ವರ್ಕಾಡಿ ಪಾತೂರಿನ ಯುವಕ ಪುತ್ತೂರಿನಲ್ಲಿ ಬುಲೆಟ್ ಅಪಘಾತದಲ್ಲಿ ಮೃತ್ಯು.
ಏಪ್ರಿಲ್ 29, 2025
0
ವರ್ಕಾಡಿ ಪಾತೂರಿನ ಯುವಕ ಪುತ್ತೂರಿನಲ್ಲಿ ಬುಲೆಟ್ ಅಪಘಾತದಲ್ಲಿ ಮೃತ್ಯು.
ಮಂಜೇಶ್ವರ : ಇಲ್ಲಿನ ವರ್ಕಾಡಿ ಪಾತೂರು ಬದಿಮಲೆ ನಿವಾಸಿ ಮೊಯ್ದಿನ್ ಕುಂಞಯವರ ಪುತ್ರ ಅಶ್ರಫ್(25) ಪುತ್ತೂರಿನ ಮಾಡನ್ನೂರು ಎಂಬಲ್ಲಿ ಬೈಕ್ ಅಪಘಾತ ಒಂದರಲ್ಲಿ ಮೃತಪಟ್ಟಿದ್ದಾನೆ. ಇಂದು ಬೆಳಿಗ್ಗೆ ಪಾತೂರಿನಿಂದ ಈತ ದ್ವಿಚಕ್ರ ವಾಹನದಲ್ಲಿ ತೆರಳಿದ್ದು, ಕೆ ಎಸ್ ಆರ್ ಟಿ ಸಿ ಬಸ್ ಓವರ್ ಟೆಕ್ ಮಾಡುವ ಸಂದರ್ಭದಲ್ಲಿ ಅಪಘಾತ ಸಂಭವಿಸಿದೆ. ಮೃತ ಅಶ್ರಫ್ ರವರ ತಂದೆ ಮೋಯ್ದಿನ್ ಕುಂಞಯವರು ಇದೀಗ ಪೆರ್ಲದಲ್ಲಿ ವಾಸವಾಗಿದ್ದಾರೆ.