ಕನಿಲ ಶ್ರೀ ಭಗವತೀ ಕ್ಷೇತ್ರದ ಆಚಾರ ಪಟ್ಟವರೂ, ಹಿರಿಯ ಡ್ರೈವರ್ ಶೀನ ದುರ್ಗಿಪಳ್ಳ (73) ನಿಧನ.
ಮೇ 25, 2025
0
ಕನಿಲ ಶ್ರೀ ಭಗವತೀ ಕ್ಷೇತ್ರದ ಆಚಾರ ಪಟ್ಟವರೂ, ಹಿರಿಯ ಡ್ರೈವರ್ ಶೀನ ದುರ್ಗಿಪಳ್ಳ (73) ನಿಧನ.
ಮಂಜೇಶ್ವರ: ಕನಿಲ ಶ್ರೀ ಭಗವತೀ ಕ್ಷೇತ್ರದ ಆಚಾರ ಪಟ್ಟವರು (ಗಿಂಡಿ) ಆಗಿರುವ ಹೊಸಂಗಡಿ ಬಳಿಯ ದುರ್ಗಿಪಳ್ಳ ನಿವಾಸಿ, ವಾಮಂಜೂರು ಊರ್ಯೆಯ ಸದಸ್ಯರಾಗಿ, ಹಲವು ವರ್ಷಗಳಿಂದ ಹೊಸಂಗಡಿ ಪೇಟೆಯಲ್ಲಿ ರಿಕ್ಷಾ ಚಾಲಕ ವೃತ್ತಿಯಲ್ಲಿದ್ದ ಶೀನ (73) ಕಳೆದ ಹಲವು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಅಪರಾಹ್ನ 2 ಗಂಟೆಗೆ ಸ್ವ - ಗೃಹದಲ್ಲಿ ನಿಧನರಾದರು. ಮೃತರ ಅಂತ್ಯಕ್ರಿಯೆಯ ವಿಧಿ ವಿಧಾನಗಳು ಕ್ಷೇತ್ರದ ಪೂರ್ವ ನಿಗದಿಯಂತೆ ಕನಿಲ ಶ್ರೀ ಭಗವತೀ ಕ್ಷೇತ್ರದಲ್ಲಿ ಸಂಜೆ 6 ಕ್ಕೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ. ದಿವಂಗತರಾದ ಕಣ್ಣಪ್ಪ - ಪೊನ್ನಮ್ಮ ದಂಪತಿಯ ಪುತ್ರರಾದ ಶೀನರವರು ಹೊಸಂಗಡಿ ಪೇಟೆಯಲ್ಲಿ "ರಿಕ್ಷಾ ಶೀನಣ್ಣ" ಎಂದೇ ಜನಾನುರಾಗಿದ್ದರು. ಅಲ್ಲದೆ ಅದರ ಮೊದಲು ಕನಿಲ ಟ್ರಾನ್ಸ್ ಪೋರ್ಟ್ ಬಸ್ ನಲ್ಲಿ ಹಾಗೂ ಲಾರಿಯಲ್ಲಿ ಕೂಡಾ ಚಾಲಕರಾಗಿದ್ದರು. ಬಳಿಕ ಕನಿಲ ಕ್ಷೇತ್ರದಲ್ಲಿ ಆಚಾರ ಪಟ್ಟವರ "ಗಿಂಡಿ" ಇಡಿಯುವ ಸ್ಥಾನ ಲಭಿಸಿದ ಬಳಿಕ ರಿಕ್ಷಾ ಚಾಲಕ ವೃತ್ತಿಯನ್ನು ಮುಂದುವರೆಸಿದ್ದರು. ಮೃತರು ಪತ್ನಿ: ಶಶಿಕಲ, ಮಕ್ಕಳಾದ: ಸಂದೀಪ್ (ಅರಸು ಬಸ್ ಚಾಲಕರು), ಪ್ರದೀಪ್, ಪ್ರತಿಭಾ, ಅಳಿಯ : ಅನಿಲ್ ಕುಮಾರ್ ಪುತ್ತೂರು, ಸೊಸೆಯಂದಿರಾದ : ಶರ್ಮಿಳಾ, ಸುಮಿತ್ರಾ, ಸಹೋದರಿ: ಭವಾನಿ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ: ಕನಿಲ ಶ್ರೀ ಭಗವತಿ ಕ್ಷೇತ್ರದ ಭರಣ ಸಮಿತಿ, ಜೀರ್ಣೋದ್ದಾರ ಸಮಿತಿ, ಮಹಿಳಾ ಸಮಿತಿ, ಶ್ರೀ ಭಗವತಿ ಸೇವಾ ಸಂಘ ವಾಮಂಜೂರು ಗಾಡವಾದ ಸಂತಾಪ ಸೂಚಿಸಿದ್ದಾರೆ.