ಕೇಂದ್ರ ಯೋಜನೆಗಳು ಸರ್ವ ವ್ಯಾಪಿ. ಹಾಗೂ ಸರ್ವ ಸ್ಪರ್ಶಿ - ಕೆ. ಶ್ರೀಕಾಂತ್.
ಡಿಸೆಂಬರ್ 01, 2023
0
ಕೇಂದ್ರ ಯೋಜನೆಗಳು ಸರ್ವ ವ್ಯಾಪಿ. ಹಾಗೂ ಸರ್ವ ಸ್ಪರ್ಶಿ - ಕೆ. ಶ್ರೀಕಾಂತ್.
ಮಿಂಜ: ಕೇಂದ್ರದ ಯೋಜನೆಗಳು ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿಯಾಗಿದೆ ಎಲ್ಲಾ ಯೋಜನೆಗಳು ದೇಶದ ಪ್ರತಿ ನಾಗರಿಕರಿಗೂ ಫಲಾನುಭವಿಗಳು, ಅದರಲ್ಲಿ ಮತೀಯ ಓಲೈಕೆ, ತಾರತಮ್ಯವಿಲ್ಲ, ಭ್ರಷ್ಟಾಚಾರ ರಹಿತ ಪಾರದರ್ಶಕ ಯೋಜನೆಗಳ ಮೋದಿಜಿಯನ್ನು ಮತ್ತೆ ದೇಶದ ಪ್ರಧಾನಿಯಾಗಲು ಇರುವ ಮಾನ್ಯತೆ ಎಂದು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ನ್ಯಾ.ಕೆ ಶ್ರೀಕಾಂತ್ ಹೇಳಿದರು. ಬಿಜೆಪಿ
ಮಿಂಜ ಪಂಚಾಯತ್ ವತಿಯಿಂದ ಮೀಯಪದವು ಪೇಟೆಯಲ್ಲಿ ಜರಗಿದ ಜನ ಪಂಚಾಯತ್ ಕಾರ್ಯಕ್ರಮ ಹಾಗೂ ಕೆ.ಟಿ ಜಯಕೃಷ್ಣ ಮಾಸ್ಟರ್ ಬಲಿದಾನ ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನೇತಾರರಾದ ಪದ್ಮನಾಭ ರೈ ಅಧ್ಯಕ್ಷತೆ ವಹಿಸಿದ್ದರು. ಮಂಡಲಧ್ಯಕ್ಷ ಆದರ್ಶ್ ಬಿ.ಎಂ, ಜಿಲ್ಲಾ ಉಪಾಧ್ಯಕ್ಷ ಸುಧಾಮ್ ಗೋಸಾಡ, ಮಣಿಕಂಠ ರೈ, ಅಶ್ವಿನಿ ಎಂ.ಎಲ್, ಕೆ. ನಾರಾಯಣ ನಾಯ್ಕ್ ನಡು ಹಿತ್ತಿಲು, ಕುಳೂರು,
ಕೃಷ್ಣ ನಾವಡ, ಕಳ್ಳಿಗೆ ಸದಾನಂದ, ರಂಜಿತ್, ಶಾಲಿನಿ, ಮೋಹನ್, ಸತೀಶ, ಆಶಾಲತಾ, ಕೆ.ವಿ ಭಟ್, ದಾಮೋದರ, ಎಸ್.ನಾರಾಯಣ ಮುಂದಿಲ, ಸಂತೋಷ್ ದೈಗೋಳಿ ಉಪಸ್ಥಿತರಿದ್ದರು. ಕರುಣಾಕರ ರೈ ಸ್ವಾಗತಿಸಿ, ಚಂದ್ರಹಾಸ ಕಡಂಬಾರು ಧನ್ಯವಾದವಿತ್ತರು.