ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಸಂಭ್ರಮದಿಂದ ಜರುಗಿತು ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ.
ಜೂನ್ 04, 2024
0
ಬಾಯಾರು ಪ್ರಶಾಂತಿ ವಿದ್ಯಾ ಕೇಂದ್ರದಲ್ಲಿ ಸಂಭ್ರಮದಿಂದ ಜರುಗಿತು ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ.
ಬಾಯಾರು: ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರು ಇದರ
2024- 25 ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವು ಸಂಸ್ಕೃತಿ ಬಿಂಬಿಸುವ ವಿವಿಧ ಮನರಂಜಿತ ಮೆರವಣಿಗೆ ಹಾಗು ಮಕ್ಕಳ ಪಥ ಸಂಚಲನದ ಮೂಲಕ ಬಹು ವಿಜೃಂಭಣೆಯಿಂದ ಜರಗಿತು .
ಆ ಪ್ರಯುಕ್ತ, ಬೆಳಗ್ಗೆ ವೇದಮೂರ್ತಿ ಶ್ರೀ ಬೋಳಂತ ಕೋಡಿ ರಾಮ ಭಟ್ ಇವರ ನೇತೃತ್ವದಲ್ಲಿ ಗಣಪತಿ ಹವನ ವಾಗಿ, ತದನಂತರ ಸ್ವಾಮಿಯ ನಾಮ ಸಂಕೀರ್ತನೆಯೊಂದಿಗೆ ಪ್ರಾರಂಭವಾಗಿ , ಮಕ್ಕಳಿಗೆ ಸಿಹಿತಿಂಡಿ ವಿತರಿಸಿ ಆದರದಿಂದ ಹೊಸ ಶೈಕ್ಷಣಿಕ ತರಗತಿಗೆ ಸ್ವಾಗತಿಸಲಾಯಿತು. ಶಾಲಾ ಉಪಾಧ್ಯಕ್ಷರಾದ ಶ್ರೀ ಪೆಲತ್ತಡ್ಕ ರಾಮಕೃಷ್ಣಭಟ್ , ಪ್ರಶಾಂತಿ ಶಾಲಾ ಸಂಚಾಲಕರಾದ ಶ್ರೀ ಎಚ್ ಮಹಾಲಿಂಗಭಟ್ ,ಟ್ರಸ್ಟೀ ಸದಸ್ಯರಾದ ಶ್ರೀಕೃಷ್ಣ ಭಟ್ ಉಳುವಾನ, ಪ್ರಾಂಶುಪಾಲರಾದ ಶ್ರೀ ವಾಮನನ್, ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಕ್, ಪೈವಳಿಕೆ ಸೇವಾ ಸಹಕಾರಿ ಸಂಘದ ನಿವೃತ್ತ ಕಾರ್ಯದರ್ಶಿ ಶ್ರೀ ಪರಮೇಶ್ವರ ಮತ್ತು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮಧ್ಯಾಹ್ನ ನಂತರ ಶ್ರೀ ಶಂಕರಾಚಾರ್ಯ ಸಂಸ್ಥಾನಮ್ ಶ್ರೀಮದ್ ಎಡನೀರು ಮಠದ ಶ್ರೀ ಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳರವರ ಆಶೀರ್ವಚನದೊಂದಿಗೆ ,ಡಾ/ಶ್ರೀ. ಟಿ .ಶ್ಯಾಮ್ ಭಟ್ ಇವರಿಗೆ ಹುಟ್ಟೂರಿನ ಅಭಿನಂದನಾ ಕಾರ್ಯಕ್ರಮ ಜರಗಿತು
ಇದೇ ಸಂದರ್ಭದಲ್ಲಿ ಪ್ರಶಾಂತಿ ವಿದ್ಯಾ ಕೇಂದ್ರ ಬಾಯಾರಿನ ರಜತ ಮಹೋತ್ಸವದ ಲಾಂಛನವನ್ನು ಎಡನೀರು ಮಠದ ಸದ್ಗುರುಗಳು ಬಿಡುಗಡೆಗೊಳಿಸಿದರು.
ಈ ಸಮಾರಂಭದಲ್ಲಿ ಕಾಸರಗೋಡಿನ ಹಿರಿಯ ಖ್ಯಾತ ವೈದ್ಯರಾದ ಡಾ.ವಿ ಎಸ್ ರಾವ್, ಪ್ರಶಾಂತಿ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಅಡ್ವಕೇಟ್ ಐ.ವಿ ಭಟ್, ಉಪಾಧ್ಯಕ್ಷರಾದ ಪೆಲತ್ತಡ್ಕ ರಾಮಕೃಷ್ಣ ಭಟ್, ಪ್ರಶಾಂತಿಸೇವಾ ಟ್ರಸ್ಟಿನ ಕೋಶಾಧಿಕಾರಿಯಾಗಿ ಮಾನಿಪ್ಪಾಡಿ ನಾರಾಯಣ ಭಟ್,ಸಂಚಾಲಕರಾದ ಶ್ರೀ ಎಚ್ ಮಹಾಲಿಂಗ ಭಟ್,ಟ್ರಸ್ಟೀ ಸದಸ್ಯರಾದ ಶ್ರೀರಾಮಚಂದ್ರ ಭಟ್, ಉಳುವಾನ ಶ್ರೀ ಕೃಷ್ಣ ಭಟ್,ಪ್ರಾಂಶುಪಾಲರಾದ ಶ್ರೀ ವಾಮನನ್,ಮಾರ್ಗದರ್ಶಕರಾದ ಶ್ರೀ ಕೃಷ್ಣ ನಾಯಕ್ ಉಪಸ್ಥಿತರಿದ್ದರು
ಸಂಚಾಲಕರಾದ ಎಚ್. ಮಹಾಲಿಂಗ ಭಟ್ ಸ್ವಾಗತಿಸಿ,
ಹಿರಣ್ಯ ವೆಂಕಟೇಶ್ ಭಟ್ ನಿರೂಪಣೆಯೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು,
ಪ್ರಾಂಶುಪಾಲರಾದ ಶ್ರೀ ವಾಮನನ್ ಧನ್ಯವಾದವಿತ್ತರು
ಮಕ್ಕಳ ಪೋಷಕರ ಜತೆ ಹಲವು ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.
ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳ ಕಠಿಣ ಪರಿಶ್ರಮ ಭಾಗವಹಿಸುವಿಕೆ ಪ್ರಶಾಂತಿ ವಿದ್ಯಾ ಕೇಂದ್ರ ದ ರಜತ ಮಹೋತ್ಸವಕ್ಕೆ ನಾಂದಿಯಾದಂತಿತ್ತು.ಊರ ಪರವೂರ ಹೆತ್ತವರು ಈ ಸಮಾರಂಭಕ್ಕೆ ಸಾಕ್ಷಿಯಾದರು.