ಮೊಗ್ರಾಲ್ ಪುತ್ತೂರು ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರದ ವಾರ್ಷಿಕ ಮಹಾಸಭೆ ನೂತನ ಪದಾಧಿಕಾರಿಗಳ ಪದಗ್ರಹಣ.
ಜೂನ್ 04, 2024
0
ಮೊಗ್ರಾಲ್ ಪುತ್ತೂರು
ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರದ ವಾರ್ಷಿಕ ಮಹಾಸಭೆ ನೂತನ ಪದಾಧಿಕಾರಿಗಳ ಪದಗ್ರಹಣ.
ಮೊಗ್ರಾಲ್ ಪುತ್ತೂರು:
ಶ್ರೀ ಚಾಮುಂಡೇಶ್ವರಿ ಭಜನಾ ಮಂದಿರದ ವಾರ್ಷಿಕ ಮಹಾಸಭೆಯು ಮಂದಿರದ ವಠಾರದಲ್ಲಿ ನಡೆಯಿತು. ಆಡಳಿತ ಸಮಿತಿಯ ಅಧ್ಯಕ್ಷರಾದ ವಿಶ್ವನಾಥ ದೊಡ್ಡಹಿತ್ಲ್ ಅಧ್ಯಕ್ಷತೆ ವಹಿಸಿದರು. ಈ ಸಂದರ್ಭದಲ್ಲಿ ಮುಂದಿನ ವರ್ಷಕ್ಕೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಧರ ನಡುಹಿತ್ಲ್, ಉಪಾಧ್ಯಕ್ಷರಾಗಿ ಹರೀಶ್ ಅಮ್ಮ್ಚಿಕೆರೆ, ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಾಜ ಅರಣಗುಡ್ಡೆ, ಕಾರ್ಯದರ್ಶಿಯಾಗಿ ಶ್ರೀ ಗುರುಪ್ರಸಾದ್ ಅಮ್ಮ್ಚಿ ಕೆರೆ, ಖಜಾoಜಿಯಾಗಿ ಶ್ರೀ ಶರತ್ ದೊಡ್ಡಹಿತ್ಲ್, ಲೆಕ್ಕ ಪರಿಶೋಧಕರಾಗಿ ಶ್ರೀ ಜನಾರ್ಧನ ನಡುಹಿತ್ಲ್, ಹಾಗೂ ಸದಸ್ಯರಾಗಿ ಹಲವು ಮಂದಿ ಆಯ್ಕೆಯಾದರು.