ಕೇರಳ ರಾಜ್ಯ ಸರಕಾರ ಮತ್ತು ಮಂಜೇಶ್ವರ ಶಾಸಕರಿಂದ ಮಂಜೇಶ್ವರದ ಅವಗಣಣೆ ಖಂಡನಿಯ - ಬಿಜೆಪಿ
ಡಿಸೆಂಬರ್ 01, 2023
0
ರಾಜ್ಯ ಸರಕಾರ ಮತ್ತು ಮಂಜೇಶ್ವರ ಶಾಸಕರಿಂದ ಮಂಜೇಶ್ವರದ ಅವಗಣಣೆ ಖಂಡನಿಯ - ಬಿಜೆಪಿ.
ಪೈವಳಿಕೆ: ಮಂಜೇಶ್ವರ ಶಾಸಕರ ನಡೆ ಸಂಶನೀಯ ಅವರ ನಿರಂತರ ವಿದೇಶ ಯಾತ್ರೆ ಯಾವ ಉದ್ದೇಶಕ್ಕಾಗಿ ಎಂದು ನಾಡಿನ ಜನತೆಗೆ ತಿಳಿಯಬೇಕು.
ರಾಜ್ಯ ಸರಕಾರ ಮಂಜೇಶ್ವರವನ್ನು ನಿರಂತರವಾಗಿ ಅವಗಣನೆ ಮಾಡುತ್ತಿದೆ. ಪೈವಳಿಕೆಯಲ್ಲಿ ನವ ಕೇರಳ ಉದ್ಘಾಟನೆ ಮಾಡಲು ಪಿನರಾಯಿಗೆ ನೈತಿಕತೆ ಇಲ್ಲ. ಯಾಕೆಂದರೆ ಪೈವಳಿಕೆ ಪಂಚಾಯತ್ ನಲ್ಲಿ ಕಳೆದ 5 ತಿಂಗಳ ಕಾಲ ಪಂಚಾಯತ್ ಕಾರ್ಯದರ್ಶಿಯೇ ಇರಲಿಲ್ಲ, ಇದರಿಂದ ಪಂಚಾಯತ್ ನಲ್ಲಿ ಯೋಜನೆಗಳು, ಫಂಡ್ ಗಳು ನಷ್ಟವಾಗಿರುವ ಬಗ್ಗೆ ಗಂಭೀರ ಚಿಂತನೆ ಮಾಡಬೇಕು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುಧಾಮ್ ಗೋಸಾಡ ಹೇಳಿದರು. ಅವರು ಪೆರ್ಮುದೆ ಪೇಟೆಯಲ್ಲಿ ಬಿಜೆಪಿ ಪೈವಳಿಕೆ ಸೌತ್ ಸಮಿತಿ ಹಮ್ಮಿಕೊಂಡ ಜನ ಪಂಚಾಯತ್ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ವಿಘ್ನೇಶ್ವರ ಮಾಸ್ಟರ್ ಕೆದುಕೋಡಿ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ, ಮುಖಂಡರಾದ ಮಣಿಕಂಠ ರೈ, ಅಶ್ವಿನಿ ಪಜ್ವ, ಎ.ಕೆ ಕಯ್ಯಾರ್, ಸುಬ್ರಮಣ್ಯ ಭಟ್, ಬಾಲಕೃಷ್ಣ, ಚಂದ್ರವತಿ, ಸದಾಶಿವ ಚೇರಲ್ ನೇತೃತ್ವ ನೀಡಿದರು. ಸತೀಶ ಸ್ವಾಗತ ಮಾಡಿದರು.
ಪ್ರಶಾಂತ್ ಜೋಡುಕಲ್ಲು, ವಂದಿಸಿದರು.