಹಾಗೂ ಸಣ್ಣ ಸಣ್ಣ ಮೀನುಗಾರಿಕೆ ನಡೆಸುತ್ತಿರುವ ಕಾರ್ಮಿಕರನ್ನು ದ್ರೋಹಿಸಿ ಬಂಡವಾಳ ಶಾಹಿಗಳು ಮೀನುಗಾರಿಕೆ ಮಾಡುವುದಕ್ಕೆ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲದೆ ದೇಶದಲ್ಲಿ ಕಾರ್ಮಿಕರ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ನಡೆದ ಮೀನು ಕಾರ್ಮಿಕರ ಜಾಗೃತ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಅಂದ್ರು (ಅಂದುನ್ನ) ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಕರುಣಾಕರ ಶೆಟ್ಟಿ, ಮಸೂದ್, ಮೋಹಮದ್ ಭಾವ, ರಿಯಾಸ್ ಮೊದಲಾದವರು ಉಪಸ್ಥಿತರಿದ್ದರು. ಪ್ರಶಾಂತ್ ಕನಿಲ ಸ್ವಾಗತಿಸಿದರು.