ಕುನಿಲ್ ಇಸ್ಲಾಮಿಕ್ ಸೆಂಟರ್ ಮುಹಮ್ಮದಿಯಾ ಕಾಲೇಜಿನ 8 ನೇ ವಾರ್ಷಿಕೋತ್ಸವ ಮತ್ತು ಎರಡು ದಿನಗಳ ಧಾರ್ಮಿಕ ಉಪನ್ಯಾಸ ಇಂದಿನಿಂದ.
ಮೇ 24, 2025
0
ಕುನಿಲ್ ಇಸ್ಲಾಮಿಕ್ ಸೆಂಟರ್ ಮುಹಮ್ಮದಿಯಾ ಕಾಲೇಜಿನ 8 ನೇ ವಾರ್ಷಿಕೋತ್ಸವ ಮತ್ತು ಎರಡು ದಿನಗಳ ಧಾರ್ಮಿಕ ಉಪನ್ಯಾಸ ಇಂದಿನಿಂದ.
ಕುಂಬಳೆ: ಬಂದ್ಯೋಡು ಸಮೀಪದ ಮುಟ್ಟಂ ಕುನಿಲ್ ಇಸ್ಲಾಮಿಕ್ ಸೆಂಟರ್ ಮುಹಮ್ಮದಿಯಾ ಕಾಲೇಜಿನ 8 ನೇ ವಾರ್ಷಿಕೋತ್ಸವ ಹಾಗೂ ಎರಡು ದಿನಗಳ ಧಾರ್ಮಿಕ ಉಪನ್ಯಾಸ ಹಾಗೂ ಮಜ್ಲಿಸ್-ಎ-ಸೂನೂರ್ ಇಂದು (ಭಾನುವಾರ) ಮತ್ತು ನಾಳೆ (ಸೋಮವಾರ)
(ಮೇ 25, 26) ನಡೆಯಲಿದೆ ಎಂದು ಕುಂಬಳೆ ಪ್ರೆಸ್ ಪೋರಂನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳು ತಿಳಿಸಿದರು. ಇಂದು ಸಂಜೆ 5 ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಸೈಯ್ಯದ್ ಕೆ.ಎಸ್.ಮುಹಮ್ಮದ್ ಶಮೀಮ್ ತಂಙಳ್ ಕುಂಬೋಲ್ ಉದ್ಘಾಟಿಸಲಿದ್ದಾರೆ. ಸಂಜೆ 7.30 ಕ್ಕೆ ಸೈಯದ್ ಯಾಹ್ಯಾ ತಂಙಳ್ ಅಲ್ ಹಾದಿ ಪ್ರಾರ್ಥನೆಯ ನೇತೃತ್ವ ವಹಿಸುವರು. ಸೈಯದ್ ಅಲಿ ಸೈಫುದ್ದೀನ್ ತಂಙಳ್ ಪ್ರಾಸ್ತಾವಿಕವಾಗಿ ಭಾಷಣ ಮಾಡುವರು. ಹಾಫಿಝ್ ಅಬ್ದುಲ್ ರಝಾಕ್ ಅಬ್ರಾರಿ ಪತ್ತನಂತಿಟ್ಟ ಮುಖ್ಯ ಭಾಷಣ ಮಾಡುವರು. ಮೇ.26 ರಂದು ಸಂಜೆ 7:30 ಕ್ಕೆ ಅಲ್ ಮಶ್ಹೂರ್ ಮಜ್ಲಿಸ್-ಎ-ಸುನ್ನೂರ್‍ಗೆ ಸೈಯದ್ ಹಮ್ದುಲ್ಲಾ ತಂಙಳ್ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭವನ್ನು ಸಯ್ಯಿದ್ ಹಾದಿ ತಂಙಳ್ ಅಲ್ ಮಶ್ಹೂರ್ ಉದ್ಘಾಟಿಸಲಿದ್ದಾರೆ. ಸೈಯ್ಯದ್ ಹಾರಿಸ್ ತಂಙಳ್ ಅಲ್-ಐದ್ರೋಸಿ ಅಲ್-ಬಾಖವಿ ಮುಟ್ಟಂ ಪ್ರಾರ್ಥನೆ ನಡೆಸುವರು. ಕಬೀರ್ ಫೈಝಿ ಪೆರಿಂಗಡಿ ಪ್ರಾಸ್ತಾವಿಕ ಉಪನ್ಯಾಸ ನೀಡಲಿದ್ದಾರೆ. ಹಾಫಿಝ್ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರ ಮುಖ್ಯ ಭಾಷಣ ಮಾಡುವರು.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಉಮ್ಮರ್ ಅಪೋಲೋ, ಉಪಾಧ್ಯಕ್ಷರಾದ ಮಹ್ಮದ್ ಮುಟ್ಟಂ, ಅಬೂಬಕರ್ ರಾಜಾ,
ಸ್ವಾಗತ ಸಮಿತಿ ಅಧ್ಯಕ್ಷ ಸೈಯದ್ ಹಮ್ದುಲ್ಲಾ ತಂಙಳ್ ಮೊಗ್ರಾಲ್, ಪ್ರಧಾನ ಸಂಚಾಲಕ ಕಬೀರ್ ಫೈಝಿ ಪೆರಿಂಗಡಿ, ವ್ಯವಸ್ಥಾಪಕ ಬಶೀರ್ ಫೈಝಿ, ಸದರ್ ಮುದರಿಸ್ ಅಬ್ದುಲ್ಲಾ ರಹ್ಮಾನಿ ಉಪಸ್ಥಿತರಿದ್ದರು.