"ಬಿಜೆಪಿ ಸ್ನೇಹ ಯಾತ್ರೆ"ಯ ನಡುವೆ ಉಕ್ಕಿನಡ್ಕ, ಮಣಿಯಂಪಾರೆ, ಇಡಿಯಡ್ಕ ಚರ್ಚಿಗೆ ತೆರಳಿ ಕ್ರಿಸ್ಮಸ್ ಹಬ್ಬದ ಕರಪತ್ರ, ಕೇಕ್ ಹಂಚಿ ಕ್ರಿಸ್ಮಸ್ ಸಂದೇಶ ಸಾರಿದ ನಾಯಕರು.
ಡಿಸೆಂಬರ್ 25, 2023
0
"ಬಿಜೆಪಿ ಸ್ನೇಹ ಯಾತ್ರೆ"ಯ ನಡುವೆ ಉಕ್ಕಿನಡ್ಕ, ಮಣಿಯಂಪಾರೆ, ಇಡಿಯಡ್ಕ ಚರ್ಚಿಗೆ ತೆರಳಿ ಕ್ರಿಸ್ಮಸ್ ಹಬ್ಬದ ಕರಪತ್ರ, ಕೇಕ್ ಹಂಚಿ ಕ್ರಿಸ್ಮಸ್ ಸಂದೇಶ ಸಾರಿದ ನಾಯಕರು.
ಪೆರ್ಲ: ಭಾರತೀಯ ಜನತಾ ಪಕ್ಷ ಎಣ್ಮಕಜೆ ಪಂಚಾಯತು ಸಮಿತಿಯ ಆಶ್ರಯದಲ್ಲಿ ಬಿಜೆಪಿ ಸ್ನೇಹ ಯಾತ್ರೆಯ ಅಂಗವಾಗಿ ಉಕ್ಕಿನಡ್ಕ, ಮಣಿಯಂಪಾರೆ, ಇಡಿಯಡ್ಕ ಚರ್ಚಿಗೆ ಇಂದು ಭೇಟಿ ನೀಡಿ ಕ್ರಿಸ್ಮಸ್ ಹಬ್ಬದ ಶುಭಾಶಯದ ಕರಪತ್ರ ಮತ್ತು ಕೇಕ್ ಕೊಟ್ಟು ಶುಭ ಸಂದೇಶ ಸಾರಲಾಯಿತು. ಈ ವೇಳೆ ಬಿಜೆಪಿ ಕೇರಳ ಕೌನ್ಸಿಲ್ ಸದಸ್ಯರಾದ ವಿ. ರವೀಂದ್ರನ್, ಬಿಜೆಪಿ ಕುಂಬ್ಳೆ ಮಂಡಲ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ ಮಯ್ಯ, ಬಿಜೆಪಿ ಎಣ್ಮಕಜೆ ಸಮಿತಿ ಅಧ್ಯಕ್ಷ ಸುಮಿತ್ ರಾಜ್, ಬಿಜೆಪಿ ನಾಯಕರಾದ ಚಂದ್ರಕಾಂತ್ ಶೆಟ್ಟಿ, ಪುನೀತ್, ವಿನಯ ಉಕ್ಕಿನಡ್ಕ, ಗಣೇಶ್ ಕೆ.ಎನ್, ವೀರೇಂದ್ರ ಪ್ರಸಾದ್ ಮಣಿಯಂಪಾರೆ, ಜಗದೀಶ್ಚಂದ್ರ ಕುತ್ತಾಜೆ, ವಿಜಯ ಆಳ್ವ ವಾಣಿನಗರ ಮುಂತಾದವರು ಉಪಸ್ಥಿತರಿದ್ದರು.